ಭಕ್ತರ ಇಷ್ಟಾರ್ಥ ಈಡೇರಿಸುವ ದೈವ | ಸಂತಾನ ಭಾಗ್ಯ, ಉದ್ಯೋಗ.. ಇತ್ಯಾದಿಗಳಿಗೆ ಈ ದೈವಕ್ಕೆ ಹರಿಕೆ | ಮೊಗ್ರದ ಶ್ರೀ ಭೈರಜ್ಜಿ ದೈವ |

January 22, 2024
5:23 PM
ಮೊಗ್ರದಲ್ಲಿ ನಡೆಯುವ ಜಾತ್ರಾ ಉತ್ಸವದಲ್ಲಿ ಭೈರಜ್ಜಿ ದೈವದ ವಿಶೇಷ ಹರಿಕೆಗಳು ಮಹತ್ವ ಪಡೆದಿದೆ.

ನಂಬಿಕೆಯೇ ಈ ದೇಶದಲ್ಲಿ ಪ್ರಮುಖವಾದ್ದು. ದೇವರು-ದೈವಗಳೂ ಕೂಡಾ ನಂಬಿದವರನ್ನು ಯಾವತ್ತೂ ಕೈಬಿಟ್ಟಿಲ್ಲ. ಇಲ್ಲೂ ಹಾಗೇ, ನಂಬಿದವರಿಗೆ ಯಾವತ್ತೂ ನಿರಾಸೆಯಾಗಿಲ್ಲ. ಈ ದೈವವನ್ನು ನಂಬಿ ಮಾಡಿದ ಕೆಲಸಗಳೆಲ್ಲವೂ ಯಶಸ್ಸಾಗಿದೆ. ಈ ದೈವದ ನೆಲದಲ್ಲಿ ಮೋಸಗಳಿಗೆ, ಅಹಂಕಾರಗಳು ಯಾವತ್ತೂ ಗೆಲ್ಲಲಿಲ್ಲ. ಅಂತಹ ಪುಣ್ಯ ನೆಲ ಮೊಗ್ರ. ಇಲ್ಲಿನ ಭೈರಜ್ಜಿ ವಿಶೇಷವಾದ ದೈವ. ದಕ್ಷಿಣ ಕನ್ನಡ ಜಿಲ್ಲೆಯ….

Advertisement

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಎಂಬ ದೈವದ ಪ್ರದೇಶ ಇದೆ. ಎರಡು ದಿನಗಳ ಕಾಲ ಇಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತದೆ. ಅದರಲ್ಲಿ ಭೈರಜ್ಜಿ ದೈವಕ್ಕೆ ವಿಶೇಷ ಮಹತ್ವ. ಈ ದೈವಕ್ಕೆ ಹರಿಕೆ ಹೇಳಿಕೊಂಡರೆ ಇಷ್ಟಾರ್ಥ ಈಡೇರುತ್ತದೆ. ಸಂತಾನ ಭಾಗ್ಯಕ್ಕೆ, ಉದ್ಯೋಗಕ್ಕೆ, ಅನ್ಯಾಯದ ಸಂದರ್ಭ ನ್ಯಾಯಕ್ಕಾಗಿ, ವಿಶೇಷವಾಗಿ ಕಳೆದುಹೋದ ವಸ್ತುಗಳಿಗೆ ಹರಿಕೆ ಹೇಳಿಕೊಂಡರೆ ಮತ್ತೆ ಲಭ್ಯವಾಗುತ್ತದೆ ಎನ್ನುವುದು ನಂಬಿಕೆ. ಇದಕ್ಕೆ ಪುಷ್ಠಿ ನೀಡುವಂತೆ ಅನೇಕರು ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ದೈವಕ್ಕೆ ಹರಕೆ ಸಲ್ಲಿಕೆ ಮಾಡುತ್ತಾರೆ. ಸೀರೆ, ಕತ್ತಿ , ಬೆಳ್ಳಿಯ ಆಭರಣಗಳನ್ನು ಸಮರ್ಪಣೆ ಮಾಡುತ್ತಾರೆ. ಈಚೆಗೆ ಸೀರೆಯ ಸಾವಿರ ದಾಟುತ್ತಿದೆ. ಇದು ಭೈರಜ್ಜಿ ದೈವಕ್ಕೆ ಹರಿಕೆ ಹೇಳಿ ಫಲ ನೀಡಿರುವುದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಭಕ್ತಾದಿಗಳು. ಭಕ್ತರು……

ಭಕ್ತರು ವಿವಿಧ ಇಷ್ಟಾರ್ಥ ಈಡೇರಿಕೆಗೆ  ದೈವಕ್ಕೆ ಪ್ರಾರ್ಥನೆ ಮಾಡುತ್ತಾರೆ. ನಂತರ ಈ ಇಷ್ಟಾರ್ಥ ಈಡೇರಿದ ಬಳಿಕ ದೈವದ ನೇಮದಂದು ಆಗಮಿಸಿ ಹರಿಕೆ ಸಮರ್ಪಣೆ ಮಾಡುತ್ತಾರೆ. ಈ ದೈವ ಕನ್ನಡದಲ್ಲಿಯೇ ಮಾತನಾಡುವುದು ವಿಶೇಷವಾಗಿದೆ. ಪ್ರತೀ ವರ್ಷ ಜ.19-20 ರಂದು ವಾರ್ಷಿಕ ಜಾತ್ರಾ ಉತ್ಸವ ಇಲ್ಲಿ ನಡೆಯುತ್ತದೆ.

“Ajji Daiva” of Mogra who fulfills the wishes of devotees. Many problems including childlessness will be fulfilled if “Harike” putting here.

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ
ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group