ಇದು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಕತೆ. ರೋಗಿಯೊಬ್ಬರನ್ನು ಹೊಳೆ ಬದಿಗೆ ಕರೆತಂದು ನಂತರ ಕಾಲುಸಂಕದಲ್ಲಿ ಹೊತ್ತು ಹೊಳೆಯ ಇನ್ನೊಂದು ಬದಿಯಿಂದ ಮತ್ತೊಂದು ವಾಹನದಲ್ಲಿ ಸಾಗಿಸಿದ ಘಟನೆ ನಡೆದಿದೆ.ಕಳೆದ ಹಲವು ವರ್ಷಗಳಿಂದ ಸೇತುವೆಯ ಭರವಸೆ ಮಾತ್ರಾ ಇಲ್ಲಿ ಕಂಡಿದೆ.
ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಇತ್ತೀಚೆಗೆ ಬೇಡಿಕೆಗಳ ಪಟ್ಟು ಹೆಚ್ಚಾಗಿದೆ. ಸುಳ್ಯವು ಅಭಿವೃದ್ಧಿ ಹೊಂದುತ್ತದೆ ಎಂದು ಅನೇಕ ವರ್ಷಗಳಿಂದ ಜನರು ಸುಮ್ಮನಿದ್ದರು. ಆದರೆ ಅಂದಿನಿಂದಲೂ ಸುಳ್ಯ ಭಾರೀ ಅಭಿವೃದ್ಧಿ ಹೊಂದಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲವಾರು ಸಮಸ್ಯೆ ಇದೆ. ಆದರೆ ಮೂಲಭೂತ ಸಮಸ್ಯೆ ನಿವಾರಣೆ ಆಗದೇ ಇರುವುದು ಬಹುದೊಡ್ಡ ಲೋಪವಾಗಿದೆ. ದೇಶವು 75 ನೇ ಸ್ವಾತಂತ್ರ್ಯ ಉತ್ಸವ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಲಭೂತ ಅವಶ್ಯಕತೆಯಾದ ಸೇತುವೆ, ರಸ್ತೆ, ಕುಡಿಯುವ ನೀರಿಗೆ ಪರದಾಟ ನಡೆಸುತ್ತಿದೆ ಎನ್ನುವುದೇ ವಿಷಾದ ಹಾಗೂ ಅಭಿವೃದ್ಧಿ ಬಗ್ಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ.
ಇದೀಗ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಕಂಡುಬಂದು ವಿಡಿಯೋ ಮನ ಕಲಕುತ್ತದೆ. ಮೊಗ್ರದ ಹೊಳೆಕೆರೆ ಎಂಬಲ್ಲಿನ ವ್ಯಕ್ತಿಯೋರ್ವರಿಗೆ ಅನಾರೋಗ್ಯ ಕಾಡಿತ್ತು. ಆದರೆ ವಾಹನಗಳು ಮನೆಯವರೆಗೆ ಬಾರದ ಸ್ಥಿತಿ ಇದೆ. ಮೊಗ್ರದ ಹೊಳೆಗೆ ಸೇತುವೆ ರಚನೆಯಾದಗ ಹಿನ್ನೆಲೆಯಲ್ಲಿ ಮಳೆಗಾಲ ವಾಹನಗಳು ಎರಡೂ ಕಡೆಗೆ ದಾಟುವುದಿಲ್ಲ. ಇಲ್ಲಿ ಅನಾರೋಗ್ಯ ಪೀಡಿತರನ್ನು ಹೊಳೆತ ಬದಿಯವರೆಗೆ ಜೀಪಲ್ಲಿ ಕರಕೊಂಡುಬಂದು, ಆ ಬಳಿಕ ಈಚೆಗೆ ನಿರ್ಮಾಣವಾದ ಕಾಲು ಸಂಕದ ಮೂಲಕ ಎತ್ತಿ ಹೊಳೆಯ ಈ ಕಡೆ ಇರುವ ಕಾರಿಗೆ ಕರೆತಂದು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.ಒಂದು ಹಳ್ಳಿಯ ಮೂಲಭೂತವಾದ ಸಮಸ್ಯೆ ಗಂಭೀರವಾಗಿದ್ದರೂ ಆಡಳಿತವು ಗಮನಹರಿಸದೇ ಇರವುದು ವ್ಯವಸ್ಥೆಯ ಲೋಪವಾಗಿದೆ.
Basic need. Problem of Rural peoples in Mogra Area of Sullia.(Mangalore). This is health emergency situation.
Reason-The bridge is not built yet. So Rainey season vehicles are not crossing river. @DCDK9 @AngaraSBJP @nalinkateel @CMofKarnataka @PMOIndia @narendramodi @MoRD_GoI pic.twitter.com/pXqQfnRn2kAdvertisement— theruralmirror (@ruralmirror) July 22, 2022
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಸೇತುವೆ ಇಲ್ಲದೆ ರೋಗಿಯೊಬ್ಬರನ್ನು ಕಾಲು ಸಂಕದ ಮೂಲಕ ಹೊತ್ತೊಯ್ದ ದೃಶ್ಯ. ಇಲ್ಲಿ ಮಳೆಗಾಲ ಹೊಳೆದಾಟಿ ವಾಹನಗಳು ಬರುವುದಿಲ್ಲ. ಹೀಗಾಗಿ ಮಳೆಗಾಲ ಸಂಕಷ್ಟ.#ruralmirror #mogra #ಮೊಗ್ರ pic.twitter.com/k87kmTWGMn
Advertisement— theruralmirror (@ruralmirror) July 22, 2022