ಮೋದಿ ಸರ್ಕಾರ 3.0 ಅಸ್ತಿತ್ವಕ್ಕೆ | 30 ಸಂಪುಟ ಸಚಿವರು, 5 ಸ್ವತಂತ್ರ ನಿರ್ವಹಣೆ, 36 ರಾಜ್ಯಖಾತೆ ಸಚಿವರಿಂದ ಪ್ರಮಾಣ ಸ್ವೀಕಾರ |

June 10, 2024
11:49 AM
ಪ್ರಧಾನಿ ಮೋದಿ ಅವರ ಜೊತೆಗೆ 30 ಸಂಪುಟ​ ಸಚಿವರು, ಐವರು ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ರಾಜ್ಯ ಖಾತೆ ಸಚಿವರು ಪ್ರಮಾಣವಚನ ಸ್ವೀಕರಿಸಿದರು.

ಭಾನುವಾರ ರಾಷ್ಟ್ರಪತಿ ಭವನದಲ್ಲಿ(Rashtrapati Bhavana) ನಡೆದ ಅದ್ಧೂರಿ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ(Sworn) ಸ್ವೀಕರಿಸಿದರು. ಜವಾಹರಲಾಲ್​ ನೆಹರು(Jawahar Lal)ಅವರ ಬಳಿಕ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಎರಡನೇ ವ್ಯಕ್ತಿ ಎನ್ನುವ ದಾಖಲೆಯನ್ನು ಪ್ರಧಾನಿ ಮೋದಿ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆಗೆ 30 ಸಂಪುಟ​ ಸಚಿವರು, ಐವರು ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ರಾಜ್ಯ ಖಾತೆ ಸಚಿವರು ಸೇರಿ ಒಟ್ಟು 24 ರಾಜ್ಯಗಳ 71 ಸಂಸದರಿಗೆ ರಾಷ್ಟ್ರಪತಿ(Prasident) ದ್ರೌಪದಿ ಮುರ್ಮು(Droupadi Murmu) ಅವರು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸಿದವರು:

  • ರಾಜನಾಥ್ ಸಿಂಗ್
  • ಅಮಿತ್ ಶಾ
  • ನಿತಿನ್ ಜೈರಾಮ್ ಗಡ್ಕರಿ
  • ಜಗತ್ ಪ್ರಕಾಶ್ ನಡ್ಡಾ
  • ಶಿವರಾಜ್ ಸಿಂಗ್ ಚೌಹಾಣ್
  • ನಿರ್ಮಲಾ ಸೀತಾರಾಮನ್
  • ಸುಬ್ರಹ್ಮಣ್ಯಂ ಜೈಶಂಕರ್
  • ಮನೋಹರ್ ಲಾಲ್ ಖಟ್ಟರ್​
  • ಎಚ್ ಡಿ ಕುಮಾರಸ್ವಾಮಿ
  • ಪಿಯೂಷ್ ಗೋಯಲ್​
  • ಧರ್ಮೇಂದ್ರ ಪ್ರಧಾನ್
  • ಜಿತನ್ ರಾಮ್ ಮಾಂಝಿ
  • ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್
  • ಸರ್ಬಾನಂದ ಸೋನೋವಾಲ್
  • ವೀರೇಂದ್ರ ಕುಮಾರ್
  • ಕಿಂಜರಾಪುರ ರಾಮಮೋಹನ ನಾಯ್ಡು
  • ಪ್ರಲ್ಹಾದ್ ಜೋಶಿ
  • ಜುಯಲ್ ಓರಂ
  • ಗಿರಿರಾಜ್ ಸಿಂಗ್
  • ಅಶ್ವಿನಿ ವೈಷ್ಣವ್
  • ಜ್ಯೋತಿರಾದಿತ್ಯ ಎಂ. ಸಿಂಧಿಯಾ
  • ಭೂಪೇಂದರ್ ಯಾದವ್
  • ಗಜೇಂದ್ರ ಸಿಂಗ್ ಶೇಖಾವತ್
  • ಕಿರೆನ್ ರಿಜಿಜು
  • ಹರ್ದೀಪ್ ಸಿಂಗ್ ಪುರಿ
  • ಮನ್ಸುಖ್ ಮಾಂಡವಿಯಾ
  • ಜಿ ಕಿಶನ್ ರೆಡ್ಡಿ
  • ಚಿರಾಗ್ ಪಾಸ್ವಾನ್
  • ಸಿ ಆರ್ ಪಾಟೀಲ್ ಅವರು ಭಾನುವಾರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಸಚಿವರು( ಸ್ವತಂತ್ರ ನಿರ್ವಹಣೆ):

  1. ರಾವ್ ಇಂದರ್‌ಜಿತ್ ಸಿಂಗ್
  2. ಜಿತೇಂದ್ರ ಸಿಂಗ್
  3. ಅರ್ಜುನ್ ರಾಮ್ ಮೇಘವಾಲ್
  4. ಜಾಧವ್ ಪ್ರತಾಪ್ರಾವ್ ಗಣಪತ್ರಾವ್
  5. ಜಯಂತ್ ಚೌಧರಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಖಾತೆ ಸಚಿವರು: ರಾಜ್ಯ ಖಾತೆಯ ಸಚಿವರಾಗಿ ಜಿತಿನ್ ಪ್ರಸಾದ, ಶ್ರೀಪಾದ್ ಯೆಸ್ಸೋ ನಾಯಕ್, ಪಂಕಜ್ ಚೌಧರಿ, ಕ್ರಿಶನ್ ಪಾಲ್, ರಾಮದಾಸ್ ಅಠವಳೆ, ರಾಮ್ ನಾಥ್ ಠಾಕೂರ್, ನಿತ್ಯಾನಂದ ರೈ, ಅನುಪ್ರಿಯಾ ಪಟೇಲ್, ವಿ. ಸೋಮಣ್ಣ, ಚಂದ್ರಶೇಖರ್ ಪೆಮ್ಮಸಾನಿ, ಎಸ್‌.ಪಿ. ಸಿಂಗ್ ಬಘೇಲ್, ಶೋಭಾ ಕರಂದ್ಲಾಜೆ, ಕೀರ್ತಿವರ್ಧನ್ ಸಿಂಗ್, ಬಿ.ಎಲ್. ವರ್ಮಾ, ಶಂತನು ಠಾಕೂರ್​, ಸುರೇಶ್ ಗೋಪಿ, ಡಾ. ಎಲ್. ಮುರುಗನ್, ಅಜಯ್ ತಮ್ತಾ, ಬಂಡಿ ಸಂಜಯ್ ಕುಮಾರ್, ಕಮಲೇಶ್ ಪಾಸ್ವಾನ್, ಭಗೀರಥ್ ಚೌಧರಿ, ಸತೀಶ್ ಚಂದ್ರ ದುಬೆ, ಸಂಜಯ್ ಸೇಠ್, ರವನೀತ್ ಸಿಂಗ್, ದುರ್ಗಾದಾಸ್ ಯುಕೆಯ್​, ರಕ್ಷಾ ನಿಖಿಲ್ ಖಡ್ಸೆ, ಸುಕಾಂತ ಮಜುಂದಾರ್, ಸಾವಿತ್ರಿ ಠಾಕೂರ್, ತೋಖಾನ್ ಸಾಹು, ರಾಜ್​ ಭೂಷಣ್ ಚೌಧರಿ, ಭೂಪತಿ ರಾಜು ಶ್ರೀನಿವಾಸ ವರ್ಮಾ, ಹರ್ಷ್ ಮಲ್ಹೋತ್ರಾ, ನಿಮುಬೆನ್ ಜಯಂತಿಭಾಯ್ ಬಂಭಾನಿಯಾ, ಮುರಳೀಧರ್ ಮೊಹೋಲ್, ಜಾರ್ಜ್ ಕುರಿಯನ್ ಮತ್ತು ಪಬಿತ್ರಾ ಮಾರ್ಗರಿಟಾ ಪ್ರಮಾಣ ವಚನ ಸ್ವೀಕರಿಸಿದರು.

  • ಅಂತರ್ಜಾಲ ಮಾಹಿತಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣ |
March 16, 2025
11:20 AM
by: ಸಾಯಿಶೇಖರ್ ಕರಿಕಳ
ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ
March 16, 2025
7:53 AM
by: The Rural Mirror ಸುದ್ದಿಜಾಲ
ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ
March 16, 2025
7:36 AM
by: The Rural Mirror ಸುದ್ದಿಜಾಲ
ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
March 16, 2025
7:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror