ಕೇರಳ ಸರ್ಕಾರವು ರಬ್ಬರ್ ರೈತರಿಗೆ 42.57 ಕೋಟಿ ರೂ ಸಬ್ಸಿಡಿ ಮಂಜೂರು ಮಾಡಿದೆ. ರಬ್ಬರ್ ಮಾರುಕಟ್ಟೆಯ ಈಗಿನ ಮಾರುಕಟ್ಟೆಯ ಸ್ಥಿತಿಗತಿ ಗಮನಿಸಿ ರಬ್ಬರ್ ಪ್ರೋತ್ಸಾಹ ಕಾರ್ಯಕ್ರಮವನ್ನು ಕೇರಳ ಸರ್ಕಾರ ಆರಂಭ ಮಾಡಿತ್ತು. ಇದೀಗ ವಲಯದ ರೈತರಿಗೆ 42.57 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ಮಂಜೂರು ಮಾಡುವುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ.
ಈ ಸಬ್ಸಿಡಿಯಿಂದ ಕೇರಳ ರಾಜ್ಯದ 1,45,564 ರಬ್ಬರ್ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಕೇರಳ ಹಣಕಾಸು ಸಚಿವ ಬಾಲಗೋಪಾಲ್ ತಿಳಿಸಿದ್ದಾರೆ. ಈ ಮಂಜೂರಾತಿಯೊಂದಿಗೆ ಸರ್ಕಾರವು ರಬ್ಬರ್ ಬೆಳೆಗಾರರಿಗೆ ಈ ಆರ್ಥಿಕ ವರ್ಷಕ್ಕೆ ಒಟ್ಟು 124.88 ಕೋಟಿ ರೂ.ಗಳನ್ನು ಸಬ್ಸಿಡಿಯಾಗಿ ವಿತರಿಸಿದೆ. ಸಬ್ಸಿಡಿ ವಿತರಣೆಯು ರಬ್ಬರ್ ಮಂಡಳಿಯಿಂದ ಗುರುತಿಸಲ್ಪಟ್ಟ ರೈತರ ಪಟ್ಟಿಯನ್ನು ಆಧರಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel