ಕೃಷಿಕರನ್ನು ಸರ್ಕಾರಗಳು ಹೇಗೆ ಯಾಮಾರಿಸುತ್ತವೆ…? | ಅಡಿಕೆ ಹಳದಿ ಎಲೆರೋಗ ಇಸ್ರೇಲ್‌ಗೆ ಸೋಗೆ ಕಳುಹಿಸಿದ ಎಲೆ ಪ್ರಸ್ತಾಪವೇ ಇಲ್ಲ…! |

February 13, 2024
10:14 PM
ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕಿ ರೋಗದ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೃಷಿಕರನ್ನು ಸರ್ಕಾರಗಳು ಹೇಗೆಲ್ಲಾ ಯಾಮಾರಿಸುತ್ತವೆ..? ಅದಕ್ಕೊಂದು ಉದಾಹರಣೆ ಇಲ್ಲಿದೆ ಗಮನಿಸಿ. ಅಡಿಕೆ ಹಳದಿ ಎಲೆರೋಗದ ಸೋಗೆಯನ್ನು ಇಸ್ರೇಲ್‌ಗೆ ಕಳುಹಿಸಿ ಪರಿಹಾರದ ಬಗ್ಗೆ ಅಧ್ಯಯನ ನಡೆಸುವುದಾಗಿ ಕಳೆದ ಬಾರಿ ಸಚಿವರು ಹೇಳಿದ್ದರು. ಈ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ವಿಧಾನ ಪರಿಷತ್‌ ಸದಸ್ಯರು ಕೇಳಿದ ಪ್ರಶ್ನೆಯಲ್ಲಿ ಇದರ ಉಲ್ಲೇಖವೇ ಇಲ್ಲ…!. ಹಾಗಿದ್ದರೆ ಅಂದು ಸಚಿವರು ಹೇಳಿದ್ದೇನು? ಈ ಬಗ್ಗೆ ಏನು ಬೆಳವಣಿಗೆ ಎಂಬ ಮಾಹಿತಿಯೂ ಇಲ್ಲ..!.

Advertisement

ಅಡಿಕೆ ಬೆಳೆಗಾರರಿಗೆ ಕಾಡುವ ಸಮಸ್ಯೆ ಎಲೆಚುಕ್ಕಿ ರೋಗ ಹಾಗೂ ಹಳದಿ ಎಲೆರೋಗ. ಅಡಿಕೆ ಹಳದಿ ಎಲೆರೋಗ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಉತ್ತರಕನ್ನಡ, ಶೃಂಗೇರಿ ಮೊದಲಾದ ಕಡೆ ಇದೆ. ಆಗಾಗ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡಿ ಸಂತೈಸಿ ಪರಿಹಾರ ಕ್ರಮದ ಭರವಸೆ ನೀಡುತ್ತಾರೆ. ಕಳೆದ ಬಾರಿ ಎಲೆಚುಕ್ಕಿ ರೋಗ, ಅಡಿಕೆ ಹಳದಿ ಎಲೆರೋಗದ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಆರಂಭವಾದಾಗ ಸರ್ಕಾರದ ಗಮನಕ್ಕೆ ಬಂದಾಗ ತೋಟಗಾರಿಕಾ ಸಚಿವರು ಭೇಟಿ ನೀಡಿದರು. ರೈತರನ್ನು ಸಂತೈಸಿ ಸಮಸ್ಯೆಯನ್ನು ಮುಂದೂಡಿದರು..!. ತೋಟಗಳಿಗೆ ಭೇಟಿ ನೀಡಿ, ಶೀಘ್ರವೇ ಪರಿಹಾರದ ಭರವಸೆ ನೀಡಿ, ಅಡಿಕೆ ಮರದ ಸೋಗೆಯನ್ನು ಇಸ್ರೇಲ್‌ಗೆ ಕಳುಹಿಸಿ ಅಧ್ಯಯನ ನಡೆಸಿ ಸೂಕ್ತ ಕ್ರಮದ ಭರವಸೆಯನ್ನು ನೀಡಿದ್ದರು. ಅದಾಗಿ ಹೊಸ ಸರ್ಕಾರ ಬಂದಾಗ, ಶೀಘ್ರವೇ ಪರಿಹಾರದ ಭರವಸೆಯನ್ನು ಕೃಷಿ ಸಚಿವರು ಹೇಳಿದರು. ರೈತ ಪರವಾದ ಹೇಳಿಕೆ ನೀಡಿ, ಸದ್ಯದಲ್ಲೇ ಸೂಕ್ತ ಕ್ರಮ ಎಂದರು..!.

ಪ್ರತಾಪ್‌ ಸಿಂಹ ನಾಯಕ್

ಇದೀಗ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ಅವರು ಅಡಿಕೆ ಹಳದಿ ಎಲೆರೋಗ , ಎಲೆಚುಕ್ಕಿ ರೋಗದ ಬಗ್ಗೆ ಹಾಗೂ ಇದರಿಂದ ರೈತರಿಗೆ ಉಂಟಾದ ಆರ್ಥಿಕ ನಷ್ಟದ ಬಗ್ಗೆ ಅಧಿವೇಶನದಲ್ಲಿ ಸರ್ಕಾರವನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕಾ ಸಚಿವರು, ಅಡಿಕೆ ಎಲೆಚುಕ್ಕಿ ರೋಗದಿಂದ 53977 ಹೆಕ್ಟೇರ್‌ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಬಾಧಿಸಿದ್ದು 11,0181 ಲಕ್ಷ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ, ಅಡಿಕೆ ಹಳದಿ ಎಲೆರೋಗದಿಂದ 13767 ಹೆಕ್ಟೇರ್‌ ಪ್ರದೇಶದಲ್ಲಿ ಹಳದಿ ಎಲೆರೋಗ ಬಾಧಿಸಿದ್ದು 56233 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಉತ್ತರಿಸಿದ್ದಾರೆ.

ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ ನಿಯಂತ್ರಣಕ್ಕೆ ಸರ್ಕಾರವು ಕೈಗೊಂಡಿರುವ ವೈಜ್ಞಾನಿಕ ಕ್ರಮಗಳ ಬಗ್ಗೆಯೂ ಕೇಳಿದ ಪ್ರಶ್ನೆಯಲ್ಲಿ ಹಲವು ಪರಿಹಾರ ಕ್ರಮಗಳ ಬಗ್ಗೆ , ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಆದರೆ ಇಸ್ರೇಲ್‌ ಗೆ ಅಡಿಕೆ ಮರದ ಸೋಗೆ ಕಳುಹಿಸಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಈಗಾಗಲೇ ನಷ್ಟ ಉಂಟಾಗಿರುವ ರೈತರಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಾಪ್‌ ಸಿಂಹ ನಾಯಕ್‌ ಒತ್ತಾಯಿಸಿದ್ದಾರೆ.

‌MLC Pratap Singha Naik questioned the government in the session about Arecanut yellow leaf disease and leaf spot disease and due to this financial loss caused to the farmers.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏಪ್ರಿಲ್ 2 ಕೆಲವು ವಿಶೇಷ ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿ
April 2, 2025
6:18 AM
by: ದ ರೂರಲ್ ಮಿರರ್.ಕಾಂ
ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group