ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?

February 15, 2026
6:13 AM
ಗೋವಾದಲ್ಲಿ ಗೇರು ತೋಟಗಳ ಮೇಲೆ ಕೋತಿಗಳ ದಾಳಿ ಆರಂಭವಾಗಿದೆ. ಇದು ಕರಾವಳಿ ಕರ್ನಾಟಕದ ರೈತರಿಗೆ ಮುನ್ನೆಚ್ಚರಿಕೆಯ ಸಂಕೇತವಾಗಬಹುದು. ಈ ಬಗ್ಗೆ ತಕ್ಷಣ ಕ್ರಮ ಅಗತ್ಯತವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗೋವಾದ ಸತ್ತಾರಿ ತಾಲೂಕಿನಲ್ಲಿ ಗೇರು ತೋಟಗಳ ಮೇಲೆ ಕಪಿಗಳ ದಾಳಿ ಆರಂಭವಾಗಿರುವುದು, ಕೇವಲ ಸ್ಥಳೀಯ ಸಮಸ್ಯೆಯಷ್ಟೇ ಅಲ್ಲ, ಇದು ಕರಾವಳಿ ಕರ್ನಾಟಕದ ಗೇರು ಕೃಷಿಗೂ ಮುನ್ನೆಚ್ಚರಿಕೆಯ ಸಂಕೇತವೆಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಕಾಡಂಚಿನ ಪ್ರದೇಶದಲ್ಲಿ ಗೇರು ಕೃಷಿಗೂ ಕೋತಿಗಳ ಹಾವಳಿ ಆರಂಭವಾಗಿದೆ. ಇದು ಗಂಭೀರ ಸ್ವರೂಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

Advertisement
Advertisement

ಗೋವಾದಲ್ಲಿ ಗೇರು ಬೆಳೆ ಇದುವರೆಗೂ ಕೋತಿಗಳ ದಾಳಿಯಿಂದ ಬಹುತೇಕ ಸುರಕ್ಷಿತವಾಗಿದ್ದ ನಗದು ಬೆಳೆ ಎನ್ನಲಾಗುತ್ತಿತ್ತು. ಆದರೆ ಗೋವಾದಲ್ಲಿ ಕೂಡಾ ಕಂಡುಬಂದಿರುವ ಇತ್ತೀಚಿನ ಬೆಳವಣಿಗೆಯಲ್ಲಿ ಕೋತಿಗಳ ಆಹಾರ ಅಭ್ಯಾಸದಲ್ಲಿ ಬದಲಾವಣೆ ಸಂಭವಿಸುತ್ತಿರುವುದನ್ನು ಸೂಚಿಸುತ್ತದೆ. ಇದು ಭವಿಷ್ಯದಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಕರ್ನಾಟಕದ ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗೇರು ಕೃಷಿ ಸಾವಿರಾರು ರೈತರ ಆದಾಯದ ಮೂಲವಾಗಿದೆ. ಅಡಿಕೆ ಬೆಳೆ ಇಲ್ಲಿನ ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಜೋಡಣೆಗೊಂಡಿದೆ.  ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ, ಮಾರುಕಟ್ಟೆ ಅಸ್ಥಿರತೆ ಹಾಗೂ ಕಾರ್ಮಿಕ ಕೊರತೆಯಿಂದಾಗಿ ಗೇರು ರೈತರು ಈಗಾಗಲೇ ಒತ್ತಡದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಉಪಟಳವೂ ಸೇರಿಕೊಂಡರೆ, ಕೃಷಿ ಆರ್ಥಿಕತೆಯ ಮೇಲೆ  ಪರಿಣಾಮ ಬೀರುವ ಸಾಧ್ಯತೆ ಇದೆ.

ಗೇರು ಬೆಳೆ ಇದುವರೆಗೂ ಕೋತಿಗಳ ದಾಳಿಯಿಂದ ಸುರಕ್ಷಿತವಾಗಿತ್ತು. ಆದರೆ ಈಗ ಕಾಣುತ್ತಿರುವ ಪ್ರವೃತ್ತಿ ಮುಂದಿನ ದಿನಗಳಲ್ಲಿ ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಕೇವಲ ವನ್ಯಜೀವಿ ಸಮಸ್ಯೆಯಲ್ಲ, ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ.”

ಗೋವಾದ ಕೃಷಿಕರ ಅನುಭವದಂತೆ, ಕೋತಿಗಳು ಗೇರು ಹಣ್ಣು ಗುಚ್ಛಗಳನ್ನು ಹಾನಿಗೊಳಿಸಿ, ರಸವನ್ನು ಕುಡಿಯುವ ಮೂಲಕ ಬೀಜಗಳನ್ನು ಕೆಳಗೆ ಎಸೆಯುತ್ತಿವೆ. ಇದು ನೇರ ಉತ್ಪಾದನಾ ನಷ್ಟಕ್ಕೆ ಕಾರಣವಾಗುತ್ತಿದೆ.  ಕರಾವಳಿ ಕರ್ನಾಟಕದಲ್ಲೂ ಅರಣ್ಯ ಪ್ರದೇಶಗಳಿಗೆ ಸಮೀಪದ ತೋಟಗಳಲ್ಲಿ ಇದೇ ರೀತಿಯ ಅಪಾಯವೂ ಕೆಲವು ಕಡೆ ಇದೆ. ಆದರೆ ಇನ್ನಷ್ಟು ಅಪಾಯವಾಗುವ ಹಾಗೂ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.

ಕೃಷಿ ತಜ್ಞರ ಪ್ರಕಾರ, ಕಾಡು ಪ್ರಾಣಿ ನಿರ್ವಹಣೆಗೆ ಸಂಬಂಧಿಸಿದ ಪೂರ್ವತಯಾರಿ ಯೋಜನೆಗಳು, ಅರಣ್ಯ ಇಲಾಖೆ–ಕೃಷಿ ಇಲಾಖೆ ನಡುವಿನ ಸಮನ್ವಯ ಕ್ರಮಗಳು, ರೈತರಿಗೆ ಜಾಗೃತಿ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು  ಈಗಲೇ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಗೋವಾದಲ್ಲಿ ಆರಂಭವಾದ ಈ ಸಮಸ್ಯೆಯನ್ನು ಕರ್ನಾಟಕದಲ್ಲಿ ನಿರ್ಲಕ್ಷ್ಯ ಮಾಡಿದರೆ, ಮುಂದಿನ ದಿನಗಳಲ್ಲಿ ಗೇರು ಬೆಳೆಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.  ಹೀಗಾಗಿ ಮುನ್ನೆಚ್ಚರಿಕೆ ಮತ್ತು ಸಮಗ್ರ ನೀತಿ ರೂಪಿಸುವುದು ಅಗತ್ಯವಾಗಿದೆ.

Monkey attacks on cashew plantations in Goa’s Sattari taluk have raised concerns among agricultural experts, who warn that coastal Karnataka could face similar threats. Cashew farming is a major income source for farmers in Dakshina Kannada, Udupi, and Uttara Kannada. Experts stress the need for early preventive measures, coordinated wildlife management, and farmer awareness to avoid future economic losses.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಂಕದ “ಸುರಕ್ಷತೆ”ಯಾ? ಬದುಕಿನ “ಸುರಕ್ಷತೆ”ಯಾ? – ಗ್ರಾಮೀಣ ಶಿಕ್ಷಣದ ಮಣ್ಣಿನ ಸತ್ವ ಕಳೆದುಕೊಳ್ಳದಿರೋಣ
February 15, 2026
5:54 AM
by: ಮಹೇಶ್ ಪುಚ್ಚಪ್ಪಾಡಿ
ಜಾಗತಿಕ ಕೋಕೋ ಬೆಲೆ ಕುಸಿತ | ಘಾನಾದಲ್ಲಿ ಕೋಕೋ ದರ ಭಾರೀ ಇಳಿಕೆ
February 15, 2026
5:50 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror