Advertisement
ಸುದ್ದಿಗಳು

ಮುಳಿಯ ಆ್ಯಂಟಿಕ್ ಕಲೆಕ್ಷನ್ ಗೆ ಚಾಲನೆ | ಗಮನಸೆಳೆದಿದೆ 10 in 1 ಆಭರಣ |

Share

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಸ್ ನಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಮುಳಿಯ ಪರಂಪರಾಗತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮುಳಿಯ ಆ್ಯಂಟಿಕ್ ಫೆಸ್ಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಅಬಕಾರಿ ಇಲಾಖಾ ನಿರೀಕ್ಷಕರಾದ ಸೌಮ್ಯಲತ ಉದ್ಘಾಟಿಸಿ,ಮುಳಿಯ ಸಂಸ್ಥೆ ಆಯೋಜಿಸಿದ ಆ್ಯಂಟಿಕ್ ಫೆಸ್ಟ್ ಗೆ  ಶುಭ ಹಾರೈಸಿದರು ಮತ್ತು ಮುಳಿಯದ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಸಂಸ್ಥೆಯ ಪ್ರಬಂಧಕರಾದ  ಗುರುರಾಜ್ ಅವಬೃತ  ಸ್ವಾಗತಿಸಿ, ಫೆಸ್ಟ್ ನ ವಿಶೇಷತೆಯನ್ನು ತಿಳಿಸಿದರು. ಉಪ ಶಾಖಾ ಪ್ರಬಂಧಕರಾದ  ಸತ್ಯ ಗಣೇಶ್  ವಂದಿಸಿದರು. ಸಿಬ್ಬಂದಿ ಕು. ದೀಪಿಕ  ಕಾರ್ಯಕ್ರಮ ನಿರೂಪಿಸಿದರು. ಮಾರುಕಟ್ಟೆ ವಿಭಾಗದ  ಜಯಂತ್‍ ಉಪಸ್ಥಿತರಿದ್ದರು. ಪುತ್ತೂರು ಶಾಖಾ ಪ್ರಬಂಧಕರಾದ ನಾಮ್‍ದೇವ್ ಮಲ್ಯ, ಉಪ ಪ್ರಬಂಧಕರಾದ ಪ್ರವೀಣ್, ಯತೀಶ್ ಉಪಸ್ಥಿತರಿದ್ದರು.

ಡಿಸೆಂಬರ್ 23 ರಿಂದ ಪ್ರಾರಂಭವಾದ ಈ ಉತ್ಸವವು ಜನವರಿ 3 ರವರೆಗೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ವಿವಿಧ ವಿನ್ಯಾಸಗಳನ್ನೊಳಗೊಂಡ ಆ್ಯಂಟಿಕ್ ನೆಕ್ಲೇಸ್, ಆ್ಯಂಟಿಕ್ ಜುಮ್ಕ, ಆ್ಯಂಟಿಕ್ ಬಳೆ , ಆ್ಯಂಟಿಕ್ ಹಾರ, ಆ್ಯಂಟಿಕ್ ಕಿವಿಯೋಲೆ, ಆ್ಯಂಟಿಕ್ ಪೆಂಡೆಂಟ್ ಹಾಗೂ ವಿಶಿಷ್ಟ ವಿನ್ಯಾಸದ 10 ಇನ್ 1 ಆಭರಣಗಳು, 5 ಇನ್ 1 ಆಭರಣಗಳು, 2 ಗ್ರಾಂನಿಂದ 150 ಗ್ರಾಂ ವರೆಗಿನ ಆಭರಣಗಳು, ಮೈಕ್ರೋ ಆ್ಯಂಟಿಕ್ ಆಭರಣಗಳು, ಮಹತಿ ಕಲೆಕ್ಷನ್ಸ್, ಬೋರ್ಮಲ ಡಿಸೈನ್, ಬೀಡೆಡ್ ಆ್ಯಂಟಿಕ್ ಆಭರಣಗಳ ವಿಶಿಷ್ಟ ಸಂಗ್ರಹವಿರುತ್ತದೆ.

10 in 1 ಆಭರಣ ಮತ್ತು 5 in 1 ಆಭರಣಗಳ ವಿಶೇಷತೆ: 

10 in 1 ಆಭರಣ ಮತ್ತು 5 in 1 ಆಭರಣಗಳ ವಿಶೇಷತೆ:
ಆ್ಯಂಟಿಕ್ ಆಭರಣಗಳು ವಿಶೇಷ ವಿನ್ಯಾಸಗಳಿಂದ ಕೂಡಿದ್ದು ಅತ್ಯಂತ ಪ್ರಾಮುಖ್ಯತೆಯಿಂದ ಕೂಡಿರುವ ಆಭರಣಗಳು ಇದಾಗಿದ್ದು, ಆಧುನಿಕ ಯುಗದಲ್ಲಿ ಹೆಚ್ಚು ಪ್ರಖ್ಯಾತಗೊಂಡಿರುತ್ತದೆ.

10 ಇನ್ 1 ಆಭರಣವನ್ನು ದ್ವಿಮುಖವಾಗಿ ಸೊಂಟ ಪಟ್ಟಿ, ಕೈತೋಳುಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 10 ವಿಭಾಗಗಳಲ್ಲಿ ಉಪಯೋಗಿಸಬಹುದು.

5 ಇನ್ 1 ಆಭರಣಗಳನ್ನು ಏಕಮುಖವಾಗಿ ಸೊಂಟ ಪಟ್ಟಿ, ತೋಳಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 5 ವಿಭಾಗಗಳಲ್ಲಿ ಉಪಯೋಗಿಸಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ಕೃಷಿಗೆ ಬ್ರೇಕ್‌? ಹೆಬ್ಬೇವು, ಅಗ್ರೋಫಾರೆಸ್ಟ್ರಿಯತ್ತ ಗಮನ

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ತೋಟಗಳ ವಿಸ್ತರಣೆಯಿಂದ ಜೀವವೈವಿಧ್ಯ, ಮಣ್ಣು ಮತ್ತು ನೀರಿನ ಮೇಲೆ…

39 minutes ago

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ

ವಿಶ್ವದ 21,439 ನದಿ ತೋಡುಗಳ ಅಧ್ಯಯನದಲ್ಲಿ ಶೇ.78.8ರಷ್ಟು ನದಿಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ…

10 hours ago

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…

18 hours ago

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…

23 hours ago

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’

₹1.65 ಲಕ್ಷದಿಂದ ಬೆಲೆ ಆರಂಭವಾಗುವ ಐಫೋನ್‌ 18 ಪ್ರೊ ಖರೀದಿಗಾಗಿ ದೇಶದ ಹಲವು…

2 days ago

ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ

ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಗಾಳಿಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮುನ್ಸೂಚನೆಯಲ್ಲಿದ್ದಷ್ಟು…

3 days ago