ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ಕೇಂದ್ರ ಆರಂಭ

February 22, 2023
11:25 PM

ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಿಂದ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು 2023ನೇ ಸಾಲಿಗೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‍ಗೆ 11,750 ರೂ.ಗಳಂತೆ ಖರೀದಿಗೆ ಜಿಲ್ಲೆಯಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.

Advertisement
Advertisement
Advertisement
Advertisement

ಖರೀದಿಗೆ ಅಗತ್ಯವಿರುವ ದಾಖಲೆಗಳ ವಿವರ: ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು 2023ರ ಮಾರ್ಚ್ 12ರೊಳಗೆ ನೋಂದಾಯಿಸಿ ನೋಂದಣಿ ಚೀಟಿ ಪಡೆಯಬೇಕು. 2022-23ನೇ ಸಾಲಿನ ಪಹಣಿ ಪತ್ರ, ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು, ರೈತರ ಬಳಿ ಫ್ರೂಟ್ಸ್ ಐಡಿ ಇಲ್ಲದೇ ಇದ್ದಲ್ಲಿ ಅಥವಾ ಪ್ರೂಟ್ಸ್‍ನಲ್ಲಿ ಯಾವುದಾದರು ಮಾಹಿತಿ ಲಭ್ಯವಿಲ್ಲದಿದ್ದಲ್ಲಿ, ತಪ್ಪಿದ್ದಲ್ಲಿ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ (ಆಧಾರ್ ಕಾರ್ಡ್‍ನೊಂದಿಗೆ ಜೋಡಣೆಗೊಂಡ) ಪುಸ್ತಕದ ನಕಲು ಪ್ರತಿ. ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಉತ್ಪನ್ನವನ್ನು ಕೇಂದ್ರಕ್ಕೆ ಮಾರಲು ತರುವುದು. ಪ್ರತಿ ಎಕರೆಗೆ 6 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ನಿಗಧಿತ ಅವಧಿಯೊಳಗೆ ನೋಂದಣಿಗೊಂಡ ಪ್ರತಿ ರೈತರಿಂದ ಗರಿಷ್ಠ 20ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು. ಉಂಡೆ ಕೊಬ್ಬರಿ ಉತ್ಪನ್ನವನ್ನು 2023ರ ಜುಲೈ27ರ ವರೆಗೆ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖರೀದಿಸಲಾಗುವುದು.

Advertisement

ತಾಲೂಕು, ಖರೀದಿ ಕೇಂದ್ರ ಹಾಗೂ ಸ್ಥಳ, ಖರೀದಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರ ಹೆಸರು ಹಾಗೂ ಅವರ ಮೊಬೈಲ್ ಸಂಖ್ಯೆಯ ವಿವರಗಳು ಕ್ರಮವಾಗಿ ಇಂತಿವೆ:

ಮಂಗಳೂರು ತಾಲೂಕಿನ ಮಂಗಳೂರಿನ ಪದು ಶಕ್ತಿನಗರ ಕೇಂದ್ರದ ವಿರೇಂದ್ರ ಎಸ್-9663758820, ಮೂಡಬಿದ್ರೆ ತಾಲೂಕಿನ ಮೂಡಬಿದ್ರೆಯ ಅಲಂಗಾರು ಕೇಂದ್ರದ ಚೇತನ್ ನಾಯಕ್ ಎಂ.ಎಸ್-9739392423, ಬಂಟ್ವಾಳ ತಾಲೂಕಿನ ಕಳ್ಳಿಗೆಯಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್. ಆವರಣ ಕೇಂದ್ರದ ವಿರೇಂದ್ರ ಎಸ್. – 9663758820, ಬೆಳ್ತಂಗಡಿ ತಾಲೂಕಿನ ಎ.ಪಿ.ಎಂ.ಸಿ ಕೇಂದ್ರ, ಪುತ್ತೂರು ತಾಲೂಕಿನ ಎ.ಪಿ.ಎಂ.ಸಿ ಕೇಂದ್ರ ಹಾಗೂ ಸುಳ್ಯ ತಾಲೂಕಿನ ಎ.ಪಿ.ಎಂ.ಸಿ ಕೇಂದ್ರದ ಸಂಪತ್ – 9449864424, ಮಂಗಳೂರು ತಾಲೂಕಿನ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣ ಕೇಂದ್ರದ ಚೇತನ್ ನಾಯಕ್ ಎಂ.ಎಸ್. – 9739392423 ಅವರನ್ನು ಸಂಪರ್ಕಿಸಬಹುದು.

Advertisement
ದ ಕ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಯಾವುದೇ ಸಂದರ್ಭದಲ್ಲೂ ರೈತರು ಮಧ್ಯವರ್ತಿಗಳ ಮೊರೆ ಹೋಗದಂತೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ | ಅಹೋ ರಾತ್ರಿ ಶಿವ ಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ
February 27, 2025
12:10 AM
by: The Rural Mirror ಸುದ್ದಿಜಾಲ
ಈಶಾ ಫೌಂಡೇಷನ್ ನಿಂದ ಶಿವರಾತ್ರಿ | ಆತ್ಮ ಜಾಗೃತಿಯ ರಾತ್ರಿ, ಆತ್ಮಕ್ಕೆ ಮೂಲ ಆಧಾರ
February 26, 2025
11:52 PM
by: The Rural Mirror ಸುದ್ದಿಜಾಲ
ಶಿವರಾತ್ರಿ | ನೇಪಾಳದ ಪಶುಪತಿನಾಥನಿಗೆ ವಿಶೇಷ ಪೂಜೆ- ಲಕ್ಷಾಂತರ ಭಕ್ತಾದಿಗಳಿಂದ ದರ್ಶನ
February 26, 2025
11:45 PM
by: The Rural Mirror ಸುದ್ದಿಜಾಲ
ಮಹಾಕುಂಭದಿಂದ ನಿರ್ಗಮಿಸಲು ವಿಶೇಷ ರೈಲು ಸಂಚಾರ | ಪ್ರಯಾಗ್‌ರಾಜ್‌ನಿಂದ 350 ಕ್ಕೂ ಹೆಚ್ಚು ರೈಲು ಓಡಾಟ
February 26, 2025
11:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror