ಈಗಂತೂ ನಗರ ಪ್ರದೇಶಗಳಲ್ಲಿ ಗಾಳಿ ಎಷ್ಟರ ಮಟ್ಟಿಗೆ ಮತ್ತು ಎಷ್ಟು ವೇಗವಾಗಿ ಕಲುಷಿತವಾಗುತ್ತಿದೆ ಎಂದರೆ, ಜನರು ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೋದರೆ ಒಳ್ಳೆಯದು ಅಂತ ಅವರಿಗೆ ಅನ್ನಿಸಲು ಶುರುವಾಗಿದೆ. ದಿನೇ ದಿನೇ ರಸ್ತೆಯ ಮೇಲೆ ವಾಹನ ದಟ್ಟಣೆ ಜಾಸ್ತಿ ಆಗುತ್ತಿದ್ದು, ಅವುಗಳು ಬಿಡುವ ಹೊಗೆಯು ಗಾಳಿಯಲ್ಲಿ ಹೋಗಿ ಸೇರಿಕೊಳ್ಳುತ್ತಿದೆ ಮತ್ತು ಖಾಲಿ ಇರುವ ಸೈಟ್ ಗಳಲ್ಲಿ ಜನರು ಈ ಕಸವನ್ನು ರಾಶಿ ರಾಶಿ ಹಾಕಿ ಅದಕ್ಕೆ ಬೆಂಕಿ ಹಚ್ಚುವುದರಿಂದ ಆ ಹೊಗೆಯು ಸಹ ನಮ್ಮ ಗಾಳಿಯಲ್ಲಿ ಸೇರಿಕೊಳ್ಳುತ್ತಿದೆ. ಇಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಮತ್ತು ವಾಹನಗಳ ಟಯರ್ ಗಳನ್ನು ಸುಡುವುದು ಇವೆಲ್ಲವೂ ನಾವು ತೆಗೆದುಕೊಳ್ಳುವ ಗಾಳಿಯನ್ನು ಕಲುಷಿತಗೊಳಿಸುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ವಿಶ್ವದ 20 ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ 14 ನಗರಗಳು ಭಾರತದ ದೇಶಕ್ಕೆ ಸೇರಿವೆ ಎನ್ನುವುದು ಆಘಾತಕಾರಿ ವಿಷಯವಾಗಿದೆ. ಮಾಲಿನ್ಯ ಎಲ್ಲಾ ಕಡೆ ವಿಪರೀತವಾಗುತ್ತಿದೆ. ವಿಶ್ವದ 20 ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ 14 ನಗರಗಳು ಭಾರತದ ದೇಶಕ್ಕೆ ಸೇರಿವೆ ಎನ್ನುವುದು ಆಘಾತಕಾರಿ ವಿಷಯವಾಗಿದೆ. ಈ ವರದಿ ದೇಶದಲ್ಲಿ ಮಾಲಿನ್ಯದ ಸ್ಥಿತಿಯನ್ನು ತೋರಿಸುತ್ತಿದ್ದು, ಈ ವಿಚಾರದಲ್ಲಿ ಎಚ್ಚರಿಕೆ ವಹಿಸದಿದ್ದರೆ ಮುಂದೆ ತೊಂದರೆಯಾಗಲಿದೆ ಎಂಬ ಎಚ್ಚರಿಕೆ ರವಾನಿಸಿದಂತಿದೆ. ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್ ಮತ್ತು ಬಾಂಗ್ಲಾದೇಶವು ವಿಶ್ವದ ಅತ್ಯಂತ ಕಲುಷಿತ ದೇಶಗಳಾಗಿವೆ. ಭಾರತ ಎಂಟನೇ ಸ್ಥಾನದಲ್ಲಿದೆ. ವಾಯುಮಾಲಿನ್ಯ ಸೂಚ್ಯಂಕದಲ್ಲಿ ಹಿಂದಿನ ವರ್ಷಕ್ಕಿಂತ ಮೂರು ಸ್ಥಾನಗಳನ್ನು ಸುಧಾರಿಸಿದರೂ ಕೂಡ, 2022 ರಲ್ಲಿ ಭಾರತದ ಮಾಲಿನ್ಯ ಸ್ಥಿತಿ ಕೆಟ್ಟದಾಗಿದೆ ಎಂದು ವರದಿ ಹೇಳಿದೆ. ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ IQAir ವರದಿ ಪ್ರಕಾರ ವಿಶ್ವದ 20 ಕಲುಷಿತ ನಗರಗಳ ಪಟ್ಟಿಯನ್ನೂ ಪ್ರಕಟಿಸಿದ್ದು, ಇದರಲ್ಲಿ ಭಾರತದ 14 ನಗರಗಳು ಸ್ಥಾನ ಪಡೆದಿದೆ.
IQAir ವಾರ್ಷಿಕ ವರದಿಯಲ್ಲಿ ವಿಶ್ವದ ಅಗ್ರ 50 ಕಲುಷಿತ ನಗರಗಳ ಪಟ್ಟಿಯಲ್ಲೂ 38 ನಗರಗಳು ಭಾರತದಿಂದ ಬಂದಿವೆ. ಇದು ದೇಶದಲ್ಲಿ ಎಷ್ಟು ಮಾಲಿನ್ಯ ಹರಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.ವಿಶ್ವದ ಅತ್ಯಂತ ಕಲುಷಿತ ನಗರಗಳ ಪೈಕಿ ಅಗ್ರಸ್ಥಾನದಲ್ಲಿ ಪಾಕಿಸ್ತಾನದ ಲಾಹೋರ್ ಇದ್ದರೆ, ಚೀನಾದ ಹೋಟಾನ್ ಎರಡನೇ ಸ್ಥಾನದಲ್ಲಿದೆ. ಭಾರತದ ಭಿವಂಡಿ ಮೂರನೇ ಸ್ಥಾನದಲ್ಲಿದೆ. ಭಾರತದ ಕಲುಷಿತ ನಗರಗಳು ಇಂತಿವೆ: ಭಿವಂಡಿ, ನವದೆಹಲಿ, ದರ್ಭಾಂಗ,ಅಸೋಪುರ್, ಪಾಟ್ನಾ, ಗಾಜಿಯಾಬಾದ್, ಧರುಹೆರಾ, ಛಾಪ್ರಾ, ಮುಜಫರ್ನಗರ, ಗ್ರೇಟರ್ ನೋಯ್ಡಾ, ಬಹದ್ದೂರ್ಗಢ್, ಫರಿದಾಬಾದ್, ಮುಜಫರ್ಪುರ ಸೇರಿವೆ.