ಬೆಂಗಳೂರನ್ನೇ ಸ್ಪೋಟಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ನಿನ್ನೆ ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ರು. ಆದ್ರೆ ಅವರ ಮುಂದಿನ ಯೋಜನೆಗಳ ಬಗ್ಗೆ ಕೇಳಿದ್ರೆ ಇಡೀ ನಾಡೇ ಬೆಚ್ಚಿ ಬೀಳುತ್ತೆ. ಸಿಸಿಬಿ ಅಧಿಕಾರಿಗಳು ಐವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿ ತನಿಖೆ ಶುರುಮಾಡಿದೆ ತನಿಖೆ ವೇಳೆ ಸ್ಪೋಟಕ ಅಂಶಗಳು ಹೊರಬರುತ್ತಿದೆ.. ಹಣದ ಮೂಲ. ಹಾಗು ಸಿಕ್ಕ ಜೀವಂತ ಗುಂಡುಗಳು ಬೇರೆಯದ್ದೆ ಕಥೆ ಹೇಳುತ್ತಿವೆ.
ಸಿಸಿಬಿ ಕೈಯಲ್ಲಿ ಲಾಕ್ ಆಗಿರುವ ಕ್ರಿಮಿಗಳ ಬಳಿ 45 ಜೀವಂತ ಗುಂಡು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್ಗಳು ಸಿಕ್ಕಿವೆ. ಇವುಗಳನ್ನೆಲ್ಲ ಖರೀದಿಸಲು ಖುದ್ದು ಎ2 ಆರೋಪಿ ಮಹಮ್ಮದ್ ಜುನೈದ್ ವಿದೇಶದಲ್ಲಿ ಕುಳಿತು ಫಂಡ್ ಕೊಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ. 2017 ರಲ್ಲಿ ಕೊಲೆ ಕೇಸ್ ಬಳಿಕ 2020ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಎರಡು ಬಾರಿ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್, 2021ರಲ್ಲಿ ಜೈಲಿಂದ ರಿಲೀಸ್ ಆದ್ಮೇಲೆ ನಾಪತ್ತೆಯಾಗಿದ್ದ. ಈಗ ವಿದೇಶದಲ್ಲಿ ಕುಳಿತು ಉಗ್ರವಾದಕ್ಕೆ ಮಸಲತ್ತು ಆತಂಕ ಮೂಡಿಸಿದೆ.. ಶಸ್ತ್ರಾಸ್ತ್ರ ಖರೀದಿಗೆ ಹಣ ಕೊಡುತ್ತಿದ್ದು, ಈ ಪಿಸ್ತೂಲ್, ಗುಂಡುಗಳು ಗುಜರಾತ್ ಮತ್ತು ಉತ್ತರ ಪ್ರದೇಶದಿಂದ ಬಂದಿರಬಹುದು ಎಂಬ ಮಾಹಿತಿ ಇದೆ.
ಸಿಸಿಬಿ ವಶಕ್ಕೆ ಪಡೆದಿರುವ ಪಿಸ್ತೂಲ್ ಮತ್ತು ಗುಂಡುಗಳು ಎರಡು ಮಾದರಿಯವು. ಒಂದು ಹೊರಗಿನ ಮಾರ್ಕೆಟ್ನಲ್ಲಿ ಸೇಲ್ ಮಾಡಿದ್ರೆ, 15 ಗುಂಡುಗಳು ಒಪನ್ ಮಾರ್ಕೆಟ್ನಲ್ಲಿ ಸೇಲ್ ಮಾಡುವಂತವು. ಈ ಗುಂಡುಗಳನ್ನ ಪೊಲೀಸರು, ಮಿಲಿಟರಿ ಮತ್ತು ವಿದೇಶಿ ಟೆರರ್ ಸಂಘಟನೆಗಳು ಬಳಸುತ್ತವೆ. ಇಲ್ಲಿ ಐವರು ಬಂಧಿತ ಉಗ್ರರಿಗೆ ಟಿ ನಸೀರ್ ಲಿಂಕ್ ಇರುವುದು ಕಡಿಮೆ ಎನ್ನಲಾಗಿದೆ. ಇಬ್ಬರಿಗೂ ಮಧ್ಯದಲ್ಲಿ ಇದ್ದು ಕೆಲಸ ಮಾಡಿದ್ದವನು ಜುನೈದ್. ಹೀಗಾಗಿ ಜುನೈದ್ ಈ ಕೇಸ್ ಗೆ ಅವಶ್ಯಕ. ಹೀಗಾಗಿ ಸಿಸಿಬಿ ಹಾಗು ಕೇಂದ್ರ ತನಿಖಾ ಸಂಸ್ಥೆಯ ಮೂಲಕ ವಿದೇಶದಲ್ಲಿ ಇರುವ ಜುನೈದ್ ನ ಪತ್ತೆ ಮಾಡಲು ತಯಾರಿ ನಡೆಸಲಾಗುತ್ತಿದೆ.
ಇನ್ನು ಕಾರ್ಯಚರಣೆ ವೇಳೆ ಶಂಕಿತ ಉಗ್ರರ ಬಳಿ ಸಿಕ್ಕಿರುವ ವಾಕಿಟಾಕಿ ಸುತ್ತ ಹಲವಾರು ಸಂಶಯಗಳು ಹುಟ್ಟಿಕೊಂಡಿವೆ. ಮೊಬೈಲ್ ಬಳಸಲು ಸಾಧ್ಯವಿಲ್ಲದ ಕಡೆ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಕಾಡಿನಲ್ಲಿ ಟ್ರೈನಿಂಗ್ ನಡೆಸುವಾಗ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಒಂದ ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಕಟ್ಟಡದ ಮೇಲೆ ಅಟ್ಯಾಕ್ ಮಾಡಿದಾಗ ಪೊಲೀಸರು ಎಂಟ್ರಿ ಕೊಟ್ರೆ ಜಾಮರ್ ಬಳುತ್ತಾರೆ. ಈ ವೇಳೆ ಮೊಬೈಲ್ ವರ್ಕ್ ಆಗುವುದಿಲ್ಲ. ಹೀಗಾಗಿ ಆ ಸಮಯದಲ್ಲಿ ವಾಕಿಟಾಕಿ ಬಳಕೆ ಮಾಡುವ ಸಾದ್ಯತೆ ಇದೆ. ಮುಂಬಯಿ ಅಟ್ಯಾಕ್ ಮಾದರಿಯಲ್ಲಿ ಕೃತ್ಯ ಎಸಗಿದ್ರೆ ವಾಕಿಟಾಕಿ ಸಹಾಯಕಾರಿ. ಹೀಗಾಗಿ ಬಂಧಿತರ ಅಸಲಿ ಪ್ಲ್ಯಾನ್ ಏನು ಎಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಎನ್ಐಎ ಅಧಿಕಾರಿಗಳು ಸಹ ಸಿಸಿಬಿ ತನಿಖೆಯ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಅವಶ್ಯಕತೆ ಇದ್ದಲಿ ಕೇಸ್ ಮುಂದಿನ ಹಂತದಲ್ಲಿ ಎನ್ ಐ ಎ ತನಿಖೆ ನಡೆಸುವಾ ಸಾದ್ಯತೆಗಳಿವೆ. ಇನ್ನು ಶಂಕಿತ ಉಗ್ರರ ಬಳಿ ಸಿಕ್ಕಿರುವ ಗನ್ ಗಳನ್ನು ನೋಡಿದ್ರೆ, ಕಂಟ್ರಿ ಮೇಡ್ ಪಿಸ್ತೂಲ್ ತರಬೇತಿ ಪಡೆದಿದ್ರಾ ಎನ್ನುವ ಶಂಕೆಗಳು ವ್ಯಕ್ತವಾಗಿವೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…