ಬೆಳ್ಳಿಪ್ಪಾಡಿ ಬಿ ಎಸ್ ಎನ್ ಎಲ್ ಟವರ್ ಗೆ ಸಂಬಂಧಿಸಿ ಮೈಕ್ರೋ ಗೆ ಹೋಗುವ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲು ಲೈನ್ ತೆರವು ಮಾಡುವ ಸೇವಾ ಕಾರ್ಯ ನಡೆಯಿತು. ಸ್ಥಳೀಯ ಶಕ್ತಿ ಯುವಕ ಮಂಡಲ ಬೆಳ್ಳಿಪ್ಪಾಡಿ ಮತ್ತು ಹಿಂದೂ ಐಕ್ಯ ವೇದಿ ಬೆಳ್ಳಿಪ್ಪಾಡಿ ಘಟಕದ ವತಿಯಿಂದ ಸೇವಾಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯ ಪವರ್ ಮ್ಯಾನ್ , ಬಿ ಎಸ್ ಎನ್ ಎಲ್ ಉದ್ಯೋಗಿಗಳು , ಶಕ್ತಿ ಯುವಕ ಮಂಡಲ ಹಾಗೂ ಹಿಂದೂ ಐಕ್ಯ ವೇದಿ ಬೆಳ್ಳಿಪ್ಪಾಡಿ ಯ ಅಧ್ಯಕ್ಷರು ಮತ್ತು ಸರ್ವಸದಸ್ಯರು ಭಾಗವಹಿಸಿದರು. ಇದೇ ಸಂದರ್ಭ BSNL ಗೆ ಸಂಬಂಧಿಸಿ ಅಧಿಕಾರಿಗಳು ಆದಷ್ಟು ಬೇಗ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಲಾಯಿತು.
ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ , ವಿದ್ಯುತ್ ಸಮಸ್ಯೆ ಇದ್ದರೂ ಯುವಕ ಸಂಘಟನೆಗಳು ಸಕ್ರಿಯವಾಗಿ ಇಲಾಖೆಗಳ ಜೊತೆಗೆ ಸಹಕರಿಸುತ್ತಾ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಇಲಾಖೆಗಳು ಮಾತ್ರಾ ಸೇವೆ ಒದಗಿಸುವಲ್ಲಿ ವಿಳಂಬ ಮಾಡುತ್ತಿರುವುದು ಅಷ್ಟೇ ವಿಷಾದವಾಗಿದೆ.
ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…
ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…
ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…
2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…