ಭಾರೀ ಮಳೆಯ ಆತಂಕದ ನಡುವೆ ಕೊಡಗಿನ ಮೊಣ್ಣಂಗೇರಿ ಪ್ರದೇಶದಲ್ಲಿನ ರಾಮಕೊಲ್ಲಿಯ ಸುಮಾರು 25 ಕುಟುಂಬಗಳು ಆತಂಕದಲ್ಲಿವೆ. ಇಲ್ಲಿ ಸೋಮವಾರ ರಾತ್ರಿ ಭಾರೀ ಸದ್ದಿನೊಂದಿಗೆ ಗುಡ್ಡ ಕುಸಿದು ಕೆಸರು ಮಿಶ್ರಿತ ನೀರು ಹರಿಯುತ್ತಿದೆ. ಬೆಟ್ಟದ ಕೆಳಗಿನ ಪ್ರದೇಶದಲ್ಲಿನ ಕೃಷಿ ಭೂಮಿಗಳು ನಾಶವಾಗಿದೆ.
Land slide near Kodagu Monnangeri.
ಕೊಡಗು ಜಿಲ್ಲೆಯ ಮೊಣ್ಣಂಗೇರಿ ಬಳಿ ಸಂಭವಿಸಿದ ಭೂಕುಸಿತ .#landslide #rain #Kodagu #ಮಳೆ #ಭೂಕುಸಿತ #karnatakarains pic.twitter.com/G9NlZUFvQ9Advertisement— theruralmirror (@ruralmirror) July 19, 2022
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಭಾರೀ ಶಬ್ಧದ ಅನುಭವವಾಗಿದ್ದು, ಅಲ್ಲಿ ಹರಿಯುವ ರಾಮಕೊಲ್ಲಿಯಲ್ಲಿ ಭಾರೀ ಪ್ರಮಾಣದ ಕೆಸರು ನೀರು ಹಾಗೂ ಮರದ ದಿಮ್ಮಿಗಳು ಬೆಟ್ಟದಿಂದ ಹರಿದು ಬರುತ್ತಿರುವುದು ಮಂಗಳವಾರ ಮುಂಜಾನೆ ಕಂಡು ಬಂದಿದೆ.2018 ರಲ್ಲಿ ಭೀಕರ ಜಲಸ್ಫೋಟವು ಇದೇ ಪ್ರದೇಶದಲ್ಲಿ ನಡೆದಿತ್ತು. ಹೀಗಾಗಿ ಮತ್ತೆ ಜಲಸ್ಫೋಟ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಜಲಸ್ಫೋಟದ ಕಾರಣದಿಂದ ಭೂ ಕುಸಿತವಾಗಿದೆ. ಮಣ್ಣು, ಕಲ್ಲುಗಳು ಉರುಳಿ, ಮರದ ದಿಮ್ಮಿಗಳು ಕಿಲೋ ಮೀಟರ್‌ಗಟ್ಟಲೆ ತೇಲಿ ಹೋಗಿದೆ. ರಾಮ ಕೊಲ್ಲಿ ಎಂಬಲ್ಲಿ ನಿರ್ಮಾಣ ಹಂತದ ಸೇತುವೆಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ರಾತ್ರಿಯಿಡೀ ಸಂಪರ್ಕ ಕಳೆದುಕೊಂಡು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಸುಮಾರು 25 ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳಲಾಗದೆ ಆತಂಕದಲ್ಲೇ ಸಮಯ ಕಳೆದಿದ್ದಾರೆ. ಮಂಗಳವಾರ ಬೆಳಗ್ಗೆ ಸೇತುವೆಯ ಬಳಿ ವಿದ್ಯುತ್ ಕಂಬಗಳನ್ನಿಟ್ಟು ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ.
ಸ್ಥಳಕ್ಕೆ ಶಾಸಕ ಕೆ. ಜಿ. ಬೋಪಯ್ಯ ಮತ್ತು ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ವೀಕ್ಷಿಸಿದರು.
…………
ರಾಮಕೊಲ್ಲಿಯ ಪ್ರದೇಶದಲ್ಲಿ ಸುಮಾರು 25 ಎಕರೆಯಷ್ಟು ಪ್ರದೇಶದ ಬೆಟ್ಟ ಬಿರುಕು ಬಿಟ್ಟಿದೆ. ಹೀಗಾಗಿ ಇಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ.