ಪರಿಸರ ಶಾಲೆ | ಮಕ್ಕಳಿಗೆ ಪಾಠದ ಅಂಕದಷ್ಟೇ ಪರಿಸರ ಕಾಳಜಿಯೂ ಅಗತ್ಯ | ಪುತ್ತೂರಿನ ಈ ಪ್ಲೇ ಸ್ಕೂಲ್‌ ಮಾದರಿ ಏಕೆ..?

April 6, 2024
2:11 PM
ಹಲವು ಶಾಲೆಗಳು ಇಂದು ಇವೆ. ಮಾನವೀಯ ಮೌಲ್ಯಗಳನ್ನು ತಿಳಿಸುವ, ಬೆಳೆಸುವ ಕೆಲಸ, ಪರಿಸರ ಪೂರಕ ಕೆಲಸ ಎಳವೆಯಲ್ಲಿಯೇ ನಡೆಯಬೇಕಿದೆ. ಇದು ಮಕ್ಕಳ ಭವಿಷ್ಯದ ಅಡಿಪಾಯ. ಈ ಅಡಿಪಾಯ ಹಾಕುವ ಕೆಲಸ ಇಲ್ಲಿ ನಡೆಯುತ್ತಿದೆ...

ಒಂದು ಪ್ಲೇ ಸ್ಕೂಲ್.‌ ಕಳೆದ 17 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳಿಗೆ ಪರಿಸರದ ಬಗ್ಗೆ, ದೇಶದ ಬಗ್ಗೆ, ಸ್ವಾವಲಂಬನೆಯ ಬಗ್ಗೆ ಪಾಠ ಮಾಡುತ್ತಿದೆ ಈ ಪ್ಲೇ ಸ್ಕೂಲ್.‌ ಅಷ್ಟೇ ಅಲ್ಲ ಪ್ರತೀ ಮಗುವಿನ ಪೈಲ್‌ ರಚನೆ ಮಾಡಿ ಪೋಷಕರಿಗೆ ನೀಡಲಾಗುತ್ತಿದೆ. ಮಗುವಿನ ಆಸಕ್ತಿಯ ಮೇಲೆ ಪೋಷಕರಿಗೂ ಮಕ್ಕಳನ್ನು ಬೆಳೆಸಲು ಸಾಧ್ಯವಿದೆ. ಈ ಪ್ಲೇ ಸ್ಕೂಲ್‌ ನಡೆಸುತ್ತಿರುವವರು ಪ್ರತಿಮಾ ಹೆಗ್ಡೆ. 

Advertisement

ಪುತ್ತೂರಿನ ಬೈಪಾಸ್‌ ಬಳಿಯಲ್ಲಿ ಬಾಲವನಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿದೆ ಈ ಪ್ಲೇ ಸ್ಕೂಲ್.‌ ಲಿಟ್ಲ್‌ ಏಂಜೆಲ್ಸ್‌ ಎನ್ನುವ ಹೆಸರಿನ ಪ್ಲೇ ಸ್ಕೂಲ್‌ 17 ವರ್ಷಗಳಿಂದ ಪುತ್ತೂರಿನಲ್ಲಿ ಚಟುವಟಿಕೆ ನಡೆಸುತ್ತಿದೆ. ಪ್ರತೀ ವರ್ಷ ಸರಾಸರಿ 15 ಪುಟ್ಟ ಮಕ್ಕಳು ಇಲ್ಲಿಗೆ ಬರುತ್ತಾರೆ. ಭಾರೀ ಅಬ್ಬರದ ಪ್ರಚಾರ ಇಲ್ಲದೆ, ಸದ್ದು ಗದ್ದಲ ಇಲ್ಲದೆ ಈ ಶಾಲೆಯನ್ನು ಮಿಸ್‌ ಆಂಟಿಯಾಗಿ ಬೆಳೆಸುತ್ತಿದ್ದಾರೆ ಪ್ರತಿಮಾ ಹೆಗ್ಡೆ.

ಪ್ರತಿಮಾ ಹೆಗ್ಡೆ

ಸಮಾಜದಲ್ಲಿ ಹಲವಾರು ಶಾಲೆಗಳು ಇವೆ. ವಿವಿಧ ತರಬೇತಿ ಸಂಸ್ಥೆಗಳೂ ಇವೆ. ಆದರೆ ಮಾನವೀಯ ಮೌಲ್ಯಗಳನ್ನು ತಿಳಿಸುವ, ಬೆಳೆಸುವ ಕೆಲಸ, ಪರಿಸರ ಪೂರಕ ಕೆಲಸ ಎಳವೆಯಲ್ಲಿಯೇ ನಡೆಯಬೇಕಿದೆ. ಇದು ಮಕ್ಕಳ ಭವಿಷ್ಯದ ಅಡಿಪಾಯ. ಈ ದೇಶದ ಅಡಿಪಾಯವೂ ಹೌದು. ಈ ಅಡಿಪಾಯ ಹಾಕುವ ಕೆಲಸ ಇಲ್ಲಿ ಪುತ್ತೂರಿನ ಲಿಟ್ಲ್‌ ಏಂಜೆಲ್ಸ್‌ನಲ್ಲಿ ನಡೆಯುತ್ತಿದೆ. ಇಂದು ನೀರಿಲ್ಲದೆ ಕಂಗಾಲಾದ ಪರಿಸ್ಥಿತಿ ಇದೆ, ಪ್ರಾಣಿಗಳು ಫೋಟೋದಲ್ಲಿ ಮಾತ್ರವೇ ಕಾಣುತ್ತಿದೆ, ಕಾಡು ನಾಶವಾಗಿದೆ.. ಇಂತಹದರ ನಡುವೆ ಭವಿಷ್ಯದಲ್ಲಿ ಈ ಬಗ್ಗೆಯೂ ಕಾಳಜಿ ಬೆಳೆಯಬೇಕಾದರೆ ಮಕ್ಕಳಿಂದ ಮಾತ್ರವೇ ಸಾಧ್ಯ. ಯಾರೂ ನಡೆಯದ ಹಾದಿಯಲ್ಲಿ ಸಾಗುವ ಕೆಲಸ ಇಲ್ಲಿ ಮಾಡುತ್ತಿದ್ದಾರೆ ಪ್ರತಿಮಾ ಹೆಗ್ಡೆ.

ಇಲ್ಲಿ ಪರಿಸರದ ಪಾಠವಂತೂ ಮಕ್ಕಳು ಬಹಳ ಇಷ್ಟಪಡುತ್ತಾರೆ.ಕೇವಲ ಶೈಕ್ಷಣಿಕ ಅಂಕವಷ್ಟೇ ಮಕ್ಕಳ ಬದುಕಲ್ಲ, ಪ್ರತೀ ಮಗು ಕೂಡಾ ಇಂದು ಪ್ರತಿಭಾನ್ವಿತ ಮಗುವಾಗಿದೆ. ಕೆಲವು ಮಕ್ಕಳು ಪಾಠದಲ್ಲಿ ಇದ್ದರೆ, ಇನ್ನೂ ಕೆಲವು ಮಕ್ಕಳು ಬೇರೆಯದೇ ಕ್ಷೇತ್ರದಲ್ಲಿ ಪ್ರತಿಭಾನ್ವಿತರಾಗಿರುತ್ತಾರೆ. ಅವರ ಆಸಕ್ತಿಯನ್ನು ಗುರುತಿಸಿ ಪೋಷಕರು ಬೆಳೆಸಬೇಕು ಎನ್ನವ ಪ್ರತಿಮಾ ಹೆಗ್ಡೆ ಅವರು ಅವರ ಶಾಲೆಗೆ ಬರುವ ಮಗುವಿನ ಆಸಕ್ತಿಯನ್ನು ದಾಖಲಿಸುತ್ತಾ ಪೈಲ್‌ ಮಾಡಿ ವರ್ಷದ ಕೊನೆಗೆ ಪೋಷಕರಿಗೆ ನೀಡುತ್ತಾರೆ. ಈ ಮೂಲಕ ಮಗುವಿನ ಆಸಕ್ತಿಯೂ ಪೋಷಕರಿಗೆ ತಿಳಿಯುತ್ತದೆ, ಮಕ್ಕಳಗಿಗೂ ಆಸಕ್ತಿಯನ್ನು ಹೊರಹಾಕುವ ವೇದಿಕೆಯೂ ಆಗುತ್ತದೆ. ಈ ಮೂಲಕ ಸಮಾಜವನ್ನು ಕಟ್ಟುವ, ದೇಶವನ್ನು ಕಟ್ಟುವ ಕೆಲಸವನ್ನು ಲಿಟ್ಲ್‌ ಏಂಜೆಲ್ಸ್‌ ಪ್ಲೇ ಸ್ಕೂಲ್‌ ಮಾಡುತ್ತಿದೆ.

ದೇಶ ಕಟ್ಟುವ ಕೆಲಸ ಎಂದರೆ ರಚನಾತ್ಮಕ ಕೆಲಸ. ಅದರಲ್ಲಿ ಹೋರಾಟದ ಹೊರತಾಗಿ ರಚನಾತ್ಮಕವಾಗಿ ಕಟ್ಟಬೇಕಾದ ಹಲವು ಸಂಗತಿಗಳು ಇವೆ. ಇಲ್ಲೂ ಅದೇ ಕೆಲಸ ನಡೆಯುತ್ತಿದೆ. ಪರಿಸರದ ಬಗ್ಗೆ ಸಾಕಷ್ಟು ಹೋರಾಟಗಳು ನಡೆದರೂ, ಸ್ವಚ್ಛತೆಯ ಅರಿವು ಸಾಕಷ್ಟು ಮೂಡಿಸಿದರೂ ಸಮಾಜ ಬದಲಾಗಲಿಲ್ಲ. ಇಲ್ಲಿ ಮಕ್ಕಳ ಮೂಲಕ ಪರಿಸರ ಜಾಗೃತಿ, ಶಿಸ್ತು, ಸ್ವಚ್ಛತೆಯ ಅರಿವು ಮೂಡಿಸಿದರೆ ಮುಂದಿನ ಕೆಲವು ವರ್ಷಗಳಲ್ಲಿ ಬದಲಾವಣೆ ನಿಶ್ಚಿತ ಎನ್ನುವ ಅಭಿಪ್ರಾಯ ಪ್ರತಿಮಾ ಅವರದು. ಹೀಗಾಗಿ ಮಕ್ಕಳನ್ನು ದೇಶಕ್ಕೆ ಪೂರಕವಾಗಿ ಯೋಚಿಸುವ, ಕಟ್ಟುವ ಕೆಲಸವು ಸದ್ದಿಲ್ಲದೆ ಇಲ್ಲಿ ನಡೆಯುತ್ತದೆ. ಕಳೆದ 17 ವರ್ಷಗಳಿಂದ ಪರಿಸರ, ಸ್ವಚ್ಛತೆ, ಶಿಸ್ತು, ಆಟ.. ಹೀಗೇ ಎಲ್ಲಾ ಆಯಾಮಗಳಲ್ಲೂ ಮಕ್ಕಳನ್ನು ಕಟ್ಟಿದ್ದಾರೆ ಇಲ್ಲಿ.

ಶಾಲೆಗೆ ತೆರಳುವ ಮುನ್ನ ಈ ಪ್ಲೇ ಶಾಲೆಗೆ ಬರುವ ಮಕ್ಕಳನ್ನು ಪರಿಸರಕ್ಕೆ ಪೂರಕವಾಗಿ ಬೆಳೆಸಲಾಗುತ್ತಿದೆ. ಇದೇ ಸ್ಪಂದನೆಯು ಸಮಾಜದಿಂದ, ಪೋಷಕರಿಂದಲೂ ಬೇಕಾಗಿದೆ. ಈಚೆಗೆ ಮಕ್ಕಳಿಗೆ ಹಕ್ಕಿಗಳಿಗೆ ಬೇಸಗೆಯಲ್ಲಿ ಕುಡಿಯುವ ನೀರು ಇರಿಸುವ ಉದ್ದೇಶವನ್ನು ತಿಳಿಸಲಾಗಿತ್ತು. ಬಹಳ ಆಸಕ್ತಿಯಿಂದ ಮಕ್ಕಳು ಇದನ್ನು ಮಾಡಿದ್ದರು. ಇದು ಮುಂದೆಯೂ ನಡೆಯಬೇಕಾದರೆ ಸಮಾಜದ ಹಾಗೂ ಪೋಷಕರ ಪ್ರಭಾವವೂ ಅಷ್ಟೇ ಇದೆ. ಮಕ್ಕಳನ್ನು ಬೆಳೆಸುವ ದಾರಿಯನ್ನು ಹೇಳಿಕೊಡುವುದಷ್ಟೇ ಕೆಲಸ ಇಲ್ಲಿ ನಡೆಯುತ್ತದೆ. ಮುಂದಿನದು ಜವಾಬ್ದಾರಿ ಸಮಾಜದ್ದೂ ಇದೆ. ಇದಕ್ಕಾಗಿ ಈ ಪುಟ್ಟ ಪ್ರಯತ್ನ ಸಮಾಜಕ್ಕೂ ತಿಳಿದಿರಬೇಕು. ಮಕ್ಕಳಿಗೆ ಅಂಕವಷ್ಟೇ ಅಂತಿಮವಲ್ಲ, ಮಕ್ಕಳನ್ನು ಬೆಳೆಸಬೇಕಾದ ದಾರಿಗಳು ಹಲವು ಇದೆ. ಇದೆಲ್ಲವೂ ಪೋಷಕರು ತಿಳಿದಿರಬೇಕು ಎನ್ನುತ್ತಾರೆ ಪ್ರತಿಭಾ.….ವಿಡಿಯೋ ಇದೆ

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ
ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ
May 5, 2025
12:21 PM
by: The Rural Mirror ಸುದ್ದಿಜಾಲ
ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?
May 5, 2025
6:52 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group