ಮುಯಿಜು಼ ಎನ್ನುವ ಚೈನೀಸ್ ನಾಯಿ | ಭಾರತ ಮಾಡಿದ ಸಹಾಯ ಮರೆತ ಮಾಲ್ಡೀವ್ಸ್‌ನ ಪ್ರಧಾನಿ |

March 9, 2024
3:01 PM

ಮುಯಿಜು಼ ಎನ್ನುವ ಚೈನೀಸ್(China)ನಾಯಿ – ಇವನ ಹೆಸರು ಮೊಹಮ್ಮದ್ ಮುಯಿಜು಼(Mohammad Muizzu), ಕೆಲ ತಿಂಗಳ ಹಿಂದೆ ನೆರೆ ರಾಷ್ಟ್ರ ಮಾಲ್ಡೀವ್ಸ್ ನಲ್ಲಿ(Maldives) ನಡೆದ ಚುನಾವಣೆಯಲ್ಲಿ ಗೆದ್ದು ಆ ದೇಶದ ರಾಷ್ಟ್ರಪತಿಯಾಗಿ(President) ಅಧಿಕಾರ ವಹಿಸಿಕೊಂಡ. ದೈಹಿಕವಾಗಿ ನೋಡೋಕೆ ಜೀವನದಲ್ಲಿ ಜಿಗುಪ್ಸೆ ಹೊಂದಿದ ಒಂದು ನಿತ್ರಾಣ ಮೇಕೆಯಂತೆ ಕಂಡರೂ ಮಾನಸಿಕವಾಗಿ ಇವ ಚೈನೀಸ್ ಬಿಸಾಕಿದ ಮೂಳೆ ಕಡಿಯುವ ನಾಯಿ. ಅಸಲಿಗೆ ಇವನು ಎಲಕ್ಷನ್ ಗೆದ್ದಿದ್ದೇ ಭಾರತ(India) ವಿರೋಧಿ ನಿಲುವಿನಿಂದ. ಯಾವ ಭಾರತ ಒಬ್ಬ ದೊಡ್ಡಣ್ಣನಂತೆ ಸಹಾಯಕ್ಕೆ ನಿಂತು ಈ ದ್ವೀಪದೇಶ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ನೆರವಿಗೆ ಧಾವಿಸುತ್ತಿದ್ದುದನ್ನು ಮರೆತ ನಮಕ್ ಹರಾಮ್ ಇವನು.

Advertisement
Advertisement
Advertisement

ಇವರಿಗೆ ಸಹಾಯವಾಗಲೆಂದು ಭಾರತ, ಹೆಲಿಕಾಪ್ಟರುಗಳು ಮತ್ತು ವಿಮಾನವನ್ನು ನೀಡಿ, ಅವುಗಳ ನಿರ್ವಹಣೆಗೆ ಸುಮಾರು 78 ಜನರ ತಾಂತ್ರಿಕ ವರ್ಗವನ್ನು ಕಳಿಸಿಕೊಟ್ಟರೆ, ಈ ಕೃತಘ್ನ ನಮಗೆ ಭಾರತೀಯರು ಇಲ್ಲಿರುವುದು ಬೇಡ ಎನ್ನುವ ಚುನಾವಣಾ ಭಾಷಣ ಬಿಗಿದು ಗೆದ್ದು ಬಂದವನು. ಅಸಲಿಗೆ ಇದರ ಹಿನ್ನಲೆಯಲ್ಲಿ ಇರುವುದು ಚೀನಾದ ಷಡ್ಯಂತ್ರ. ಇವನ ಚುನಾವಣೆಗೆ ಯಥೇಚ್ಛವಾಗಿ ದುಡ್ಡುಕೊಟ್ಟು ಗೆಲ್ಲಿಸಿದ್ದೇ ಚೀನಾ. ಗೆದ್ದ ನಂತರ ಚೀನಾದ ಗುಲಾಮನಂತೆ ನಡೆದುಕೊಳ್ಳುತ್ತಿರುವ ಈ ನೀಚ ಚೀನಾದ ಹಡಗು ಮಾಲ್ಡೀವ್ಸಿಗೆ ಬರಲು ಅನುವು ಮಾಡಿಕೊಟ್ಟ. ಆದರೆ ಅಲ್ಲಿ ಭಾರತೀಯ ವಿಮಾನಗಳ ಹಾರಾಟ ನೋಡಿ ಚೀನಾಕ್ಕೆ ಅಂಗವಿಶೇಷದಲ್ಲಿ ತುರಿಕೆಯಾಗಿ, ಭಾರತೀಯರನ್ನು ಇಲ್ಲಿಂದ ಕಳಿಸಿದರೆ ನಿನಗೆ ಇನ್ನೊಂದಿಷ್ಟು ಮೂಳೆಗಳನ್ನು ಎಸೆಯುತ್ತೇವೆ ಎಂದಾಗ, ಇವನಿಗೆ ಒಂದಿಷ್ಟು ಬಲ ಬಂದಂತಾಗಿ “ಭಾರತ ಔಟ್” ಅಂತಾ ಬೊಗಳೋಕೆ ಶುರು ಮಾಡಿದೆ ಈ ಶ್ವಾನ.

Advertisement

ಭಾರತ ಮಾಲ್ಡೀವ್ಸನ್ನು ಯಾವ ಕಾರಣಕ್ಕೂ ತೊರೆಯುವುದಿಲ್ಲ, ಅದಕ್ಕೆ ಹಲವಾರು ಕಾರಣಗಳಿವೆ. ಮೊದಲಿದ್ದಂತೆ ಮಾಲ್ಡೀವ್ಸ್ ಒಂದು ಶಾಂತಿ ಪ್ರಿಯ ದೇಶವಾಗಿ ಉಳಿದಿಲ್ಲ. ಜನಸಂಖ್ಯೆಯ ಶೇಕಡಾವಾರು ತೆಗೆದುಕೊಂಡರೆ ಐಸಿಸ್ ಮತ್ತು ಲಶ್ಕರ್ ಸಂಘಟನೆಗಳಿಗೆ ಅತಿ ಹೆಚ್ಚು ರಿಕ್ರೂಟುಗಳ ಹೋಗುತ್ತಿರುವುದು ಇಲ್ಲಿಂದಲೇ. ದೂರ ಹೋಗುವುದೇಕೆ, ಈ ಮುಯಿಜುನ ಹೆಂಡತಿಯ ಇಬ್ಬರು ಅಣ್ಣಂದಿರು ಇಸ್ಲಾಮಿನ ಮೂಲಭೂತವಾದಿ ಸಂಘಟನೆಗಳಿಗೆ ಸೇರಿದವರು. ಇಲ್ಲಿನವರಿಗೂ ಮತ್ತು ಕೇರಳದ ಕೆಲವು ಮೂಲಭೂತವಾದಿಗಳೊಂದಿಗೆ ಕೆಲವು ರಹಸ್ಯ ಸಂಭಂದಗಳಿವೆ. ಅಯೋಧ್ಯೆಯಲ್ಲಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಮೂವರನ್ನು ಬಂಧಿಸಲಾಗಿದೆ. ಈ ಮೂವರನ್ನು ಮಾಲ್ಡೀವ್ಸಿನಿಂದ ಒಬ್ಬ ಮಹಿಳೆ ನಿರ್ದೇಶಿಸುತ್ತಿದ್ದಳಂತೆ.

ನಿನ್ನೆ ಅಂದರೆ 6 ಮಾರ್ಚ್ 2024 ರಂದು ಭಾರತೀಯ ನೌಕಾದಳ INS ಜಟಾಯು ಎನ್ನುವ ಹೆಸರಿನ ಇನ್ನೊಂದು ಹೊಸ ನೌಕಾನೆಲೆಯನ್ನು ಲಕ್ಷದ್ವೀಪ ಸಮೂಹದ ಮಿನಿಕಾಯ್ ದ್ವೀಪದಲ್ಲಿ ಉದ್ಘಾಟಿಸಿತು. ಸಾಂಪ್ರದಾಯಿಕವಾಗಿ ನೌಕಾ ನೆಲೆಗಳನ್ನು ಸ್ಥಿರಹಡಗುಗಳು ಎಂದು ಕರೆಯಲಾಗುತ್ತದೆ, ಆದ್ದರಿಂದ INS ಜಟಾಯು ಒಂದು ಹಡಗು ಅಲ್ಲ, ಇದು ನೌಕಾ ನೆಲೆ. INS ಜಟಾಯು INS ದ್ವೀಪರಕ್ಷಕ ನಂತರ ಲಕ್ಷದ್ವೀಪದಲ್ಲಿ ಭಾರತದ ಎರಡನೇ ನೌಕಾ ನೆಲೆಯಾಗಿದೆ. ಹೀಗೆ ಮಾಲ್ಡೀವ್ಸ್ ಸಮೀಪವೇ ಭದ್ರಗೊಳ್ಳುತ್ತಿರುವ ಭಾರತೀಯ ನೌಕಾಬಲವನ್ನು ನೋಡಿ ಚೈನೀಸ್ ಡ್ರಾಗನ್ ಕುಂಯ್ ಗುಡುತ್ತಿದ್ದರೆ, ಮುಯಿಜುನ ಗಂಟಲಲ್ಲಿ ಮೂಳೆ ಅಡ್ಡಡ್ಡ ಸಿಕ್ಕಿ ಹಾಕಿಕೊಂಡಿರುವಂತೆ ಚಡಪಡಿಸುತ್ತಿದೆ.

Advertisement

ಪಿಕ್ಚರ್ ಅಭೀ ಬಾಕಿ ಹೈ ಮೆರೇ ದೋಸ್ತ್!

ಬರಹ – WG CDR Sudarshan

Advertisement

Maldivian President Muizzu is choosing China over India: What is at play?India is set to pull its first batch of military personnel from the Maldives on Sunday as the island nation moves closer to China. The phased withdrawal of about 80 Indian troops must meet a May deadline set by President Mohamed Muizzu, who is widely seen to be pro-China.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು
January 23, 2025
11:24 AM
by: ಪ್ರಬಂಧ ಅಂಬುತೀರ್ಥ
ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮುಂಜಾನೆಯ ಹಿತಾನುಭವ ನೀಡುವ ಧನು ಪೂಜೆ
January 9, 2025
11:01 AM
by: ಡಾ.ಚಂದ್ರಶೇಖರ ದಾಮ್ಲೆ
ಯಾರಿಗಾಗಿ ಅಡಿಕೆ ಬೆಳೆ ಉಳಿಯಬೇಕು…? | ಅಡಿಕೆ ಅಥವಾ ಅಡಿಕೆ ಬೆಳೆಗಾರರ ರಕ್ಷಣೆ ಮಾಡುವರು ಯಾರು…?
December 14, 2024
1:42 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror