ಪಾಲಿಹೌಸ್‌ನೊಳಗೆ ವಿದೇಶಿ ಸೌತೆ ಬೆಳೆದ ಮಾದರಿ ಕೃಷಿಕ | ಕಡಿಮೆ ಖರ್ಚಿನಲ್ಲಿ ಮಂಡ್ಯದಲ್ಲಿ ಇಂಗ್ಲಿಷ್‌ ಸೌತೆ

July 2, 2024
11:38 AM

ರೈತರು(Farmer) ಒಂದೇ ಕೃಷಿಗೆ(agriculture) ಒಗ್ಗಿಕೊಳ್ಳದೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ(Crop) ಬಗ್ಗೆ ಪ್ರಯೋಗ(Experiment) ಮಾಡುವುದು ಮಾಮೂಲು. ಈ ಪ್ರಯತ್ನದಲ್ಲಿ ಕೆಲವೊಮ್ಮ ಯಶಸ್ಸು ದೊರೆತರೆ, ಕೆಲವೊಮ್ಮೆ ಭೂಮಿ ತಾಯಿ ಕೈ ಕೊಡುತ್ತಾಳೆ. ಆದರೆ ಇಲ್ಲೊಬ್ಬ ರೈತರ ಪರಿಶ್ರಮಕ್ಕೆ ತಕ್ಕ ಫಲ ನೀಡಿದ್ದಾಳೆ. ಪಾಲಿಹೌಸ್(Polyhouse) ನಲ್ಲಿ ಬೇಸಾಯ ಮಾಡೋವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ಇವರು ಇನ್ನೊಬ್ಬರ ಜಮೀನು ಗುತ್ತಿಗೆ ಪಡೆದು ಪರದೆಯೊಳಗೆ ಪರದೇಶಿ (ಇಂಗ್ಲೀಷ್) ಸೌತೆಕಾಯಿ (Cucumber) ಬೆಳೆದು ಇತರ ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ‌. 

Advertisement

ಏನಿದು ಇಂಗ್ಲೀಷ್‌ ಸೌತೆ? : ಮಂಡ್ಯದ ಶ್ರೀರಂಗಪಟ್ಟಣದ ಬೊಮ್ಮೂರು ಅಗ್ರಹಾರದಲ್ಲಿ ಇಂತಹದ್ದೊಂದು ಪರದೆಯೊಳಗೆ ಪರದೇಶಿ ಸೌತೆ ನೋಡಬಹುದಾಗಿದೆ. ಹೈದರಾಬಾದ್ ಮೂಲದ, ಸದ್ಯ ಮೈಸೂರಿನಲ್ಲಿ ನೆಲೆಸಿರುವ ರಾಜಕುಮಾರ್ ಚೌಹಾಣ್ ಎಂಬ ವ್ಯಕ್ತಿ ಶ್ರೀರಂಗಪಟ್ಟಣದ ಬೊಮ್ಮೂರು ಅಗ್ರಹಾರದ ಬಳಿ ಕಾವೇರಿ ನದಿ ದಂಡೆಯಲ್ಲಿ ಎರಡು ಎಕರೆ ಜಮೀನು ಗುತ್ತಿಗೆ ಪಡೆದು ಹನಿ ನೀರಾವರಿ ಪದ್ಧತಿಯಲ್ಲಿ ಇಂಗ್ಲೀಷ್ ಸೌತೆ ಬೆಳೆದಿದ್ದಾರೆ.

ಏನೆಲ್ಲ ಲಾಭ? : ಇನ್ನು ಈ ಇಂಗ್ಲಿಷ್ ಸೌತೆಗೆ ರಾಜ್ಯ ಸೇರಿದಂತೆ ಕೇರಳದಲ್ಲಿ ಬಹು ಬೇಡಿಕೆ ಇದೆ. ಅಲ್ಲದೆ ಈ ರೀತಿ ಪರದೆ ಪದ್ಧತಿಯಲ್ಲಿ ಸೌತೆ ಬೆಳೆದರೆ ಕೀಟಗಳ ಹಾವಳಿ ತೀರಾ ಕಡಿಮೆ. ಬಿಸಿ ಗಾಳಿ ಮತ್ತು ರಭಸದ ಮಳೆಯಿಂದ ಬೆಳೆಗೆ ರಕ್ಷಣೆ ಸಿಗುತ್ತದೆ. ತೇವಾಂಶ ಬೇಗ ನಶಿಸುವುದಿಲ್ಲ. ಪಾಲಿಹೌಸ್ (ಗ್ರೀನ್ ಹೌಸ್) ಪದ್ಧತಿಗಿಂತ ನೆಟ್ ಹೌಸ್ (ಬಲೆ ಮನೆ) ಪದ್ದತಿಯಲ್ಲಿ ಖರ್ಚು ಕಡಿಮೆ. ಇನ್ನು ಪಾಲಿಹೌಸ್ ಖರ್ಚಿನ ಅರ್ಧ ಹಣದಲ್ಲಿ ಪರದೆ ನಿರ್ಮಾಣ ಮಾಡಬಹುದು. ಪಾಲಿಹೌಸ್ ಒಳಗೆ ಹೆಚ್ಚು ಶಾಖ ಇದ್ದು, ಅದು ಯೂರೋಪಿನ ಹವಾಗುಣಕ್ಕೆ ಸೂಕ್ತ. ಆದರೆ ಇಲ್ಲಿನ ವಾತಾವರಣಕ್ಕೆ ಅದು ಅಷ್ಟಾಗಿ ಹೊಂದಿಕೊಳ್ಳುವುದಿಲ್ಲ. ಬಿಸಿ ವಾತಾವರಣದಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಾರೆ.

ಬಲೆ ಪದ್ಧತಿಯಲ್ಲಿ ಒಂದು ಬಾರಿ ಬಲೆ ಅಳವಡಿಸಿದರೆ 5 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಹಾಗಾಗಿ ಪಾಲಿಹೌಸ್‌ಗಿಂತ ನೆಟ್ ಹೌಸ್ ಪದ್ಧತಿಯಲ್ಲಿ ಖರ್ಚು ಕಡಿಮೆ, ಲಾಭ ಜಾಸ್ತಿ ಎನ್ನುವುದು ತಳಿ ವಿಜ್ಞಾನಿಯೂ ಆಗಿರುವ ಕಾವೇರಿ ಕನ್ಯಾ ಗುರುಕುಲದ ಮುಖ್ಯಸ್ಥ ಡಾ.ಕೆ.ಕೆ. ಸುಬ್ರಮಣಿ ಅವರ ಮಾತು. ಸದ್ಯ ರೈತ ರಾಜ್ ಕುಮಾರ್ ನಾಟಿ ಮಾಡಿದ 30 ದಿನಗಳಲ್ಲಿ ಫಸಲನ್ನ ಕೂಡ ಪಡೆದುಕೊಂಡಿದ್ದಾರೆ. ಪರದೆ ಪದ್ದತಿಯಲ್ಲಿ ಬೇಸಾಯ ಮಾಡಿದ್ರೆ ಹೆಚ್ಚು ಆದಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |
April 4, 2025
4:45 PM
by: The Rural Mirror ಸುದ್ದಿಜಾಲ
ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ
April 4, 2025
2:24 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |
April 4, 2025
1:10 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ
April 4, 2025
8:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror

Join Our Group