ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?

May 11, 2025
9:54 PM

ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ  ಬಗ್ಗೆ ಪುತ್ತೂರಿನ ಮುಳಿಯ ಗೋಲ್ಡ್‌ ಮತ್ತು ಡೈಮಂಡ್‌  ಇದರ ಸುಲೋಚನಾ ಟವರ್ಸ್‌ನ ಅಪರಂಜಿ ರೂಫ್‌ ಗಾರ್ಡನ್‌ನಲ್ಲಿ ಭಾನುವಾರ ಸಂವಾದ ಕಾರ್ಯಕ್ರಮ ನಡೆಯಿತು.

Advertisement

ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆಯನ್ನು ಸೃಷ್ಟಿಸಲಾಗಿತ್ತು. ಕಾರ್ಯಕ್ರಮ  ಉದ್ಘಾಟಿಸಿದ ಮುಳಿಯ ಗೋಲ್ಡ್‌ ಮತ್ತು ಡೈಮಂಡ್‌ ಆಡಳಿತ ಮಂಡಳಿಯ ಕೃಷ್ಣ ನಾರಾಯಣ ಮುಳಿಯ ಅವರು ಕೃಷಿ ಬೆಳವಣಿಗೆಗೆ ವೈಚಾರಿಕವಾದ ಚಿಂತನೆಗಳು ಅಗತ್ಯ ಇದೆ. ಕೃಷಿಯ ಮಾರುಕಟ್ಟೆಯ ದೃಷ್ಟಿಯನ್ನು ಕೂಡಾ ಸರಿಯಾಗಿ ಗಮನಿಸಿಕೊಂಡು ಕೃಷಿ ಮಾಡಿದಾಗ ಯಶಸ್ಸು ಸಾಧ್ಯ ಎಂದರು.

ಕೃಷಿಯ ಜೊತೆಗೆ ಕೃಷಿ ವಸ್ತುಗಳ ಮಾರುಕಟ್ಟೆ ಹೇಗೆ , ಕೃಷಿಕನೇ ಕಡಿಮೆ ವೆಚ್ಚದಲ್ಲಿ ಹೇಗೆ ಮಾರುಕಟ್ಟೆ ಮಾಡಬಹುದು ಎನ್ನುವುದು ಕೂಡಾ ಮುಖ್ಯ ಈ ದೃಷ್ಟಿಯಿಂದ ಸೀತಾಂಗೋಳಿ ಬಳಿಯ ಕಾವೇರಿಕಾನದ ಕೃಷಿಕ ಕೃಷ್ಣಪ್ರಸಾದ್‌ ಅವರು ಮಾತನಾಡಿ, ಕೃಷಿ ಮಾರುಕಟ್ಟೆ , ದರ ನಿಗದಿ ಎಲ್ಲವೂ ಕೃಷಿಕನಿಗೆ ಸಾಧ್ಯ ಇದೆ. ಆದರೆ ತಾಳ್ಮೆ ಹಾಗೂ ಧೈರ್ಯ ಅಗತ್ಯ ಎಂದರು.

ಕೃಷಿ ಅಭಿವೃಧ್ಧಿಗೆ ರೈತರಿಗೆ ಕೈಗೆಟಕುವ ದರದಲ್ಲಿ ಯಂತ್ರಗಳನ್ನು ತಾವೇ ಆವಿಷ್ಕಾರ ಮಾಡಿರುವ ಭಾಸ್ಕರ ಗೌಡ ಚಾರ್ವಾಕ, ಅನಿವಾರ್ಯತೆಗಳೇ ಕೃಷಿಯಲ್ಲಿ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತದೆ.  ನಮಗೆ ಮರ ಏರಲು ಕಷ್ಟವಾದಾಗ ಸರಳವಾದ ಯಂತ್ರದ ಆವಿಷ್ಕಾರ ಸಾಧ್ಯವಾಯಿತು ಎಂದರು.

Advertisement

ಕೃಷಿಕರ ನಿರೀಕ್ಷೆಗಳ  ಬಗ್ಗೆ ಮಾತನಾಡಿದ ಕೃಷಿಕ ಡಾ.ವೇಣುಗೋಪಾಲ ಕಳೆಯತ್ತೋಡಿ,ಕೃಷಿ ಎನ್ನುವುದು ಸೋಲಿನ ಕೆಲಸವಲ್ಲ. ಕೃಷಿಯಲ್ಲಿ ಯಶಸ್ವಿಯಾದ ಬದುಕು ಇದೆ. ಕೃಷಿ ಬದುಕು ಸುಂದರವಾಗಿ ರೂಪಿಸಿಕೊಳ್ಳಲು ಯೋಜನೆಗಳನ್ನು ಕೂಡಾ ಹಾಕಿಕೊಳ್ಳಬೇಕು ಎಂದರು.

ಅಡಿಕೆಯ ಜೊತೆಗೆ ಉಪಬೆಳೆಯಾಗಿ ತರಕಾರಿ ಕೃಷಿಯನ್ನು ಮಾಡುತ್ತಿರುವ  ಎಂಟೆಕ್‌ ಪದವೀಧರ ಕೃಷಿಕ ಸುಬ್ರಹ್ಮಣ್ಯ ಪ್ರಸಾದ್‌ ಚಣಿಲ, ತರಕಾರಿ ಕೃಷಿಯಲ್ಲಿ ಸಮಯ ಹಾಗೂ ತೊಡಗಿಸಿಕೊಳ್ಳುವಿಕೆ ಅತೀ ಮುಖ್ಯ. ಮಾರುಕಟ್ಟೆ ಬಗ್ಗೆ ಸದ್ಯ ಯೋಚಿಸಬೇಕಾದ ಅಗತ್ಯ ಇಲ್ಲ. ತರಕಾರಿ ಸದಾ ಬೇಡಿಕೆ ಇರುವ ವಸ್ತು. ಹೀಗಾಗಿ ಈ ಕೃಷಿ ದೀರ್ಘಕಾಲಿಕ ಮತ್ತು ನಿರಂತರವಾಗಿರಬೇಕು ಎಂದರು.

ಕೃಷಿ- ಪರಿಸರ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ಕೃಷಿಕನೂ ಮಾಧ್ಯಮದ ಮೂಲಕ ಹೇಗೆ ನೀಡಬಹುದು ಹಾಗೂ ಕೃಷಿಯಲ್ಲಿ ಡಿಜಿಟಲ್‌ ಮಾಧ್ಯಮದ ಪಾತ್ರದ ಬಗ್ಗೆ ಯೂಟ್ಯೂಬರ್ ರಾಧಾಕೃಷ್ಣ ಆನೆಗುಂಡಿ ಮಾತನಾಡಿ, ಕೃಷಿಕನೂ ಇಂದು ಡಿಜಿಟಲ್‌  ಮಾಧ್ಯಮದ ಮೂಲಕ ಅನುಭವದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಮುಂದಿನ ತಲೆಮಾರಿಗೆ ದಾಖಲೆಗಳನ್ನು ಇಡಬಹುದು ಎಂದು ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ  ಮುಳಿಯ ಗೋಲ್ಡ್‌ ಮತ್ತು ಡೈಮಂಡ್‌ ಆಡಳಿತ ಮಂಡಳಿಯ ಕೇಶವ ಪ್ರಸಾದ್‌ ಮುಳಿಯ, ಕೃಷಿ ಕೂಡಾ ಉದ್ಯಮದ ರೂಪ ಪಡೆಯಬೇಕು. ಸಾತ್ವಿಕ ಲಾಭ ಇಲ್ಲದೇ ಹೋದರೆ ಯಾವ ಕೆಲಸವೂ ಹೆಚ್ಚು ಸಮಯ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಕೃಷಿ ಕೂಡಾ ಉದ್ಯಮವಾದರೆ ಮಾತ್ರವೇ ಕೃಷಿ ನಿರಂತರವಾಗಿ ಸುದೃಢವಾಗಿ ಮುಂದೆ ಸಾಗಬಹುದು ಎಂದು ಹೇಳಿದರು.

Advertisement

ಕೃಷಿ ಸಂವಾದವನ್ನು ಪತ್ರಕರ್ತ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ ಹಾಗೂ ಮುಳಿಯ ಮಾರ್ಕೆಂಟಿಗ್‌ ವಿಭಾಗದ ಸಲಹೆಗಾರ ವೇಣು ಶರ್ಮ ನಡೆಸಿದರು.

ಕೃಷಿ- ಪರಿಸರ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |
July 9, 2025
1:47 PM
by: ಸಾಯಿಶೇಖರ್ ಕರಿಕಳ
ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |
July 9, 2025
10:57 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.
July 9, 2025
7:44 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror