Monsoon Update | ಕೇರಳದ ಕಡೆಗೆ ಚಲಿಸುತ್ತಿರುವ ಮುಂಗಾರು ಮಾರುತ | ಜೂನ್‌ ಮೊದಲ ವಾರ ಕರಾವಳಿ ಪ್ರದೇಶದಲ್ಲೂ ಗಾಳಿ ಮಳೆ |

May 30, 2022
5:04 PM
News Summary
ನೈರುತ್ಯ ಮುಂಗಾರು ವೇಗ ಪಡೆಯುತ್ತಿದೆ. ಕೇರಳ ಪ್ರವೇಶ ಆರಂಭವಾಗಿದೆ. ಈಗ ಹವಾಮಾನ ಇಲಾಖೆ ವೆದರ್‌ ಅಪ್ಡೇಟ್‌ ನೀಡಿದೆ.

ನೈರುತ್ಯ ಮುಂಗಾರು ಮಾರುತವು ಆರಂಭದಲ್ಲಿ ದುರ್ಬಲವಾದರೂ ಇದೀಗ ವೇಗ ಪಡೆದುಕೊಂಡಿದೆ. ಕೇರಳದ ಕಡೆಗೆ ಮುಂಗಾರು ಮಾರುತ ಚಲಿಸುತ್ತಿದೆ. ಮೇ.29-30 ಕೇರಳ ಪ್ರವೇಶದ ನಿರೀಕ್ಷೆಯಂತೆಯೇ ಇದೀಗ ಕೇರಳದ ಕೆಲವು ಕಡೆ ಮಳೆ ಆರಂಭವಾಗಿದೆ. ಜೂನ್.‌1 ರ ಸುಮಾರಿಗೆ ಕೇರಳದ ಹಲವು ಕಡೆ ಮಳೆ ಆರಂಭವಾಗಿ ಕೇರಳ ಮತ್ತು ಮಾಹೆ, ತಮಿಳುನಾಡು ಕರಾವಳಿಯಲ್ಲಿ  ಮಳೆಯಾಗಲಿದೆ.  ಜೂ. 02 ಮತ್ತು 03 ಜೂನ್ ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವೆದರ್‌ ಅಪ್ಡೇಟ್‌ ನೀಡಿದೆ.

ನೈಋತ್ಯ ಮಾನ್ಸೂನ್ ಕೇರಳದ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಕೇರಳ ಮತ್ತು ಲಕ್ಷದ್ವೀಪದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜೂನ್ 1ರ ಮೊದಲು ಕೇರಳಕ್ಕೆ ಮುಂಗಾರು ಆಗಮಿಸಲಿದೆ ಎನ್ನುವುದು  ಇನ್ನೊಮ್ಮೆ ಖಚಿತವಾಗಿದೆ. ಮುಂದಿನ 5 ದಿನಗಳಲ್ಲಿ ಕೇರಳ ಮತ್ತು ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು-ಮಿಂಚು ಸಹಿತ  ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ  ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮತ್ತೊಮ್ಮೆ ಅಪ್ಡೇಟ್‌ ನೀಡಿದೆ. ಜೂನ್ 02 ಹಾಗೂ 03 ರಂದು ದಕ್ಷಿಣ ಅಂಡಮಾನ್ ಸಮುದ್ರದ  ಎಲ್ಲಾ ಪ್ರದೇಶಗಳಲ್ಲಿ ಮೀನುಗಾರರು ಈ ಪ್ರದೇಶಗಳಿಗೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror