ಈ ಬಾರಿ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯ ಸಾಧ್ಯತೆಯ ಬಗ್ಗೆ ಅನುಮಾನ ಇತ್ತು. ಆದರೆ ಇದೀಗ ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಭದ್ರತೆಯನ್ನು ಮಿಜೋರಾಂ ಸರ್ಕಾರ ಹೆಚ್ಚಿಸಿದೆ. ಹೀಗಾಗಿ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯಲ್ಲಿ ಸಾಕಷ್ಟು ನಿಯಂತ್ರಣವಾಗಿದೆ ಎಂದು ಮಿಜೋರಾಂ ಸರ್ಕಾರ ಹೇಳಿದೆ.
ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಮಿಜೋರಾಂ-ಮ್ಯಾನ್ಮಾರ್ ಗಡಿಯ 510 ಕಿ.ಮೀ ವ್ಯಾಪ್ತಿಯಲ್ಲಿ ಪ್ರಸ್ತುತ 12 ಪೊಲೀಸ್ ಠಾಣೆಗಳು , ಅಸ್ಸಾಂ ರೈಫಲ್ಸ್‌ನಿಂದ ನಿರ್ವಹಿಸಲ್ಪಡುತ್ತಿವೆ ಎಂದು ಗೃಹ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಭದ್ರತೆ ಹೆಚ್ಚಿರುವ ಕಾರಣದಿಂದ ಗಡಿಯಾಚೆಗಿನ ಮಾದಕ ದ್ರವ್ಯ ಮತ್ತು ಅಕ್ರಮ ಅಡಿಕೆ ಸಾಗಾಟ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಕ್ಟೋಬರ್‌ನಿಂದ ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಪ್ರಯಾಣಿಸಲು ಕೂಡಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಅಕ್ರಮ ಸಾಗಾಟಗಳಿಗೆ ಕಡಿವಾಣ ಹಾಕಲಾಗಿದೆ.
ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಬೆಳೆ ಬೆಳೆಯುತ್ತಿರುವುದರಿಂದ ಅಲ್ಲಿನ ಅಡಿಕೆ ಬೆಳೆಗಾರರಿಗೂ ಬರ್ಮಾ ಅಡಿಕೆ ಕಳ್ಳಸಾಗಾಣೆಯಾಗುತ್ತಿರುವುದು ಸಂಕಷ್ಟವಾಗಿದೆ. ಈ ಕಾರಣದಿಂದ ಅಡಿಕೆ ಸಾಗಾಟದ ಮೇಲೆ ನಿಗಾ ಇಡಲಾಗಿದೆ. ಹೀಗಾಗಿ ಅಡಿಕೆ ಧಾರಣಡೆ ಈ ಬಾರಿ ಏರಿಕೆಯ ನಿರೀಕ್ಷೆ ಇದೆ. ಕೃಷಿ, ಗ್ರಾಮೀಣ, ಪರಿಸರ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ…
ಸದ್ಯ ಹಳೆ ಅಡಿಕೆ ಧಾರಣೆ 540 ರೂಪಾಯು ತಲುಪಿದೆ. ಇನ್ನಷ್ಟು ಏರಿಕೆಯ ಬದಲು ಸ್ಥಿರತೆಯನ್ನು ಕಂಡು, ಹೊಸ ಅಡಿಕೆ ಧಾರಣೆ 400 ರೂಪಾಯಿಗಿಂತ ಹೆಚ್ಚಿನ ಧಾರಣೆ ಅಗತ್ಯವಿದೆ. ಏಕೆಂದರೆ ಈಗ ಸಾಮಾನ್ಯ ಅಡಿಕೆ ಬೆಳೆಗಾರರು ಹೊಸ ಅಡಿಕೆಯನ್ನೇ ಮಾರಾಟ ಮಾಡುವ ಹಂತದಲ್ಲಿದ್ದಾರೆ. ಕಳೆದ ವರ್ಷ ಫಸಲು ಕಡಿಮೆ, ಈ ಬಾರಿ ಕೊಳೆರೋಗದಿಂದ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಈಗ ಹೊಸ ಅಡಿಕೆ ಧಾರಣೆ ಏರಿಕೆ ಕಾಣಬೇಕಿದೆ ಎಂಬುದು ನಿರೀಕ್ಷೆ. ಅಂತೂ ಈ ಬಾರಿ ಅಡಿಕೆ ಧಾರಣೆ ಉತ್ತಮವಾಗಿರುವ ಎಲ್ಲಾ ಸೂಚನೆಗಳು ಕಾಣುತ್ತಿವೆ.


