Advertisement
MIRROR FOCUS

ಅಮ್ಮನಲ್ಲವೇ ಆಕೆ ?! | ಮೊದಲ ಗುರು ಅವಳೇ ಅಲ್ಲವೇ…!

Share
ಮಗುವಿನ ತೊದಲು ನುಡಿಗೆ ಅಮ್ಮನೇ ಮುನ್ನುಡಿ, ಪ್ರಥಮ ಹೆಜ್ಜೆಗೆ , ಅಮ್ಮನದೇ ಆಲಿಂಗನ ಕಂದನೆಲ್ಲಾ ಬೆಳವಣಿಗಗೆ, ಅಮ್ಮನದೇ ರಾಯಭಾರ ಮೊದಲು ಕೊನೆಯಿಲ್ಲದೆಲ್ಲಾ ಆಗು ಹೋಗುಗಳ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡು ಹೊಗಳಿಕೆಗೂ  ತೆಗಳಿಕೆಗಳೆರಡನ್ನೂ ತನ್ನದೆಂದೇ ಸ್ವೀಕರಿಸುವ ಅಮ್ಮನಿಗಮ್ಮನೇ  ಸಾಟಿ.

ತನ್ನದೆಲ್ಲವೂ ತನ್ನದಾಗಿದ್ದರೂ ತನ್ನದಲ್ಲದ  ಸ್ಥಿತಿ ಅಮ್ಮನದ್ದು.  ಅಪ್ಪ ಅಮ್ಮನ ಮುದ್ದಿನ ಮಗಳು ಪತ್ನಿಯಾಗಿ ಹೊಸ ಸ್ಥಾನವನ್ನು ಪಡೆದು  ಹೊಸಿಲು ದಾಟಿ ಸೇರಿದ ಮನೆಯೇ ತನ್ನದೆಂದು  ನವ ಜೀವನವನ್ನು ಆರಂಭಿಸುವಳು..‌ ತನ್ನದೆಂಬ  ಮನಸಿನ ಮಾತಿಗೆ ಕಿವಿಯಾಗುತ್ತಾ ಕನಸಿನ ಹಾದಿಯ ಮರೆವಳು, ವಾಸ್ತವಕ್ಕೆ ಮೈಯೊಡ್ಡುತಾ  ಬದುಕಿನ ದಾರಿಗೆ ಸಿದ್ಧಳಾಗುವಳು.  ಮನೆಯ ಆಗು ಹೋಗುಗಳಿಗೆ  ಸ್ಪಂದಿಸುವ ಮನಸಿರುವುದು ಅಮ್ಮನಿಗೆ. ಇಲ್ಲಗಳ ಸರಮಾಲೆಯನ್ನೆಂದೂ ಪಟ್ಟಿ ಮಾಡದೆ, ಇರುವುದರಲ್ಲೇ  ತೃಪ್ತಿ  ಕಾಣುವುದು ಅಮ್ಮನಿಗೆ ಮಾತ್ರ ಸಾಧ್ಯ.

ಕೊರೊನಾ  ಸಂಕಷ್ಟ  ಸಮಯದಲ್ಲಿ ತಾನು ಧೈರ್ಯಗುಂದದೆ   ದಿನಕ್ಕೊಂದು ಕಷಾಯ , ತಂಬುಳಿ ಮಾಡಿ ಮಾನಸಿಕ  ಸ್ಥೈರ್ಯ ತುಂಬುವುದು ಅಮ್ಮಂದಿರ ಮನಸಿಗೆ ಮಾತ್ರ ಸಾಧ್ಯ.

***********************************************************

ಕನ್ನಡಿಯೊಳಗಿನ ಗಂಟು

ಸುಮ್ಮನೇ ಹೇಳುವುದಿಲ್ಲ ಅಮ್ಮೆಂನೆಂದರೆ ಕನ್ನಡಿಯೊಳಗಿನ ಗಂಟು, ಅರ್ಥವಾಗದು ಆಕೆಯ ಮನಸು.
ಅಮ್ಮನಲ್ಲವೇ ಆಕೆ!
ತೊರೆಗೊಂದು ಗುರಿಯಿದೆ
ಅದು ನದಿಯ ಸೇರುವುದು,

ಅಮ್ಮನಿಗೂ ಒಂದು ಗುರಿಯಿದೆ
ಅದು ಮಕ್ಕಳು  ದಡ ಸೇರಲೆಂದು
ಹಗಲೆನ್ನದೆ  ಇರುಳೆನ್ನದೆ  ಬೆವರ
ಹರಿಸುವಳು ಗುರಿಯೆಡೆಗೆ .

ಸಾಗಲು ತೊರೆಯಂತೆ ನದಿಯೆಡೆಗೆ
ಹಸಿವು ನೀರಾಡಿಕೆಯ ಅರಿವಿರದೆ
ಪಯಣವೆಲ್ಲವೂ ಗುರಿಯೆಡೆಗೆ

ಪಯಣ ಗಮ್ಯದತ್ತಲಿರುವಾಗ ಯಾವುದೂ ಬಾಧಿಸದು
ಜ್ವರ, ಶೀತ, ಕಾಲು ನೋವು ಲೆಕ್ಕಕ್ಕಿಲ್ಲದೆ
ಗಮನವತ್ತಲೇ ಗುರಿಯೆಡೆಗೆ

ಮಾತೆಯ ಕಷ್ಟವ ನೋಡಿ ಬೆಳೆದ ಮಕ್ಕಳಿಗೆ ಆದರ್ಶವಾಗುವುದು ಅಮ್ಮನ ನಡೆಯೇ.
ಮಕ್ಕಳೂ ನಡೆಯುವರು ತಮ್ಮ ಗುರಿಯಡೆಗೆ.

ಮಕ್ಕಳು ನಿದ್ದೆಗೆಟ್ಟರೆ ಮರುಗುವಳು ಮಾತೆ
ಆಕೆಗರಿಯದೆ ಮಕ್ಕಳು
ಸಾಗುತಿರುವರು ಅವರ ಗುರಿಯೆಡೆಗೆ
ಅಮ್ಮನ ಮನಸು ಕನ್ನಡಿಯೊಳಗಿನ ಗಂಟು
ಅರ್ಥವಾಗದು ಎಂದಿಗೂ,
ಆಕೆ ಅಮ್ಮನಲ್ಲವೇ
ಸಾಗುವುದೊಂದೇ ಗೊತ್ತು ಗುರಿಯೆಡೆಗೆ

 

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

3 hours ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

7 hours ago

ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು

ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…

1 day ago

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

1 day ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

2 days ago