ಲಾಲ್ ಬಾಗ್, ಉದ್ಯಾನನಗರಿಗೆ ಒಂದು ಕಿರಿಟ ಇದ್ದಂತೆ, ಬೆಂಗಳೂರಿಗೆ ಬಂದವರು ಲಾಲ್ ಬಾಗ್ ಗೆ ಭೇಟಿ ಕೊಟ್ಟೇ ಹೋಗುತ್ತಾರೆ. ಅಲ್ಲಿನ ಹಸಿರು, ತಂಪಾದ ಗಾಳಿ, ಉಲ್ಲು ಹಾಸು, ಸುಂದರ ಹೂವಿನ ತೋಟ, ಬಹು ವರ್ಷಗಳ ಮರಗಳು ಎಲ್ಲವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿಯಾಗೆ ಲಾಲ್ ಬಾಗ್ ನಲ್ಲಿ ಹೂಗಳ ಹಬ್ಬ, ಫ್ಲವರ್ ಶೋ ನಡೆಯುತ್ತಿದೆ. ಆರಂಭವಾಗಿ ಇವತ್ತಿಗೆ 12ನೇ ದಿನ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಿದೆ. ಬಗೆ ಬಗೆ ಹೂವುಗಳು ಜನರ ಕಣ್ಮನ ಸೆಳೆಯುತ್ತಿವೆ.
ಫ್ಲವರ್ ಶೋ ಶುರುವಾದಗಿನಿಂದ ಜನಗಳು ಅದನ್ನು ನೋಡಲು ಹೋಗ್ತಾ ಇದ್ದಾರೆ. ಅದರಲ್ಲೂ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲೇ ಜನ ಅಲ್ಲಿಗೆ ಹೋಗಿದ್ದಾರೆ. ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಲ್ಲಿಯವರೆಗೆ 4 ಲಕ್ಷ ಮಂದಿ ಭೇಟಿ ಕೊಟ್ಟಿದ್ದಾರೆ. ಇಂದು ಆಗಸ್ಟ್ 15 ಫಲಪುಷ್ಪ ಪ್ರದರ್ಶನ ಕೊನೆ ದಿನವಾಗಿದ್ದು, ಭಾರಿ ಸಂಖ್ಯೆಯಲ್ಲಿ ಜನ ಭೇಟಿ ನೀಡುವ ಸಾಧ್ಯತೆ ಇದೆ. ಆಗಸ್ಟ್ 15ರ ಮಂಗಳವಾರದಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.
214 ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೆ ಅರ್ಪಿಸಲಾಗಿದೆ.ವಿಧಾನಸೌಧದ 18 ಅಡಿ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯ ಪ್ರತಿಮೆ ಇದೆ.ತೋಟಗಾರಿಕಾ ಇಲಾಖೆಯು ಈವರೆಗೆ ಪ್ರದರ್ಶನಕ್ಕೆ ಭೇಟಿ ನೀಡಿದ ಜನರಿಗೆ ಒಟ್ಟು 1.8 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ಗಳನ್ನು ಮಾರಾಟ ಮಾಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.ಫಲಪುಷ್ಪ ಪ್ರದರ್ಶನಕ್ಕೆ ಹಿರಿಯರಿಗೆ 70 ರೂಪಾಯಿ, ಮಕ್ಕಳಿಗೆ 30 ರೂಪಾಯಿ ಹಾಗೂ ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ನೀಡಲಾಗುತ್ತಿದೆ.
ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಿಗೆ, ಮಹಿಳೆಯರಿಗೂ ಸಹ ಕೆಲ ಕಾರ್ಯಕ್ರಮಗಳು ಇವೆ. ಲಾಲ್ ಬಾಗ್ ಶುಚಿತ್ವದ ಉದ್ಯಾನವನ. 140 ಎಕರೆ ವಿಸ್ತಿರ್ಣ ಇರೋ ಉದ್ಯಾನ, ಇಲ್ಲಿ ಎಲ್ಲ ರೀತಿಯ ಮರಗಿಡಗಳು ಇವೆ. ಕೆಂಗಲ್ ಹನುಮಂತಯ್ಯ 40 ಎಕರೆ ಅಕ್ವೈರ್ ಮಾಡಿ, ವಿಸ್ತೀರ್ಣ ಹೆಚ್ಚಿಸಿದ್ದಾರೆ. ಲಾಲ್ಬಾಗ್ನಲ್ಲಿ ವರ್ಷಕ್ಕೆ ಎರಡು ಬಾರಿ ಗಣರಾಜ್ಯ ಮತ್ತು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ.