ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ಮೇಲೆ ತೀವ್ರ ನಿಗಾ – ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ

November 20, 2025
9:19 PM

ಈ ಬಾರಿ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯ ಸಾಧ್ಯತೆಯ ಬಗ್ಗೆ ಅನುಮಾನ ಇತ್ತು. ಆದರೆ ಇದೀಗ ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಭದ್ರತೆಯನ್ನು ಮಿಜೋರಾಂ ಸರ್ಕಾರ ಹೆಚ್ಚಿಸಿದೆ. ಹೀಗಾಗಿ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯಲ್ಲಿ ಸಾಕಷ್ಟು ನಿಯಂತ್ರಣವಾಗಿದೆ ಎಂದು ಮಿಜೋರಾಂ ಸರ್ಕಾರ ಹೇಳಿದೆ.

Advertisement
Advertisement

ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅಧ್ಯಕ್ಷತೆಯಲ್ಲಿ ನಡೆದ  ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.  ಮಿಜೋರಾಂ-ಮ್ಯಾನ್ಮಾರ್ ಗಡಿಯ 510 ಕಿ.ಮೀ ವ್ಯಾಪ್ತಿಯಲ್ಲಿ ಪ್ರಸ್ತುತ 12 ಪೊಲೀಸ್ ಠಾಣೆಗಳು , ಅಸ್ಸಾಂ ರೈಫಲ್ಸ್‌ನಿಂದ ನಿರ್ವಹಿಸಲ್ಪಡುತ್ತಿವೆ ಎಂದು ಗೃಹ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಭದ್ರತೆ ಹೆಚ್ಚಿರುವ ಕಾರಣದಿಂದ ಗಡಿಯಾಚೆಗಿನ ಮಾದಕ ದ್ರವ್ಯ ಮತ್ತು ಅಕ್ರಮ ಅಡಿಕೆ ಸಾಗಾಟ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಕ್ಟೋಬರ್‌ನಿಂದ ಇಂಡೋ-ಮ್ಯಾನ್ಮಾರ್ ಗಡಿಯುದ್ದಕ್ಕೂ ಪ್ರಯಾಣಿಸಲು ಕೂಡಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಅಕ್ರಮ ಸಾಗಾಟಗಳಿಗೆ ಕಡಿವಾಣ ಹಾಕಲಾಗಿದೆ.

ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಬೆಳೆ ಬೆಳೆಯುತ್ತಿರುವುದರಿಂದ ಅಲ್ಲಿನ ಅಡಿಕೆ ಬೆಳೆಗಾರರಿಗೂ ಬರ್ಮಾ ಅಡಿಕೆ ಕಳ್ಳಸಾಗಾಣೆಯಾಗುತ್ತಿರುವುದು ಸಂಕಷ್ಟವಾಗಿದೆ. ಈ ಕಾರಣದಿಂದ ಅಡಿಕೆ ಸಾಗಾಟದ ಮೇಲೆ ನಿಗಾ ಇಡಲಾಗಿದೆ. ಹೀಗಾಗಿ ಅಡಿಕೆ ಧಾರಣಡೆ ಈ ಬಾರಿ ಏರಿಕೆಯ ನಿರೀಕ್ಷೆ ಇದೆ. ಕೃಷಿ, ಗ್ರಾಮೀಣ, ಪರಿಸರ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿ…

ಸದ್ಯ ಹಳೆ ಅಡಿಕೆ ಧಾರಣೆ 540 ರೂಪಾಯು ತಲುಪಿದೆ. ಇನ್ನಷ್ಟು ಏರಿಕೆಯ ಬದಲು ಸ್ಥಿರತೆಯನ್ನು ಕಂಡು,  ಹೊಸ ಅಡಿಕೆ ಧಾರಣೆ 400 ರೂಪಾಯಿಗಿಂತ ಹೆಚ್ಚಿನ ಧಾರಣೆ ಅಗತ್ಯವಿದೆ. ಏಕೆಂದರೆ ಈಗ ಸಾಮಾನ್ಯ ಅಡಿಕೆ ಬೆಳೆಗಾರರು ಹೊಸ ಅಡಿಕೆಯನ್ನೇ ಮಾರಾಟ ಮಾಡುವ ಹಂತದಲ್ಲಿದ್ದಾರೆ. ಕಳೆದ ವರ್ಷ ಫಸಲು ಕಡಿಮೆ, ಈ ಬಾರಿ ಕೊಳೆರೋಗದಿಂದ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಈಗ ಹೊಸ ಅಡಿಕೆ ಧಾರಣೆ ಏರಿಕೆ ಕಾಣಬೇಕಿದೆ ಎಂಬುದು ನಿರೀಕ್ಷೆ. ಅಂತೂ ಈ ಬಾರಿ ಅಡಿಕೆ ಧಾರಣೆ ಉತ್ತಮವಾಗಿರುವ ಎಲ್ಲಾ ಸೂಚನೆಗಳು ಕಾಣುತ್ತಿವೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಹಾನಿಕಾರಕ ವರ್ಗೀಕರಣ ಪುನರ್‌ಪರಿಶೀಲನೆಗೆ ಆಗ್ರಹ
January 23, 2026
10:32 PM
by: ದ ರೂರಲ್ ಮಿರರ್.ಕಾಂ
ನಾವು ಎಸೆಯುವ ಆಹಾರವೇ ಪರಿಸರಕ್ಕೆ ಅಪಾಯವೇ..? ಭಾರತದಲ್ಲಿ ಆಹಾರ ವ್ಯರ್ಥ ಗಂಭೀರ ಎಚ್ಚರಿಕೆ
January 23, 2026
10:52 AM
by: ದ ರೂರಲ್ ಮಿರರ್.ಕಾಂ
ಕೈಗಾರಿಕಾ ತ್ಯಾಜ್ಯಗಳಿಂದ ಕೆರೆಗಳು ಕಲುಷಿತ | ಲೋಕಾಯುಕ್ತ ಕಾಯ್ದೆ ಅಡಿ ಸ್ವಯಂ ಪ್ರೇರಿತ ದೂರು ದಾಖಲು
January 23, 2026
7:45 AM
by: ದ ರೂರಲ್ ಮಿರರ್.ಕಾಂ
ರಾಷ್ಟ್ರ ಮಟ್ಟದಲ್ಲಿ ರೈತರಿಗೆ ಫ್ರೂಟ್ಸ್ ಐಡಿ | ಸರ್ಕಾರಿ ಸೌಲಭ್ಯ ಪಡೆಯಲು ಹೊಸ ವ್ಯವಸ್ಥೆ
January 23, 2026
7:43 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror