ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಕಾಲಾವಧಿ ಜಾತ್ರೋತ್ಸವ ಶುಕ್ರವಾರ ಸಂಜೆಯಿಂದ ಆರಂಭಗೊಂಡಿದೆ. ಶುಕ್ರವಾರ ಸಂಜೆ ಮಲ್ಕಜೆ ಮಾಳಿಗೆಯಿಂದ ಭಂಡಾರ ಆಗಮನವಾಗಿ, ವಿವಿಧ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಮಿಲ-ಮೊಗ್ರ ಒಕ್ಕೂಟದ ಸಹಯೋಗದಲ್ಲಿ ಭಜನಾ ತರಬೇತಿ ಶಿಬಿರವು ಉದ್ಘಾಟನೆಗೊಂಡಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಎಂ ಎನ್ ವೆಂಕಟ್ರಮಣ ಮೊಗ್ರ ಭಜನಾ ತರಬೇತಿ ಶಿಬಿರ ಉದ್ಘಾಟಿಸಿದರು. ಜ.20 ರಂದು ಬೆಳಗ್ಗೆ ಉಳ್ಳಾಕುಲು ನೇಮ, ಕುಮಾರ ನೇಮ, ಪುರುಷ ದೈವದ ನೇಮ, ರುದ್ರಚಾಮುಂಡಿ ನೇಮ, ಮಲೆಚಾಮುಂಡಿ ನೇಮ ನಡೆಯಲಿದೆ. ಜ.21 ರಂದು ಬೆಳಗ್ಗೆ ಭೈರಜ್ಜಿ ನೇಮ ನಡೆಯಲಿದೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement