ರಬ್ಬರ್ ಕೃಷಿಯನ್ನು ವಿಸ್ತರಿಸಲು ಮಿಜೋರಾಂ ಸರ್ಕಾರ ನಿರ್ಧಾರ | ದೇಶದಲ್ಲಿ ರಬ್ಬರ್‌ ಧಾರಣೆ ಸ್ಥಿರತೆಗೆ ಅನುಕೂಲವೇ ?

August 27, 2025
9:14 PM

ಮಿಜೋರಾಂ ಸರ್ಕಾರವು ರಬ್ಬರ್ ಮಿಷನ್ – 2 ನೇ ಹಂತವನ್ನು ಕೈಗೊಳ್ಳಲಿದೆ. ಇನ್ನಷ್ಟು ಪ್ರದೇಶದಲ್ಲಿ ರಬ್ಬರ್‌ ಬೆಳೆ ವಿಸ್ತರಿಸಲು ನಿರ್ಧರಿಸಿದೆ.

ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅವರು  ಮಿಜೋರಾಂ ರಬ್ಬರ್ ಸೊಸೈಟಿ ಪ್ರಮುಖರೊಂದಿಗೆ ಸಭೆ ನಡೆಸಿ, ರಬ್ಬರ್ ಮಿಷನ್ ಅನ್ನು ಹೆಚ್ಚುವರಿಯಾಗಿ 173 ಹೆಕ್ಟೇರ್‌ಗಳಷ್ಟು ವಿಸ್ತರಿಸುವ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ.  ರಬ್ಬರ್ ಕೃಷಿ ವಿಸ್ತರಣೆ ಮಾಡುವುದರಿಂದ  ರಬ್ಬರ್ ಬೆಳೆಗಾರರ ​​ಬದುಕು ಸುಧಾರಿಸುತ್ತದೆ ಎಂದು ಅವರು ಹೇಳಿದರು. ಮಿಜೋರಾಂನ ಮಾಮಿತ್ ಜಿಲ್ಲೆಯ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಉದ್ದೇಶಿತ ಚಟುವಟಿಕೆಗಳ ಕುರಿತು ರಬ್ಬರ್‌ ಸೊಸೈಟಿ ಅಧ್ಯಕ್ಷ ಹ್ರಾಂಗ್ಜುವಾಲಾ ವರದಿಯನ್ನು ಸಲ್ಲಿಸಿದರು. ಮಿಜೋರಾಂ ರಬ್ಬರ್ ಬೆಳೆಗಾರರು ಈ ಮಿಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೆಚ್ಚಿನ ಭಾಗವಹಿಸುವಿಕೆಯಲ್ಲಿ ಆಸಕ್ತಿ ತೋರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ…. 

ಮಿಜೋರಾಂ ಸರ್ಕಾರದ ಈ ಪ್ರಮುಖ ಯೋಜನೆಯ ಅಡಿಯಲ್ಲಿ, ಎರಡನೇ ಹಂತದಲ್ಲಿ 800 ಹೆಕ್ಟೇರ್ ರಬ್ಬರ್‌ ತೋಟದ ಗುರಿ ಇರಿಸಿಕೊಳ್ಳಲಾಗಿತ್ತು. ಈಗ  ಅದನ್ನು ಹೆಚ್ಚುವರಿಯಾಗಿ 400 ಹೆಕ್ಟೇರ್‌ಗಳಷ್ಟು ಹೆಚ್ಚಿಸಲಾಯಿತು. ರಬ್ಬರ್‌ ಬೆಳೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ಸಬ್ಸಿಡಿಯ ಬೆಂಬಲದೊಂದಿಗೆ 100 ರಬ್ಬರ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದ್ದರು.

ಮಿಜೋರಾಂನಲ್ಲಿ ಒಟ್ಟು  2,400 ಹೆಕ್ಟೇರ್‌ಗಳನ್ನು ರಬ್ಬರ್ ತೋಟಕ್ಕಾಗಿ ಮೀಸಲಿಡಲಾಗಿದೆ. ಈ 2,400 ಹೆಕ್ಟೇರ್‌ಗಳಲ್ಲಿ, 1,200 ಹೆಕ್ಟೇರ್‌ಗಳಿಗಿಂತ ಹೆಚ್ಚು ಭೂಮಿಯನ್ನು ನಬಾರ್ಡ್‌ನ ಹಣಕಾಸಿನ ಬೆಂಬಲದೊಂದಿಗೆ ಕಾರ್ಯಗತಗೊಳಿಸಲಾಗುವುದು, ಉಳಿದ ಪ್ರದೇಶವನ್ನು ‘ಬನಾ ಕೈಹ್’ ಯೋಜನೆಯಡಿಯಲ್ಲಿ ಒಳಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಈಚೆಗೆ ರಬ್ಬರ್‌ ಬೆಳೆ ವಿಸ್ತರಣೆಯ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ರಬ್ಬರ್‌ ವಿಸ್ತರಣೆಯ ಜೊತೆಗೆ ಉತ್ತಮ ಇಳುವರಿಯೂ ಸಾಧ್ಯವಾದರೆ ಭವಿಷ್ಯದಲ್ಲಿ ದೇಶದ ರಬ್ಬರ್‌  ಮಾರುಕಟ್ಟೆ ಸ್ಥಿರತೆ ಸಾಧ್ಯವಾಗಬಹುದು ಎನ್ನುವುದು ಇಲಾಖೆಗಳ ಅಭಿಪ್ರಾಯ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ
September 19, 2026
12:06 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror