ಮುಂಗಾರು ಕೇರಳಕ್ಕೆ ತಡವಾಗಿ ಪ್ರವೇಶ ಕೊಟ್ಟರೂ, ರಾಜ್ಯದಲ್ಲಿ ವರುಣ ಅಷ್ಟಾಗಿ ಇನ್ನೂ ಕೃಪೆ ತೋರಲಿಲ್ಲ. ಮೊದಲೆರಡು ದಿನ ಕರಾವಳಿ ಹಾಗೂ ಬೇಂಗಳೂರಿನಲ್ಲಿ ಮಳೆಯಾಗಿದ್ದು ಬಿಟ್ಟರೆ ಬಹುತೇಕ ಕಡೆ ಮಳೆ ಇನ್ನೂ ಎಂಟ್ರಿಯೇ ಕೊಟ್ಟಿಲ್ಲ. ರೈತಾಪಿ ವರ್ಗ ಬಿತ್ತನೆಗಾಗಿ ಮಳೆರಾಯನನ್ನು ಎದುರು ನೋಡುತ್ತಿದ್ದಾರೆ. ಮುಂಗಾರು ವಿಳಂಬದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಸಂಕಷ್ಟ ಎದುರಾಗಿದೆ.
ಜೂನ್ 15ರ ವರೆಗೆ ಕಾದುನೋಡುವ ದಾರಿಯನ್ನು ಸರ್ಕಾರ ಹಿಡಿದಿದೆ. ಎರಡು ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಮೋಡ ಬಿತ್ತನೆ ಬಗ್ಗೆ ನಿರ್ಧರಿಸಲಾಗುವುದು ಎಂದು ಬೆಳಗಾವಿಯಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ. ಜೂನ್ 15ರಂದು ಸಚಿವ ಸಂಪುಟ ಸಭೆ ಇದೆ. ಅಲ್ಲಿವರೆಗೂ ಮಳೆಯಾಗದಿದ್ದರೆ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಮಳೆಯಾಗದ ಹಿನ್ನೆಲೆ ರಾಜ್ಯದ ಅನೇಕ ತಾಲೂಕುಗಳಲ್ಲಿ ಭತ್ತ ಬಿತ್ತನೆ ಮಾಡಿದ ರೈತರಿಗೆ ಸಂಕಷ್ಟ ಎದುರಾಗಿದೆ. ಒಂದು ವೇಳೆ ಮಳೆಯಾಗದಿದ್ದರೆ ಅವರ ಸಹಾಯಕ್ಕೆ ಸರ್ಕಾರ ಬರುತ್ತದೆಯೇ ಎಂದು ಸುದ್ದಿಗಾರರು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ನೋಡೋಣ ನಾನು ಬೆಂಗಳೂರು ತಲುಪುವುದರೊಳಗೆ ಮಳೆ ಬರುತ್ತದೆ ಅಂತ ಅಂದುಕೊಂಡಿದ್ದೇನೆ, ವಿಶ್ವಾಸ ಇಡೋಣ ಅಂತ ಹೇಳಿದ್ದಾರೆ.
ಎಫ್ಆರ್ಪಿ ದರ ಕೇಂದ್ರದಿಂದಲೇ ಜಾರಿ ಆಗುತ್ತಿದೆ. ನಾವೇನೆನೋ ಚಿಂತನೆ ಮಾಡುತ್ತೇವೆ, ಇದಕ್ಕೆ ಸ್ವಲ್ಪ ಸಮಯ ಕೊಡಬೇಕು. ಕಾಲಾವಕಾಶ ತಗೆದುಕೊಂಡು ಎಲ್ಲವನ್ನೂ ಸರಿ ಮಾಡುತ್ತೇವೆ ಎಂದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರೈತವಿರೋಧಿ ಮೂರು ಕಾಯ್ದೆಗಳ ಕುರಿತು ಚರ್ಚಿಸಿ ಪರಿಶೀಲನೆ ಮಾಡುತ್ತೇವೆ ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel