Advertisement
ವಿಶೇಷ ವರದಿಗಳು

ಮಳೆಗಾಲದ ಪರಿಸರದ ಸೊಬಗು ಜಲವರ್ಣದಲ್ಲಿ ಸೆರೆ – ಗುತ್ತಿಗಾರಿನಲ್ಲಿ ಮೂರು ದಿನಗಳ ‘ಮಾನ್ಸೂನ್ ಕಲರ್ಸ್’ ಚಿತ್ರಕಲಾ ಶಿಬಿರ

Share

ಮಳೆ ಬಿದ್ದಾಗ ಪಶ್ಚಿಮಘಟ್ಟದ ಬೆಟ್ಟಗಳು ಹಸಿರಿನ ಹೊದಿಕೆ ಹೊದ್ದುಕೊಳ್ಳುತ್ತವೆ. ಅಡಿಕೆ-ತೆಂಗಿನ ಮರಗಳ ತುದಿಯ ನೀರಿನ ಹನಿ, ಹಿತವಾದ ಗಾಳಿ ಪ್ರಕೃತಿಗೆ ಸಂಗೀತ ನುಡಿಸುತ್ತದೆ. ಹಳೆಯ ಮನೆಗಳ ಹೆಂಚಿನ ಮೇಲಿಂದ ಜಾರುವ ಮಳೆಯ ಹನಿಗಳು ಪ್ರಕೃತಿಯದೇ ಒಂದು ಚಿತ್ರವಾಗಿ ಕಣ್ಣಿಗೆ ಕಟ್ಟುತ್ತವೆ. ಅಂತಹ ಜೀವಂತ ದೃಶ್ಯಗಳನ್ನು ಕ್ಯಾನ್ವಾಸ್ ಮೇಲೆ ಶಾಶ್ವತಗೊಳಿಸುವ ಸುಂದರ ಪ್ರಯತ್ನಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರು ಸಾಕ್ಷಿಯಾಗುತ್ತಿದೆ. ದಕ್ಷಿಣ ಕನ್ನಡ, ಕಾಸರಗೋಡಿನ ಚಿತ್ರ ಕಲಾವಿದರು ಈಗ ಈ ಕ್ಯಾಂಪ್‌ನಲ್ಲಿದ್ದಾರೆ.

“Monsoon Colours – Watercolour Painting Camp” ಹೆಸರಿನ ಮೂರು ದಿನಗಳ ಜಲವರ್ಣ ಚಿತ್ರಕಲಾ ಕ್ಯಾಂಪ್ ಜುಲೈ 8, ರಿಂದ 10 ನಡೆಯುತ್ತಿದೆ. ಮಳೆಗಾಲದ ಪ್ರಕೃತಿಯ ಬಣ್ಣಗಳನ್ನು ಕುಂಚದ ಮೂಲಕ ಮಾತಾಡಿಸುವ ಅಪರೂಪದ ಕಲಾಯಜ್ಞವಾಗಿ ರೂಪುಗೊಂಡಿದೆ.

ಗುತ್ತಿಗಾರಿನ ಮಳೆ, ಹಸಿರು, ಗ್ರಾಮೀಣ ಬದುಕು, ತೋಟಗಳು, ಹಳೆಯ ಮನೆಗಳು, ಹೊಲಗಳು ಮತ್ತು ಪಶ್ಚಿಮಘಟ್ಟದ ನೈಸರ್ಗಿಕ ಸೊಬಗು ಇವೆಲ್ಲವೂ ಈ ಮೂರು ದಿನಗಳ ಕಾಲ ಕಲಾವಿದರ ಕಣ್ಣಿನಲ್ಲಿ ಹೊಸ ರೂಪ ಪಡೆದು ಜಲವರ್ಣಗಳಲ್ಲಿ ಅರಳಲಿವೆ. ಕ್ಷಣಿಕವಾಗಿ ಕಾಣುವ ಪ್ರಕೃತಿಯ ಸೌಂದರ್ಯವನ್ನು ಶಾಶ್ವತ ಕಲಾಕೃತಿಯನ್ನಾಗಿ ರೂಪಿಸುವ ಸೃಜನಶೀಲ ಯತ್ನವೇ ಈ ಶಿಬಿರದ ವಿಶೇಷತೆ.

ಈ ಕಲಾ ಶಿಬಿರಕ್ಕೆ ಗುತ್ತಿಗಾರಿನ ಮೆಟ್ಟಿನಡ್ಕದ ರಾಜೇಶ್ ನಾಯಕ್ ಅವರು ಹಸಿರು ಪರಿಸರದ ದಾರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಗುತ್ತಿಗಾರಿನ ಮೆಟ್ಟಿನಡ್ಕ, ಕಂದ್ರಪ್ಪಾಡಿ, ಸೇರಿದಂತೆ ಆಸುಪಾಸಿನ ಪ್ರದೇಶಗಳನ್ನು ಆಯ್ಕೆ ಮಾಡಿದ್ದಾರೆ. ಮುಂದೆ ಕುಕ್ಕೆ ಸುಬ್ರಹ್ಮಣ್ಯ, ಕುಮಾರಧಾರಾ, ಕುಲ್ಕುಂದ ಮೊದಲಾದ ಪರಿಸರವನ್ನೂ ಆಯ್ಕೆ ಮಾಡಿದ್ದಾರೆ.  ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರತಿಭಾವಂತ ಜಲವರ್ಣ ಕಲಾವಿದರು ತಮ್ಮದೇ ಕಲಾಶೈಲಿಯ ಮೂಲಕ ಮಳೆಗಾಲದ ಭಾವಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸಲಿದ್ದಾರೆ. ಶಿಬಿರದಲ್ಲಿ ಕಲಾವಿದರುಗಳಾಗಿ ವಿಲ್ಸನ್ ಸೋಜಾ ಕಾಸರಗೋಡು, ದೀರ್ಘ ಮಂಗಳೂರು, ನಿಕಿತ್  ಬೆಳ್ತಂಗಡಿ, ನವೀನ್ ಉಡುಪಿ ಭಾಗವಹಿಸಿದ್ದಾರೆ.

ಇದು ಕೇವಲ ಚಿತ್ರ ಬಿಡಿಸುವ ಶಿಬಿರವಲ್ಲ. ಪ್ರಕೃತಿಯನ್ನು ನೋಡುವ ದೃಷ್ಟಿಯನ್ನು ವಿಸ್ತರಿಸುವ ಕಲಾ ಸಂವಾದವೂ ಹೌದು. ಮಳೆ, ಮಂಜು, ಬೆಳಕು, ನೆರಳು, ಹಸಿರು, ಹಳ್ಳಿಯ ಬದುಕು ಇವೆಲ್ಲವೂ ಕಲಾವಿದರ ಕುಂಚದಲ್ಲಿ ಹೊಸ ಅರ್ಥ ಪಡೆದು, ಪ್ರಕೃತಿಯೊಂದಿಗೆ ಮನುಷ್ಯನ ಬಾಂಧವ್ಯವನ್ನು ಮತ್ತೊಮ್ಮೆ ನೆನಪಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ.

ಗುತ್ತಿಗಾರಿನಂತಹ ಗ್ರಾಮೀಣ ಪರಿಸರದಲ್ಲಿ ಇಂತಹ ಕಲಾ ಶಿಬಿರ ಆಯೋಜನೆಯಾಗುತ್ತಿರುವುದು ತೀರಾ ಅಪರೂಪ. ಸ್ಥಳೀಯ ಪ್ರಕೃತಿ ವೈಭವವನ್ನು ರಾಷ್ಟ್ರಮಟ್ಟದ ಕಲಾ ಲೋಕಕ್ಕೆ ಪರಿಚಯಿಸುವ ಹೆಜ್ಜೆಯೂ ಇದಾಗಿದೆ. ಮಳೆಗಾಲದ ಸೌಂದರ್ಯವನ್ನು ಕೇವಲ ಕಣ್ಣಿನಲ್ಲಿ ಮಾತ್ರವಲ್ಲ, ಕಲಾಕೃತಿಗಳಲ್ಲೂ ಉಳಿಸಬೇಕೆಂಬ ಆಶಯದೊಂದಿಗೆ ನಡೆಯುತ್ತಿರುವ ಈ “ಮಾನ್ಸೂನ್ ಕಲರ್ಸ್” ಶಿಬಿರವು ಪ್ರಕೃತಿ ಮತ್ತು ಕಲೆಯ ಸುಂದರ ಸಂಗಮವಾಗಿ ಗಮನ ಸೆಳೆಯುತ್ತಿದೆ.

ಪ್ರಕೃತಿ ಬಣ್ಣಗಳನ್ನು ಕೊಡುತ್ತದೆ… ಕಲಾವಿದ ಅದಕ್ಕೆ ಜೀವ ತುಂಬುತ್ತಾನೆ.  ಗುತಿಗಾರಿನಲ್ಲಿ ನಡೆಯುತ್ತಿರುವ ಈ ಕಲಾಯಜ್ಞ ಅದನ್ನೇ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

A three-day Monsoon Colours Watercolour Landscape Camp is being held at Guthigar near Subrahmanya from July 8–10, 2026. Curated by Rajesh Nayak, the camp brings together watercolour artists from Kasaragod, Mangaluru, Belthangady and Udupi to capture the beauty of the monsoon landscape.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬ್ಯಾಂಕ್‌ ಮುಷ್ಕರ ಮುಂದೂಡಿಕೆ – ಇಂದು ಎಂದಿನಂತೆ ಬ್ಯಾಂಕ್‌ ಸೇವೆ

ಸೆ.28ರಿಂದ 30ರವರೆಗೆ ನಡೆಯಬೇಕಿದ್ದ ರಾಷ್ಟ್ರವ್ಯಾಪಿ ಮೂರು ದಿನಗಳ ಬ್ಯಾಂಕ್‌ ಮುಷ್ಕರವನ್ನು ಕೊನೆ ಕ್ಷಣದಲ್ಲಿ…

1 hour ago

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

9 hours ago

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

12 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

18 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

21 hours ago