Advertisement
ಸುದ್ದಿಗಳು

ಮುಂದಿನ ವರ್ಷದಿಂದ 1–10ನೇ ತರಗತಿಗೆ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯ | ಸಚಿವ ಮಧು ಬಂಗಾರಪ್ಪ ಘೋಷಣೆ

Share

ರಾಜ್ಯದ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 10ನೇ ತರಗತಿಯವರೆಗೆ ‘ನೈತಿಕ ವಿಜ್ಞಾನ’ (Moral Science) ಪಠ್ಯಪುಸ್ತಕವನ್ನು ಪರಿಚಯಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.

ಸಮಗ್ರ ಶಿಕ್ಷಣ ಕರ್ನಾಟಕ ಮತ್ತು WWF (World Wide Fund for Nature) ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ‘ಮಿಷನ್ ಪ್ರಕೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಹತ್ತು ಅತ್ಯುತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದದೆ, ವಿಷಯಗಳನ್ನು ಆಳವಾಗಿ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ವಿದ್ಯಾರ್ಥಿಗಳು ಪರಿಸರ ಜಾಗೃತಿ ಮತ್ತು ತ್ಯಾಜ್ಯ ನಿರ್ವಹಣೆ ಸೇರಿದಂತೆ ಸಮಾಜಪರ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ಇಂದಿನ ಶಿಕ್ಷಣದ ಪ್ರಮುಖ ಗುರಿಯಾಗಬೇಕು. ಈ ಹಿನ್ನೆಲೆಯಲ್ಲಿ ‘ನೈತಿಕ ವಿಜ್ಞಾನ’ ಪಠ್ಯ ಪರಿಚಯವು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಾಳ್ಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Karnataka School Education Minister Madhu Bangarappa announced that Moral Science will be introduced as a subject for students from Classes 1 to 10 starting next academic year. The initiative aims to promote value-based education, environmental awareness, and responsible behavior among students.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 16-03-2026 | ಹವಾಮಾನದಲ್ಲಿ ಏಕಾಏಕಿ ಬದಲಾವಣೆ – ರಾಜ್ಯದ ಹಲವೆಡೆ ಸಂಜೆ ಮಳೆ ಸಾಧ್ಯತೆ

ರಾಜ್ಯದ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕರಾವಳಿ, ಮಲೆನಾಡು ಹಾಗೂ…

2 hours ago

ಎಲ್ಲೆಡೆ ಹೆಚ್ಚಾಗುತ್ತಿರುವ ಬಿಸಿಲ ಬೇಗೆ ; ಪ್ರಾಣಿ-ಪಕ್ಷಿಗಳಿಗೆ ನೀರಿನ ಅಭಾವ

ಬೇಸಿಗೆ ಬಿಸಿಲು ತೀವ್ರಗೊಳ್ಳುತ್ತಿದ್ದಂತೆ ಜನ, ಜಾನುವಾರುಗಳ ಜೊತೆಗೆ ಪ್ರಾಣಿ-ಪಕ್ಷಿಗಳಿಗೂ ನೀರು ಮತ್ತು ಆಹಾರದ…

10 hours ago

ಮಹಿಳಾ ಕೃಷಿಕರ ಸಬಲೀಕರಣಕ್ಕೆ ಜಾಗತಿಕ ಘೋಷಣೆ : 900ಕ್ಕೂ ಹೆಚ್ಚು ಕೃಷಿ ಸಂಸ್ಥೆಗಳನ್ನು ಜೋಡಿಸುವ ರಾಷ್ಟ್ರೀಯ ಜೆಂಡರ್ ಪ್ಲಾಟ್‌ಫಾರ್ಮ್‌ ಘೋಷಣೆ

ಕೃಷಿ-ಆಹಾರ ವ್ಯವಸ್ಥೆಯಲ್ಲಿ ಮಹಿಳೆಯರ ನಾಯಕತ್ವ ಬಲಪಡಿಸಲು ಜಾಗತಿಕ ಸಮ್ಮೇಳನದಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳಲಾಗಿದೆ.…

10 hours ago

ಮುಂಗಾರು ಬೆಳೆ ಋತುವಿಗೆ ಸಕಲ ಸಿದ್ದತೆ | ದೇಶದಲ್ಲಿ ರಸಗೊಬ್ಬರ ದಾಸ್ತಾನು ದ್ವಿಗುಣ

ಖಾರೀಫ್‌ ಬೆಳೆಗಾಲಕ್ಕೆ ರೈತರಿಗೆ ಕೊರತೆ ಆಗದಂತೆ ದೇಶದಲ್ಲಿ ರಸಗೊಬ್ಬರ ದಾಸ್ತಾನು ಹೆಚ್ಚಿಸಲಾಗಿದೆ. ಯೂರಿಯಾ…

19 hours ago

ಹವಾಮಾನ ವರದಿ | 15-03-2026 | ಬಿಸಿಲಿನ ಮಧ್ಯೆ ಮಳೆ ಅಬ್ಬರ – ರಾಜ್ಯದ ಹಲವೆಡೆ ಸಂಜೆ ಗುಡುಗು ಮಳೆ ಸಾಧ್ಯತೆ

ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಂಜೆ–ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ…

1 day ago

ಹವಾಮಾನ ಚಕ್ರಗಳೇ ಬದಲಾಗುತ್ತಿವೆ | ಲಾ ನೀನಾ ಪರಿಣಾಮ ಕಡಿಮೆ, ಉಷ್ಣ ಅಲೆಗಳ ಭೀತಿ ಹೆಚ್ಚಳ

ಹವಾಮಾನ ಬದಲಾವಣೆಯಿಂದ ಲಾ ನೀನಾದ ತಂಪು ಪರಿಣಾಮ ದುರ್ಬಲವಾಗಿ ಭಾರತದಲ್ಲಿ ಬೇಸಿಗೆ ಮುಂಚಿತವಾಗಿ…

1 day ago