ಬರ್ಮಾ ಅಡಿಕೆ ಈಗ ಸಣ್ಣ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈಚೆಗೆ ಒಂದು ತಿಂಗಳಲ್ಲಿ ಮೂರು ಅಕ್ರಮ ಅಡಿಕೆ ಸಾಗಾಟದ ಪ್ರಕರಣಗಳಲ್ಲೂ ಕಡಿಮೆ ಪ್ರಮಾಣದ ಅಡಿಕೆ ಸಾಗಾಟವಾಗುತ್ತಿತ್ತು. ಗುರುವಾರ ಮಿಜೋರಾಂ ಪೊಲೀಸರೊಂದಿಗೆ ಅಸ್ಸಾಂ ರೈಫಲ್ಸ್ ಲಾಂಗ್ಟೈ ಜಿಲ್ಲೆಯಲ್ಲಿ ಅಡಿಕೆ ಕಳ್ಳಸಾಗಣೆ ಪ್ರಯತ್ನವನ್ನು ಪತ್ತೆ ಮಾಡಿದ್ದಾರೆ. ಪ್ರಕರಣದಲ್ಲಿ ಇಬ್ಬರು ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ್ದಾರೆ. ಈ ವೇಳೆ 45 ಚೀಲಗಳಲ್ಲಿ ಪ್ಯಾಕ್ ಮಾಡಲಾದ 4.4 ಟನ್ ಅಡಿಕೆ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಗಳಲ್ಲಿ ನಡೆಸಿದ ಶೋಧದಲ್ಲಿ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ಕಳೆದ ಮೂರು ಪ್ರಕರಣದಲ್ಲಿ ಕೂಡಾ 50 ಚೀಲದ ಒಳಗಿನ ಅಡಿಕೆ ನಿರಂತರವಾಗಿ ಕಳ್ಳ ಸಾಗಾಟ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಅಕ್ರಮವಾಗಿ ಅಡಿಕೆ ಸಾಗಾಟವಾಗದಂತೆ ಎಚ್ಚರ ವಹಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

