ಪ್ರಸಿದ್ದ ಕಲಾವಿದ ಮೋಹನ್ ಸೋನಾ ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನರಾದರು. ಗ್ರಾಮೀಣ ಭಾಗದ ಮೇರು ಕಲಾವಿದರಾಗಿದ್ದ ಮೋಹನ್ ಸೋನಾ ಚಿತ್ರ ಕಲಾವಿದರಾಗಿ, ನಟರಾಗಿ, ಸೃಜನಶೀಲ ಕಲಾವಿದರಾಗಿ , ನಾಟಕಕಾರರಾಗಿ , ನಿರ್ದೇಶಕರಾಗಿ ಹೆಸರು ಮಾಡಿದ್ದರು.
ಚೋಮ, ನಾಳೆ ಯಾರಿಗೂ ಇಲ್ಲ ತೆರಗಳಲ್ಲಿ ಅಭಿನಯ ಮಾಡಿದ್ದರು. ಸೋಣಂಗೇರಿಯ ಬಯಲು ಚಿತ್ರಾಲಯ ರಾಜ್ಯದಲ್ಲಿ ಪ್ರಸಿದ್ಧವಾಗಿತ್ತು. ಮೋಹನ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೋಹನ್ ಸೋನಾ ಬಗ್ಗೆ ಕಲಾವಿದ ಜೀವನ್ ರಾಂ ಅವರ ಪೇಸ್ ಬುಕ್ ವಾಲಲ್ಲಿ ಹೀಗೆ ಬರೆದಿದ್ದಾರೆ..
This is box title
“ ನಿಮ್ಮ ಬಗ್ಗೆ ನಾನೇನು ಹೇಳಲಿ ಸೋನ !?? ನನ್ನ 30 ವರ್ಷದ ರಂಗ ಬದುಕಿನಲ್ಲಿ ನಿಮ್ಮಂತಹ ಮೇರು ವ್ಯಕ್ತಿತ್ವದ ಮತ್ತೊಬ್ಬ ಕಲಾವಿದನನ್ನು ನಾನು ಕಂಡಿಲ್ಲ.ನಿಮ್ಮನ್ನು ನೋಡಿಕೊಂಡೇ ಬೆಳೆದವನು ನಾನು. ನನಗೂ ಗುರು ನೀವು. ಕಳೆದ ಐದು ತಿಂಗಳಿನಿಂದಂತೂ ನಿಮ್ಮ ಬಗೆಗಿನ ಸಾಕ್ಷ್ಯಚಿತ್ರ ನಿರ್ಮಾಣದ ನೆಪದಲ್ಲಿ….ಸೋನ.. ಸೋನ… ಸೋನ…ಸೋನ ಅಂತ ಅದೆಷ್ಟು ಸಾವಿರ ಬಾರಿ ನನ್ನ ನಾಲಗೆ ನುಡಿದಿರಬಹುದೋ!! ಕಲೆ,ಶಿಕ್ಷಣ,ರಂಗಭೂಮಿಯ ವಿಷಯದಲ್ಲಿ ನಿಮಗಿರುವ ಅಪಾರ ಜ್ಞಾನದ ವಿಶ್ವರೂಪ ದರ್ಶನ ಮಾಡಿಸಿಕೊಳ್ಳುತ್ತಿದ್ದೆ..ಮೋಸ ಮಾಡಿದ್ರಿ ನೀವು…ಕೋಪ ಸೋನ.!! ಪ್ರತಿದಿನ ಪ್ರತಿಕ್ಷಣ ನೀವೇ ನನ್ನೊಳಗಿದ್ದು ನನ್ನೊಳಗಿನ ಕ್ರಿಯಾಶೀಲತೆಯನ್ನು ಹೊರಹಾಕ್ತಿದ್ರೀ ಅನಿಸ್ತದೆ.ಈ ಸಾಕ್ಷ್ಯಚಿತ್ರವನ್ನು ಲೋಕ ನೋಡುವುದು ಆಮೇಲಿನ ಮಾತು…ಮೊದಲು ನೀವು ನೋಡಬೇಕೆಂಬ ಹಂಬಲ ನನ್ನದಾಗಿತ್ತು. …ಖಂಡಿತ ನಾನು ತಡ ಮಾಡಿಲ್ಲ..ನೀವೇ ಹೋಗಲು ಅವಸರಿಸಿದ್ರಿ… ಬೇಗನೇ ಮುಗಿಸುವೆ ಕೆಲಸ..ನೋಡಬೇಕು ನೀವು. ಮತ್ತೆ ಹುಟ್ಟಿ ಬರುವಿರೆಂಬ ನಂಬಿಕೆಯಲ್ಲಿ…!!
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement