ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಕೊನೆಯ ದಿನದ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ನಂಜನಗೂಡಿನ ದೇವಸ್ಥಾನದಲ್ಲಿ ಶ್ರೀಕಂಠೇಶ್ವರನ ದರ್ಶನ ಪಡೆದು ಚುನಾವಣಾ ಪ್ರಚಾರ ಮುಗಿಸಿದರು.
Advertisement
Advertisement
ನಂಜನಗೂಡಿನಲ್ಲಿ ಬಿಜೆಪಿ (BJP) ಬೃಹತ್ ಸಮಾವೇಶ ಮುಗಿಸಿ ನೇರವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರಿಗೆ ಮಂಗಳವಾದ್ಯಗಳೊಂದಿಗೆ ಭವ್ಯ ಸ್ವಾಗತ ಕೋರಲಾಯಿತು. ದೇವಸ್ಥಾನದ ಮುಖ್ಯ ಅರ್ಚಕರ ವೃಂದ ಪೂರ್ಣಕುಂಬ ಸ್ವಾಗತ ನೀಡಿ ಬರಮಾಡಿಕೊಂಡಿತು. ದೇವಾಲಯ ಪ್ರವೇಶಿಸಿ ಮೊದಲು ಮಹಾಗಣಪತಿ ದರ್ಶನ ಪಡೆದ ಪ್ರಧಾನಿ ಮೋದಿ, ಬಳಿಕ ಶ್ರೀಕಂಠೇಶ್ವರನ ಗರ್ಭಗುಡಿ ಪ್ರವೇಶಿಸಿದರು.
Advertisement
ನಂತರ ಲೋಕಕಲ್ಯಾಣಕ್ಕಾಗಿ ಶ್ರೀಕಂಠೇಶ್ವರನ ಮುಂದೆ ಸಂಕಲ್ಪ ಮಾಡಿದರು. ಅದಕ್ಕೂ ಮುನ್ನ ಗರ್ಭಗುಡಿಯಲ್ಲಿ ಕೆಲನಿಮಿಷ ಕುಳಿತು ಪ್ರಾರ್ಥಿಸಿದರು. ನಂತರ ಗರ್ಭಗುಡಿ ಪ್ರದಕ್ಷಿಣೆ ಹಾಕಿ, ಪಾರ್ವತಿ ದೇವಿ ದರ್ಶನ ಪಡೆದರು. ಬಳಿಕ ಚಂಡೀಕೇಶ್ವರ ಮತ್ತು ನಂದೀಕೇಶ್ವರ ದೇವರ ದರ್ಶನ ಪಡೆದು ಶ್ರೀಕಂಠೇಶ್ವರನ ಸನ್ನಿಧಿಯಿಂದ ಹೊರನಡೆದರು
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement