ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಅಂಗವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಿರಂತರವಾಗಿ ನಡೆಯುವ ಗಣಪತಿ ಹವನವು ಬುಧವಾರ ಆರಂಭಗೊಂಡಿತು.
ಬುಧವಾರದಂದು ವೇ.ಮೂ.ಕೃಷ್ಣ ಭಟ್ ಮಡಪ್ಪಾಡಿ ಅವರು ಗಣಪತಿ ಹವನ ನೆರವೇರಿಸಿದರು. ಈ ಸಂದರ್ಭ ಮೊಗ್ರ ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಚಿಕ್ಮುಳಿ, ಗೌರವಾಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಗೌರವ ಸಲಹೆಗಾರರುಗಳಾದ ವೆಂಕಟ್ರಮಣ ಎಂ ಎನ್, ದೊಡ್ಡಣ್ಣ ಗೌಡ ಚಿಕ್ಮುಳಿ, ಪ್ರಧಾನ ಸಂಚಾಲಕ ಸತ್ಯನಾರಾಯಣ ಮೊಗ್ರ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಶ್ರೀಶೂಲಿನೀ ದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಮಕ್ಕಿ, ಕೋಶಾಧಿಕಾರಿ ಕುಮಾರಸ್ವಾಮಿ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ, ಸಮಿತಿ ಉಪಾಧ್ಯಕ್ಷರುಗಳಾದ ರಾಧಾಕೃಷ್ಣ ತುಪ್ಪದಮನೆ, ಚನ್ನಕೇಶವ ಕಮಿಲ, ಸೀತಾರಾಮ ಚಿಕ್ಮುಳಿ ಮೊದಲಾದವರಿದ್ದರು.