ನಾಡಿನ ಹೆಸರಾಂತ ಮುಳಿಯ ಜ್ಯುವೆಲ್ಸ್ ಸಂಸ್ಥೆ ತನ್ನ ಜನಪ್ರಿಯ ಕಾರ್ಯಕ್ರಮವಾದ ಕರೋಕೆ ಹಾಡುಗಳ ಗಾಯನ ಸ್ಪರ್ಧೆ ‘ಮುಳಿಯ ಗಾನರಥ’ದ ಎಂಟನೇ ಆಡಿಷನ್ ರೌಂಡ್ ಅನ್ನು ಅಕ್ಟೋಬರ್ 22 ರಂದು ಸಂಜೆ 3:30 ಗಂಟೆಗೆ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಜುವೆಲ್ಸ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಸ್ಪರ್ಧೆಯಲ್ಲಿ 4 ಭಾಷೆಯ ಹಾಡುಗಳಿಗೆ ಅವಕಾಶವಿದೆ. ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ಭಾಷೆಯ ಹಾಡುಗಳನ್ನು ಹಾಡಬಹುದು. 12ರಿಂದ 21 ವರ್ಷದ ಎಳೆಯರ ವಿಭಾಗ ಮತ್ತು 21 ವರ್ಷಕ್ಕೆ ಮೇಲ್ಪಟ್ಟ ಸಾರ್ವಜನಿಕರ ವಿಭಾಗ- ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ.
ಆಡಿಷನ್ ನೋಂದಾವಣೆಗಾಗಿ ಬೆಳಗ್ಗೆ 9:30ರಿಂದ ಸಂಜೆ 6:30 ಒಳಗಾಗಿ ಈ ಸಂಖ್ಯೆಗೆ ಕರೆ ಮಾಡುವಂತೆ ಪ್ರಕಟಣೆ ಕೋರಿದೆ. ಕರೆ ಮಾಡಬೇಕಾದ ಸಂಖ್ಯೆ: 9743175916. ಈ ಕಾರ್ಯಕ್ರಮ ಮುಳಿಯ ಜ್ಯುವೆಲ್ಸ್‌ನ ಫೇಸ್‌ಬುಕ್ ಪುಟದಲ್ಲಿ ಲೈವ್ ಆಗಿ ಪ್ರಸಾರವಾಗುತ್ತದೆ.
ಮುಳಿಯ ಗಾನರಥ ಇದೊಂದು ಪುತ್ತೂರು ತಾಲೂಕಿನ ಉದಯೋನ್ಮುಖ ಗಾಯಕ– ಗಾಯಕಿಯವರಿಗೆ ವೇದಿಕೆ ಸೃಷ್ಟಿ ಮಾಡುವ ಅಪೂರ್ವ ಕಾರ್ಯಕ್ರಮವಾಗಿದೆ. ಇದರ ನಿಬಂಧನೆಗಳು ಹೀಗಿವೆ.
1. ವಯೋಮಿತಿ ಆಧಾರಕ್ಕಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯ.
2. ಪ್ರೇಕ್ಷಕರಿಗೆ ಕಾರ್ಯಕ್ರಮ ವೀಕ್ಷಿಸಲು ಆನ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಲಾಗುವುದು.
3. ಕರೋಕೆ ಗಾಯನದಲ್ಲಿ ಹಾಡುವಾಗ ಎಲ್ಲಿಯೂ ಕರೋಕೆ ತಪ್ಪದಂತೆ ಹಾಡಬೇಕು.
4. ಕರೋಕೆ ಗಾಯನ ಹಾಡುವವರು ಕರೋಕೆ ಇರುವ ಶೃತಿಯಲ್ಲಿ ಹಾಡಬೇಕು.
5. ಕರೋಕೆ ಗಾಯನದಲ್ಲಿ ತಾಳಬದ್ಧವಾಗಿ ಹಾಡಬೇಕು, ಸಾಹಿತ್ಯ ತಪ್ಪಾಗಿ ಇರಬಾರದು.
6. ಗೀತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು.
7. ಚಿಕ್ಕಮಕ್ಕಳೊಂದಿಗೆ ಪೋಷಕರು ಹಾಜರಿರತಕ್ಕದ್ದು.
8. ವಯೋಮಿತಿ 12 ವಯಸ್ಸಿನಿಂದ 21ರವರೆಗೆ ಹಾಗೂ ಮೇಲ್ಪಟ್ಟ ವಯಸ್ಸಿನವರನ್ನು ಸಾರ್ವಜನಿಕ ವಿಭಾಗವೆಂದು 2 ವಿಭಾಗ ಮಾಡಲಾಗುವುದು.
9. ಆಡಿಷನ್‌ನಲ್ಲಿ 50 ಸ್ಪರ್ಧಿಗಳು ಮೇಲ್ಪಟ್ಟು ಇದ್ದಲ್ಲಿ ಹಾಡಿನ ಪಲ್ಲವಿ ಮತ್ತು ಪ್ರಥಮ ಚರಣ ಮಾತ್ರ ಹಾಡಲು ಅವಕಾಶ ನೀಡಲಾಗುವುದು.
10. ಕರೋಕೆ ಹಾಡುವ ಸ್ಫರ್ಧಿಗಳು ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ಭಾಷೆಗಳ ಹಾಡುಗಳನ್ನು ಹಾಡಲು ಅವಕಾಶ ಇರುತ್ತದೆ.
11. ಆಡಿಷನ್‌ನಲ್ಲಿ ಭಾಗವಹಿಸಿದ ಪ್ರತೀಯೊಬ್ಬ ಸ್ಪರ್ಧಿಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
12. ಆಡಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧಿಗಳಲ್ಲಿ ಆಯ್ಕೆಯಾದವರಿಗೆ ಸೆಮಿ ಫಿನಾಲೆ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ.
13. ಗ್ರ್ಯಾಂಡ್ ಫಿನಾಲೆಯ ವಿಜೇತರನ್ನು ಪುತ್ತೂರು ಮುಳಿಯ ಗಾನ ಕೋಗಿಲೆ ಎಂಬ ಬಿರುದು ನೀಡಿ ಪುರಸ್ಕರಿಸಲಾಗುವುದು.
14. ನುರಿತ ಹಿನ್ನಲೆ ಸಂಗೀತ ತೀರ್ಪುಗಾರರು ಹಾಗೂ ಸಂಸ್ಥೆಯ ತೀರ್ಮಾನವೇ ಅಂತಿಮ.
ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಪ್ರವೀಣ್ ಮತ್ತು ಆನಂದ್ ಕುಲಾಲ್ ಅವರನ್ನು 9743175916 ಮತ್ತು 9844602916 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.