Advertisement
MIRROR FOCUS

ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |

Share

ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆಯನ್ನು ಸೃಷ್ಟಿಸಿದೆ. ಈ ಪ್ರಯುಕ್ತ ಮೇ.11 ರಂದು ಪುತ್ತೂರಿನ ಸುಲೋಚನಾ ಟವರ್ಸ್‌ನ ಅಪರಂಜಿ ರೂಫ್‌ ಗಾರ್ಡನ್‌ 3 ನೇ ಮಹಡಿಯಲ್ಲಿ ವಿವಿಧ ಕೃಷಿ ವಿಷಯಗಳು ಹಾಗೂ ಕೃಷಿ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ಕೃಷಿ ಗೋಷ್ಟಿ ನಡೆಯಲಿದೆ ಎಂದು ಮುಳಿಯ ಗೋಲ್ಡ್‌ ಮತ್ತು ಡೈಮಂಡ್‌ ಆಡಳಿತ ಮಂಡಳಿಯ ಕೇಶವ ಪ್ರಸಾದ್‌ ಮುಳಿಯ ಹಾಗೂ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ.…..ಮುಂದೆ ಓದಿ….

ಕರಾವಳಿ ಜಿಲ್ಲೆಯ ಆರ್ಥಿಕ ವ್ಯವಹಾರದಲ್ಲಿ ಕೃಷಿಯ ಪಾಲೂ ಸಾಕಷ್ಟಿದೆ. ಕೃಷಿ ಆದಾಯವು ಕೃಷಿಕರನ್ನು ಹೆಚ್ಚು ಸುದೃಢವಾಗುವಂತೆ ಮಾಡಿದರೆ ಕರಾವಳಿಯ ಆರ್ಥಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆಯಾಗುತ್ತದೆ. ಹೀಗಾಗಿ ಈಗ ಕೃಷಿಯಷ್ಟೇ ಅಲ್ಲ ಕೃಷಿಯ ಜೊತೆಗೆ ಮಾರುಕಟ್ಟೆ, ಕೃಷಿ ಉದ್ಯಮವೂ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕೃಷಿಯನ್ನು, ಕೃಷಿಕರನ್ನು ಮತ್ತಷ್ಟು ಕ್ರಿಯಾಶೀಲವಾಗುವಂತೆ ಮಾಡಲು ವಿವಿಧ ವಿಷಯಗಳೊಂದಿಗೆ ಕೃಷಿ ಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿದೆ.

ಕೃಷಿಯ ಜೊತೆಗೆ ಅದರ ಮಾರುಕಟ್ಟೆ ಹೇಗೆ , ಕೃಷಿಕನೇ ಕಡಿಮೆ ವೆಚ್ಚದಲ್ಲಿ ಹೇಗೆ ಮಾರುಕಟ್ಟೆ ಮಾಡಬಹುದು ಎನ್ನುವುದು ಕೂಡಾ ಮುಖ್ಯ ಈ ದೃಷ್ಟಿಯಿಂದ ಸೀತಾಂಗೋಳಿ ಬಳಿಯ ಕಾವೇರಿಕಾನದ ಕೃಷಿಕ ಕೃಷ್ಣಪ್ರಸಾದ್‌  ಅವರು ತಮ್ಮ ಅನುಭದಿಂದ ಕೃಷಿ ವಸ್ತುಗಳ ಮಾರುಕಟ್ಟೆ ಬಗ್ಗೆ ಮಾತನಾಡುವರು.  ಕೃಷಿ ಅಭಿವೃಧ್ಧಿಗೆ ರೈತರಿಗೆ ಕೈಗೆಟಕುವ ದರದಲ್ಲಿ ಯಂತ್ರಗಳ ಅಗತ್ಯವಿದೆ, ಇಂತಹ ಯಂತ್ರಗಳ ಬಗ್ಗೆ ಭಾಸ್ಕರ ಗೌಡ ಚಾರ್ವಾಕ ಮಾತನಾಡುವರು, ಇಂದು ಕೃಷಿಕರ ನಿರೀಕ್ಷೆಗಳು ಏನು ಎಂಬುದರ ಬಗ್ಗೆ ಕೃಷಿಕ ಡಾ.ವೇಣುಗೋಪಾಲ ಕಳೆಯತ್ತೋಡಿ ಮಾತನಾಡುವರು. ಅಡಿಕೆಯ ಜೊತೆಗೆ ಇಂದು ಉಪಬೆಳೆಯೂ ಅಗತ್ಯ ಇದೆ ಎಂದು ಎಲ್ಲೆಡೆಯೂ ಮಾತನಾಡುತ್ತಾರೆ, ತರಕಾರಿ ಕೃಷಿಯೂ ಉಪಬೆಳೆ, ಆದಾಯ ಸಾಧ್ಯ ಇದೆ ಎಂದು ಎಂಟೆಕ್‌ ಪದವೀಧರ ಕೃಷಿಕ ಸುಬ್ರಹ್ಮಣ್ಯ ಪ್ರಸಾದ್‌ ಚಣಿಲ ಅವರು ಮಾತನಾಡುವರು. ಮಾಧ್ಯಮಗಳು ಕೂಡಾ ಇಂದು ಕೃಷಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಕಾಲಕ್ಕೆ ಡಿಜಿಟಲ್‌ ಮಾಧ್ಯಮ ಚಾಲ್ತಿಯಲ್ಲಿದೆ. ನೈಜವಾದ ಮಾಹಿತಿಯನ್ನು ಕೃಷಿಕನೂ ಮಾಧ್ಯಮದ ಮೂಲಕ ಹೇಗೆ ನೀಡಬಹುದು ಎನ್ನುವುದರ ಬಗ್ಗೆ ಯೂಟ್ಯೂಬರ್ ರಾಧಾಕೃಷ್ಣ ಆನೆಗುಂಡಿ ಮಾತನಾಡುವರು. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮವು ಮಧ್ಯಾಹ್ನದವರೆಗೆ ನಡೆಯಲಿದೆ. ಕೃಷಿ ಸಂವಾದವನ್ನು ಪತ್ರಕರ್ತ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ ಹಾಗೂ ಮುಳಿಯ ಮಾರ್ಕೆಂಟಿಗ್‌ ವಿಭಾಗದ ಸಲಹೆಗಾರ ವೇಣು ಶರ್ಮ ನಡೆಸಿಕೊಡುವರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

3 hours ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

16 hours ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

1 day ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

2 days ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

3 days ago