ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಕಾಲಾವಧಿ ಜಾತ್ರೋತ್ಸವ ನಡೆಯಿತು. ಶನಿವಾರ ಬೆಳಗ್ಗೆ ಇತಿಹಾಸ ಪ್ರಸಿದ್ಧವಾಗಿರುವ ಶ್ರೀ ಭೈರಜ್ಜಿ ದೈವದ ನೇಮ ನಡೆಯಿತು.
ಮೊಗ್ರ ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ದೈವಗಳ ನೇಮ ನಡೆಯಿತು. ಶನಿವಾರ ಬೆಳಗ್ಗೆ ಇತಿಹಾಸ ಪ್ರಸಿದ್ಧವಾಗಿರುವ ಕನ್ನಡ ದೇವತೆ ಯಾನೆ ಅಜ್ಜಿ ದೈವದ ನೇಮ ನಡೆಯಿತು. ಸಾವಿರಾರು ಭಕ್ತಾದಿಗಳು ಈ ಸಂದರ್ಭ ಪಾಲ್ಗೊಂಡರು. ಶ್ರೀ ಭೈರಜ್ಜಿ ದೈವವು ಅತ್ಯಂತ ಕಾರಣಿಕ ಹಾಗೂ ಪ್ರಸಿದ್ಧ ದೈವವಾಗಿದೆ. ಭಕ್ತಾದಿಗಳ ಇಷ್ಟಾರ್ಥ ಈಡೇರಿಸುವ ದೈವವಾಗಿದ್ದು,ಸತ್ಯ, ಧರ್ಮ , ನ್ಯಾಯಕ್ಕೆ ಇಲ್ಲಿ ಯಾವತ್ತೂ ಅಪಚಾರವಾಗದು ಎಂಬ ನಂಬಿಕೆ ಇದೆ.
ಭಕ್ತಾದಿಗಳು ಈ ದೈವದ ಮುಂದೆ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಸೀರೆ ಹರಿಕೆ, ಕತ್ತಿ ಹರಿಕೆ ಸೇರಿದಂತೆ ವಿವಿಧ ಹರಿಕೆಗಳನ್ನು ಅರ್ಪಿಸುತ್ತಾರೆ. ಸಚಿವ ಅಂಗಾರ ಸೇರಿದಂತೆ ಹಲವು ಪ್ರಮುಖರು ಇಲ್ಲಿ ದೈವಾರಾಧನೆಗೆ ಅದರಲ್ಲೂ ಶ್ರೀ ಭೈರಜ್ಜಿ ದೈವದ ನೇಮಕ್ಕೆ ಆಗಮಿಸುತ್ತಾರೆ.