Advertisement
ಸುದ್ದಿಗಳು

ಬಾಯಿ ಬಿಟ್ಟ ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರರು | ವಿದೇಶದಲ್ಲಿ ಕುಳಿತು ಉಗ್ರವಾದಕ್ಕೆ ಮಸಲತ್ತು ಮಾಡಿದ್ದ ಖದೀಮ…! |

Share

ಬೆಂಗಳೂರನ್ನೇ ಸ್ಪೋಟಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ನಿನ್ನೆ ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ರು. ಆದ್ರೆ ಅವರ ಮುಂದಿನ ಯೋಜನೆಗಳ ಬಗ್ಗೆ ಕೇಳಿದ್ರೆ ಇಡೀ ನಾಡೇ ಬೆಚ್ಚಿ ಬೀಳುತ್ತೆ. ಸಿಸಿಬಿ ಅಧಿಕಾರಿಗಳು ಐವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿ ತನಿಖೆ ಶುರುಮಾಡಿದೆ ತನಿಖೆ ವೇಳೆ ಸ್ಪೋಟಕ ಅಂಶಗಳು ಹೊರಬರುತ್ತಿದೆ.. ಹಣದ ಮೂಲ. ಹಾಗು ಸಿಕ್ಕ ಜೀವಂತ ಗುಂಡುಗಳು ಬೇರೆಯದ್ದೆ ಕಥೆ ಹೇಳುತ್ತಿವೆ.

Advertisement
Advertisement

ಸಿಸಿಬಿ ಕೈಯಲ್ಲಿ ಲಾಕ್ ಆಗಿರುವ ಕ್ರಿಮಿಗಳ ಬಳಿ 45 ಜೀವಂತ ಗುಂಡು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್​ಗಳು ಸಿಕ್ಕಿವೆ. ಇವುಗಳನ್ನೆಲ್ಲ ಖರೀದಿಸಲು ಖುದ್ದು ಎ2 ಆರೋಪಿ ಮಹಮ್ಮದ್ ಜುನೈದ್ ವಿದೇಶದಲ್ಲಿ ಕುಳಿತು ಫಂಡ್ ಕೊಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ. 2017 ರಲ್ಲಿ ಕೊಲೆ ಕೇಸ್ ಬಳಿಕ 2020ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಎರಡು ಬಾರಿ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್, 2021ರಲ್ಲಿ ಜೈಲಿಂದ ರಿಲೀಸ್ ಆದ್ಮೇಲೆ ನಾಪತ್ತೆಯಾಗಿದ್ದ. ಈಗ ವಿದೇಶದಲ್ಲಿ ಕುಳಿತು ಉಗ್ರವಾದಕ್ಕೆ ಮಸಲತ್ತು ಆತಂಕ ಮೂಡಿಸಿದೆ.. ಶಸ್ತ್ರಾಸ್ತ್ರ ಖರೀದಿಗೆ ಹಣ ಕೊಡುತ್ತಿದ್ದು, ಈ ಪಿಸ್ತೂಲ್, ಗುಂಡುಗಳು ಗುಜರಾತ್ ಮತ್ತು ಉತ್ತರ ಪ್ರದೇಶದಿಂದ ಬಂದಿರಬಹುದು ಎಂಬ ಮಾಹಿತಿ ಇದೆ.

Advertisement

ಇನ್ನು ಕಾರ್ಯಚರಣೆ ವೇಳೆ ಶಂಕಿತ ಉಗ್ರರ ಬಳಿ ಸಿಕ್ಕಿರುವ ವಾಕಿಟಾಕಿ ಸುತ್ತ ಹಲವಾರು ಸಂಶಯಗಳು ಹುಟ್ಟಿಕೊಂಡಿವೆ. ಮೊಬೈಲ್ ಬಳಸಲು ಸಾಧ್ಯವಿಲ್ಲದ ಕಡೆ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಕಾಡಿನಲ್ಲಿ ಟ್ರೈನಿಂಗ್ ನಡೆಸುವಾಗ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಒಂದ ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಕಟ್ಟಡದ ಮೇಲೆ ಅಟ್ಯಾಕ್ ಮಾಡಿದಾಗ ಪೊಲೀಸರು ಎಂಟ್ರಿ ಕೊಟ್ರೆ ಜಾಮರ್ ಬಳುತ್ತಾರೆ. ಈ ವೇಳೆ ಮೊಬೈಲ್ ವರ್ಕ್ ಆಗುವುದಿಲ್ಲ. ಹೀಗಾಗಿ ಆ ಸಮಯದಲ್ಲಿ ವಾಕಿಟಾಕಿ ಬಳಕೆ ಮಾಡುವ ಸಾದ್ಯತೆ ಇದೆ. ಮುಂಬಯಿ ಅಟ್ಯಾಕ್ ಮಾದರಿಯಲ್ಲಿ ಕೃತ್ಯ ಎಸಗಿದ್ರೆ ವಾಕಿಟಾಕಿ ಸಹಾಯಕಾರಿ. ಹೀಗಾಗಿ ಬಂಧಿತರ ಅಸಲಿ ಪ್ಲ್ಯಾನ್​ ಏನು ಎಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಎನ್​ಐಎ ಅಧಿಕಾರಿಗಳು ಸಹ ಸಿಸಿಬಿ ತನಿಖೆಯ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಅವಶ್ಯಕತೆ ಇದ್ದಲಿ ಕೇಸ್ ಮುಂದಿನ ಹಂತದಲ್ಲಿ ಎನ್ ಐ ಎ ತನಿಖೆ ನಡೆಸುವಾ ಸಾದ್ಯತೆಗಳಿವೆ. ಇನ್ನು ಶಂಕಿತ ಉಗ್ರರ ಬಳಿ ಸಿಕ್ಕಿರುವ ಗನ್ ಗಳನ್ನು ನೋಡಿದ್ರೆ, ಕಂಟ್ರಿ ಮೇಡ್ ಪಿಸ್ತೂಲ್ ತರಬೇತಿ ಪಡೆದಿದ್ರಾ ಎನ್ನುವ ಶಂಕೆಗಳು ವ್ಯಕ್ತವಾಗಿವೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

2 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

3 hours ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

11 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

11 hours ago