ಮುಖದ ಮೇಲಿನ ಮುಖವಾಡ

November 26, 2020
3:36 PM
ದುಕೆಂಬುದು ನಾವಂದುಕೊಂಡಷ್ಟು ಸುಲಭವಲ್ಲ. ಕಠಿಣವೂ ಅಲ್ಲ. ಬದುಕಿನಲ್ಲಿ ಯಾತನೆ ಕಲಿಸುವಷ್ಟು ಪಾಠವನ್ನು ಸಂತೋಷ ಕಲಿಸಲಾರದು. ಬದುಕು ಒಂದು ಮಾಯಾ ಜಾಲದಂತೆ ! ನಮ್ಮ ಊಹನೆಯೇ ಒಂದು ವಾಸ್ತವವೇ ಇನ್ನೊಂದು… ಬದುಕಿನ ಪಯಣದಲ್ಲಿ ಕೆಲವರು ಎಣಿಕೆಗೂ ಮೀರಿ ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡರೆ ಇನ್ನು ಕೆಲವರು ಮೇಣದ ಬತ್ತಿಯಂತೆ ನಮ್ಮನ್ನೇ ದಹಿಸಿಕೊಂಡರೆ ಇನ್ನು ಕೆಲವರು ಮೇಣದ ಬತ್ತಿಯಂತೆ ನಮ್ಮನ್ನೇ ದಹಿಸಿಕೊಂಡು ಸುತ್ತಣಕ್ಕೆ ಬೆಳಕನ್ನೀಯುತ್ತಿದ್ದಾರೆ. ಇದು ಬದುಕಿನ ವಿಪರ್ಯಾಸವೆಂದರೆ ತಪ್ಪಾಗಲಾರದು
          ಈ ಜಗತ್ತಿನಲ್ಲಿ ಪ್ರತಿಯೊಬ್ಬರದೂ ಮುಖವಾಡದ ಬದುಕು . ಮುಖವಾಡವಿಲ್ಲದ ಮನುಜನನ್ನು ಹುಡುಕುವುದು ” ಸಾವಿಲ್ಲದ ಮನೆಯಿಂದ ಸಾಸಿವೆ ತಂದಂತೆ” ಇಲ್ಲಿ ಮುಖಕ್ಕಿಂತ ಮುಖವಾಡಕ್ಕೆ ಬೆಲೆ ಜಾಸ್ತಿ.ಒಬ್ಬ ವ್ಯಕ್ತಿಯ ನೈಜ ಮುಖವನ್ನು ಮುಖವಾಡದ ಹಿಂದೆ ಮರೆಮಾಚುವ ನೈಜ ಯತ್ನಗಳು ಬದುಕಿನ ಪ್ರತಿಯೊಂದು ಹಂತದಲ್ಲೂ ನಡೆಯುತ್ತಲೇ ಇರುತ್ತದೆ.
      ನಮ್ಮ ಬದುಕಿನ ಪಯಣದಲ್ಲಿ ಹಲವು ಬಗೆಯ ಮುಖವಾಡಗಳ ದರ್ಶನವಾಗುವುದು. ಎಲ್ಲಾ ಮುಖವಾಡಗಳು ಕೆಟ್ಟವೆಂದಲ್ಲ. ಜಗಕೆ ತಪ್ಪೆಂದು ಕಾಣುವ ಮುಖವಾಡಗಳ ಹಿಂದೆ ಉತ್ತಮ ಮುಖಗಳಿರುವುದು,  ಅರಿಯುವ ಪ್ರಯತ್ನವನ್ನು ನಾವು ಮಾಡಬೇಕಷ್ಟೇ…!
      ತಂದೆಯಾದವನು ಅತಿಯಾದ ಪ್ರೀತಿ ತೋರಿದರೆ ಮಕ್ಕಳೆಲ್ಲಿ ದಾರಿ ತಪ್ಪುವರೋ ಎಂಬ ಕಾರಣಕ್ಕೆ ಹೃದಯದಲ್ಲಿರುವ ಬೆಟ್ಟದಷ್ಟು ಪ್ರೀತಿಯನ್ನು ಜವಾಬ್ದಾರಿ ನಿರ್ವಹಿಸುವಿಕೆಯ ಹಿಂದೆ ಮರೆಮಾಚುತ್ತಾನೆ. ಗುರುವಾದವನು ವಿದ್ಯಾರ್ಥಿಗಳ ಮೇಲೆ ಅಪಾರವಾದ ಪ್ರೀತಿಯಿದ್ದರೂ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಉನ್ನತ ಮನದೊಳಗಿನ ಪ್ರೀತಿಯನ್ನು ಅದುಮಿಟ್ಟು ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಮನದೊಳಗಿನ ಪ್ರೀತಿಯನ್ನು ಅದುಮಿಟ್ಟು ವಿದ್ಯಾರ್ಥಿಗಳ ಮುಂದೆ ಕಠಿಣವಾಗಿಯೇ ಇರುತ್ತಾನೆ‌. ಗುರುವಿನ ಕಠಿಣ ಮೊಗದ ಮುಖವಾಡದ ಹಿಂದಿನ ನೈಜ ಪ್ರೀತಿ ಗುರುವಷ್ಟೇ ಬಲ್ಲ….
           ಕೆಲವರು ತಮ್ಮ ಬದುಕಿನ ನೋವು, ಕಷ್ಟಗಳ ಮುಖದ ಮುಂದೆ ನಗುವಿನ ಮುಖವಾಡ ಧರಿಸಿ ಸುತ್ತಣದ ಜನರನ್ನು ನಗಿಸಿ ಅವರ ಬಾಳಲ್ಲಿ ನಗುವನ್ನು ತುಂಬಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ನಗುವಿನ ಮುಖವಾಡದ ಹಿಂದೆ ತೋರಿಸಲಾಗದ ಅಳುಮುಖವಿರುತ್ತದೆ. ಹಾಗೆಯೇ ಸಹಜತೆಯ ನಟನೆಯ ಹಿಂದೆ ಅಸಹಜತೆಯ ನೆರಳೂ ಇರುತ್ತದೆ.ಕಠಿಣ ಹೃದಯದಲ್ಲಿ ಸುಕೋಮಲ ಪ್ರೀತಿಯೂ ಅಡಗಿರುತ್ತದೆ. ಅಷ್ಟೇ ಅಲ್ಲ! ತಮ್ಮಲ್ಲಿರುವ ಕೆಟ್ಟ ಗುಣಗಳನ್ನು ಪ್ರಾಮಾಣಿಕತೆಯ ಹಿಂದೆ ಮರೆಮಾಚುವ ಪ್ರಯತ್ನ ಗಳು ನಡೆಯುತ್ತದೆ.
     ಜಗತ್ತಿನಲ್ಲಿ ಇನ್ನೂ ನಾನಾ ರೀತಿಯ ಮುಖವಾಡಗಳಿರುವುದು , ಅದರಲ್ಲಂತೂ ಚುನಾವಣೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳು ಧರಿಸುವಂತಹ ಮುಖವಾಡ ನಾನಾ ರೀತಿಯದ್ದು. ಜನರನ್ನು ತನ್ನಡೆಗೆ ಸೆಳೆಯಲು ಅವರು ಧರಿಸುವ ಮುಖವಾಡಗಳು ವರ್ಣರಂಜಿತವಾದದ್ದು.ಇದಕ್ಕೆ ಸೋಲದ ಜನರಿಲ್ಲ, ಈ ಮುಖವಾಡ ಕಳಚಿ ಬೀಳುವುದು ಚುನಾವಣಾ ಫಲಿತಾಂಶದ ನಂತರ ಅಧಿಕಾರ ಹಂಚಿಕೆಯ ಕಾಲಾವಧಿಯಲ್ಲಿ….! ಈ ಮುಖವಾಡಗಳ ಹಿಂದಿನ ಮತಬಾಂಧವರಿಗೆ ಅರಿವಾಗುವಾಗ ಕಾಲ ಮಿಂಚಿ ಹೋಗುತ್ತಿರುತ್ತದೆ. ಮತ್ತೊಂದಿಷ್ಟು ವರುಷಗಳವರೆಗೆ ಆ ಮುಖವಾಡಗಳ ನರ್ತನವನ್ನು ಕಾಣುವ ಭಾಗ್ಯ ಮಾತ್ರ ಮತದಾರನದ್ದು…!
        ಇನ್ನು ಮೋಸದ ಮುಖವನ್ನು ಪ್ರೀತಿಯ ಮುಖವಾಡದ ಹಿಂದೆ ಮರೆ ಮಾಚಿ ಒಂದಷ್ಟು ಕಾಲ ಒಂದಷ್ಟು ಜನರ ಬಾಳಲ್ಲಿ ಆಟವಾಡುವವರ ಸಂಖ್ಯೆ ಜಗತ್ತಿನಲ್ಲಿಯೇನು ಕಡಿಮೆಯಿಲ್ಲ. ಪ್ರೀತಿಯ ಮುಖವಾಡದ ಹಿಂದಿನ  ಮೋಸದ ಅರಿವಿಲ್ಲದೆ, ಆ ಮಾಯಾ ಜಾಲದೊಳಗೆ ಸಿಲುಕಿ ಪ್ರಾಣವನ್ನೇ ಕಳೆದುಕೊಂಡವರು ಅದೆಷ್ಟೋ ಮಂದಿ… ನೋವು ನುಂಗಿ ನಗುವಿನ ಮುಖವಾಡ ಧರಿಸಿ ಬದುಕು ಸವೆಸುತ್ತಿರುವವರು ಇನ್ನು ಹಲವು ಮಂದಿ. ಮಾಯಾ ಜಾಲದ ಅರಿವಿದ್ದರೂ ಅದರೊಳಗೆ ಬಿದ್ದು ನಲುಗುತ್ತಿರುವವರ ಸಂಖ್ಯೆ ಇನ್ನು ಏರಿಕೆಯಾಗಿತ್ತಿರುವುದು ಮಾತ್ರ  ವಿಪರ್ಯಾಸದ ಸಂಗತಿ.ಹಾಗಂತ ಜಗತ್ತಿನಲ್ಲಿ ನೈಜ ಪ್ರೇಮವಿಲ್ಲವೆಂದಲ್ಲ. ಬಣ್ಣದ ಬದುಕಿನ ಪಯಣದಲ್ಲಿ ನೈಜತೆಯನ್ನು ಅರಿವುದು ಕಷ್ಟ ಸಾಧ್ಯ.ನೈಜತೆಯ ಅರಿವಾದಾಗ ಕಾಲದ ಎಲ್ಲೆ ಮೀರಿರುತ್ತದೆ ಎಂಬುದೇ ಸತ್ಯ.
         ನಿಜವಾದ ಮುಖಗಳಿಲ್ಲದ ಜಗದಲ್ಲಿ ಬಣ್ಣ ಬಣ್ಣಗಳ ಮುಖವಾಡಗಳ ನಂಬಿ ಕೆಟ್ಟವರೆಷ್ಟೋ…..? ಉಳಿದವರೆಷ್ಟೋ…? ಇದು ಗಣನೆಗೆ ನಿಲುಕದ ಲೆಕ್ಕಾಚಾರ ಬಾಳಿನ ಈ ಪಯಣದಲ್ಲಿ ರಂಗುರಂಗಿನ ಬಣ್ಣದೋಕುಳಿಯ ಮುಖವಾಡಗಳ ನರ್ತನ ದಿನನಿತ್ಯದ ಧಾರಾವಾಹಿ ಗಳಂತೆ ಮುಗಿಯದ ಕಂತು.
  ಮೌನವಾಗಿರುವವರೆಲ್ಲಾ ಮುಗ್ಧರೆಂದಲ್ಲ, ಅತಿಯಾಗಿ ಮಾತನಾಡುವವರೆಲ್ಲಾ ಒರಟರಲ್ಲ, ಪ್ರೀತಿ ಮಾಡುವವರೆಲ್ಲರೂ ಮೋಸಗಾರರಲ್ಲ, ಸತ್ಯವನ್ನು ಸುಳ್ಳಾಗಿಸುವವರೆಲ್ಲಾ ಜ್ಞಾನಿಗಳೆಂದಲ್ಲ, ಅಸತ್ಯವನ್ನು ಸತ್ಯವೆಂದು ನಂಬುವವರೆಲ್ಲಾ ಅಜ್ಞಾನಿಗಳೆಂದಲ್ಲ… ನಯವಾಗಿ ಮಾತನಾಡುವವರೆಲ್ಲಾ ನಂಬಿಕೆಗೆ ಅರ್ಹರೆಂದಲ್ಲ.ಕೆಟ್ಟತನ ತೋರಿದವರೆಲ್ಲಾ ಕ್ರೂರಿಗಳಲ್ಲ.. ಮುಖವಾಡದ ಹಿಂದಿನ ಮುಖದ ದರ್ಶನ ಒಂದಲ್ಲ ಒಂದು ದಿನ ಆಗಲೇಬೇಕು. ಆದರೆ ಇದರ ಅರಿವಿಲ್ಲದವರು ಉತ್ತಮರಲ್ಲೇ ನಾನು ಅತ್ಯುತ್ತಮನೆಂದುಕೊಂಡು ಇತರರನ್ನು ನೋಯಿಸುತ್ತಾ , ಇತರರ ತಪ್ಪುಗಳನ್ನೇ ಎತ್ತಿ ತೋರಿಸುತ್ತಾ ಬದುಕುತ್ತಾರೆ. ಪ್ರತಿಯೊಂದು ಮುಖವಾಡವು ಒಂದಲ್ಲ ಒಂದು ದಿನ ಕಳಚಲೇಬೇಕು.
     ಮುಖವಾಡ ಒಂದೊಮ್ಮೆ ಕಳಚಿ ಬೀಳದೇ ಇದ್ದರೂ ಮುಖವಾಡದ ಹಿಂದಿನ ಮುಖದ ನೈಜತೆಯನ್ನು ಮನಸ್ಸಾಕ್ಷಿ ಅರಿತಿದೆ. ಅದು ನಮ್ಮೊಳಗೆ ಇದ್ದು ನಮ್ಮನ್ನು ಎಚ್ಚರಿಸುವುದು …. ಇಲ್ಲಾ ಚುಚ್ಚುವುದು…
         ಈ ಜಗದಲ್ಲಿರುವ ರಂಗು ರಂಗಿನ ಮುಖವಾಡಗಳಲ್ಲಿ , ಕೆಲವರ ಮುಖವಾಡ ಮುಚ್ಚುವಂತಿರುತ್ತದೆ. ಇನ್ನು  ಕೆಲವರ ಮುಖವಾಡಗಳು ಚುಚ್ಚುವಂತಿರುತ್ತದೆ. ಕೆಲವರು ಜೀವನಕ್ಕಾಗಿ ಮುಖವಾಡ ಧರಿಸಿದ್ದರೆ , ಇನ್ನು ಕೆಲವರಿಗೆ ಮುಖವಾಡವೇ ಜೀವನ …. ಇದು ಸತ್ಯ.. ಬದುಕಿನ ಆಟದಲ್ಲಿ ಮುಖವಾಡದ ಹಿಂದಿನ ಮುಖವ ಅರಿತು ನಡೆದರೆ ಗೆಲ್ಲಬಹುದು. ಬದುಕೆಂಬ ಮಾಯಾ ಜಿಂಕೆಯ ಬೆನ್ನತ್ತಿ ಹೊರಟ ಮೇಲೆ ಎಲ್ಲವೂ ಸಹಜ.. ಎಲ್ಲವನ್ನೂ ಅರಿತು ನಡೆಯುವ ಹುಮ್ಮನಸು ನಮ್ಮದಾಗಬೇಕು… ಎಲ್ಲವನ್ನೂ ಎದುರಿಸುವ ಚಾಕಚಕ್ಯತೆ ನಮ್ಮೊಳಗಿರಬೇಕು. ಆಗ ಈ ಬದುಕು ಸುಂದರ ಯಾತ್ರೆಯೆನಿಸಿಕೊಳ್ಳುತ್ತದೆ…
# ಅಪೂರ್ವ ಕೊಲ್ಯ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror