ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭ | ನಾಳೆ ʼಮೋದಿ 3.0ʼ ಕೇಂದ್ರ ಬಜೆಟ್‌ ಮಂಡನೆ

July 22, 2024
10:57 AM

ಮೂರನೇ ಬಾರಿಗೆಪ್ರಧಾನಿ ನರೇಂದ್ರ ಮೋದಿ (Narendra Modi) ನಾಯಕತ್ವದ ಬಿಜೆಪಿ(BJP) ನೇತೃತ್ವದ ಎನ್‌ಡಿಎ(NDA) ಅಧಿಕಾರಕ್ಕೆ ಬಂದರೂ, ಸುಖ ಅನ್ನೋದು ಇಲ್ಲ. ಸ್ವತಂತ್ರ್ಯವಾಗಿ ಅಧಿಕಾರ ನಡೆಸಲು ಅಡ್ಡಿ, ಪ್ರಬಲವಾದ ವಿರೋಧ ಪಕ್ಷ. ಈ ಎಲ್ಲಾ ಅಡೆ-ತಡೆಗಳ ನಡುವೆ ಆಡಳಿತಾರೂಢ ಎನ್‌ಡಿಎ ಮತ್ತು ಪ್ರಬಲ ವಿಪಕ್ಷ ಇಂಡಿಯಾ ಮೈತ್ರಿಕೂಟದ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನ (Budget Session) ಇಂದಿನಿಂದ ಆರಂಭವಾಗಲಿದೆ.

Advertisement

19 ದಿನಗಳ ಕಾಲ ನಡೆಯಲಿರುವ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ನೀಟ್‌, ನೆಟ್‌ ಪರೀಕ್ಷಾ ಅಕ್ರಮ, ಐಎಎಸ್‌ ಅಧಿಕಾರಿಗಳ ನೇಮಕಾತಿ ವಿವಾದ, ಅಗ್ನಿವೀರ್‌ ಯೋಜನೆ, ಮಣಿಪುರ ಹಿಂಸಾಚಾರ, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ ಮೊದಲಾದ ವಿಷಯಗಳನ್ನು ಮುಂದಿಟ್ಟುಕೊಂಡು ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇಂಡಿಯಾ ಮೈತ್ರಿಕೂಟ ಸಜ್ಜಾಗಿದೆ.

ಈ ಅಧಿವೇಶನದಲ್ಲಿ 5 ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಹಣಕಾಸು ಮಸೂದೆ, 2024. ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, 2024 PRS ಶಾಸನದ ಪ್ರಕಾರ, ವಿಪತ್ತು ನಿರ್ವಹಣೆಯಲ್ಲಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ಪಾತ್ರಗಳಲ್ಲಿ ಸ್ಪಷ್ಟತೆ ಮತ್ತು ಒಮ್ಮುಖವನ್ನು ತರಲು ಪ್ರಯತ್ನಿಸುತ್ತದೆ.  ಭಾರತೀಯ ವಾಯುಯಾನ ವಿಧೇಯಕ- 2024 ಏರ್‌ಕ್ರಾಫ್ಟ್ ಆಕ್ಟ್, 1934 ಅನ್ನು ಬದಲಿಸುತ್ತದೆ. ಅಸ್ಪಷ್ಟತೆಗಳು ಮತ್ತು ಪುನರಾವರ್ತನೆಗಳನ್ನು ಪರಿಹರಿಸಲು, ಉತ್ಪಾದನೆ ಮತ್ತು ವ್ಯವಹಾರವನ್ನು ಸುಲಭಗೊಳಿಸಲು, ಅಂತರರಾಷ್ಟ್ರೀಯ ಸಂಪ್ರದಾಯಗಳ ನಿಬಂಧನೆಗಳನ್ನು ಜಾರಿಗೆ ತರಲು ಮತ್ತು ಅಂತರರಾಷ್ಟ್ರೀಯ ಮಾನದಂಡಗಳನ್ನು ಜಾರಿಗೆ ತರಲು ಅನುವು ಮಾಡಿಕೊಡುತ್ತದೆ.

ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಬಜೆಟ್‌ (Union Budget 2024) ಅನ್ನು ಇದೇ ಜು.23 ರಂದು ಮಂಡಿಸಲಾಗುವುದು. ಮೋದಿ ಸಂಪುಟದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮೋದಿ 3.0 ಬಜೆಟ್‌ ಮಂಡಿಸಲಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮಂಡಿಸಲಾಗುತ್ತಿರುವ ಮೊದಲ ಬಜೆಟ್‌ ಇದಾಗಿದೆ.

  • ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group