ಜಿಲ್ಲೆ

ನವರಾತ್ರಿ ಸಂಭ್ರಮ | ಪುತ್ತೂರಿನಲ್ಲಿ ದೇವಿಸ್ತುತಿ ಗಾಯನ ಸ್ಪರ್ಧೆ ಉದ್ಘಾಟನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯದ ಸಹಯೋಗದಲ್ಲಿ ಮುಳಿಯ ಜ್ಯುವೆಲ್ಸ್ ನಿರ್ವಹಣೆ ಹಾಗೂ ಪ್ರಾಯೋಜಕತ್ವದಲ್ಲಿ ನವರಾತ್ರಿ ಪ್ರಯುಕ್ತ ಆನ್‍ಲೈನ್‍ನಲ್ಲಿ ನಡೆಯುವ ದೇವಿಸ್ತುತಿ ಗಾಯನ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಭಾನುವಾರ ಮುಳಿಯ ಜೇಸಿ ಹಾಲ್‍ನಲ್ಲಿ ನೆರವೇರಿತು.

Advertisement
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಮುಳಿಯ ಜ್ಯುವೆಲ್ಸ್ ನಿರ್ದೇಶಕರಾದ ಕೃಷ್ಣನಾರಾಯಣ ಮುಳಿಯ ಅವರ ಮಾತನಾಡಿ, ನಮ್ಮ ಧಾರ್ಮಿಕ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮುಂದಿನ ಪೀಳಿಗೆಗಳಿಗೂ ಧರ್ಮ-ಸಂಸ್ಕೃತಿಯ ಅರಿವು ಜಾಗೃತವಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಬೇಕಾಗಿದೆ ಎಂದು ಹೇಳಿ, ಶುಭಹಾರೈಸಿದರು.
ಅತಿಥಿಗಳಾಗಿ ವೇದಿಕೆಯಲ್ಲಿ ಮುಳಿಯ ಜ್ಯುವೆಲ್ಸ್ ನ ಎಚ್‍ಆರ್ ಶ್ಯಾಮ್‍ಮೂರ್ತಿ, ಆನ್‍ಲೈನ್ ಸೇಲ್ಸ್ ವಿಭಾಗದ ಲತಾ ಯತೀಶ್ ಉಪಸ್ಥಿತರಿದ್ದರು.

ರೇಡಿಯೋ ಪಾಂಚಜನ್ಯದ ಕಾರ್ಯದರ್ಶಿಗಳಾದ ಪದ್ಮಾ ಕೆ.ಆರ್. ಆಚಾರ್ಯ ಸ್ವಾಗತಿಸಿದರು. ಆನ್‍ಲೈನ್ ದೇವಿಸ್ತುತಿ ಗಾಯನ ಸ್ರ್ಪೆಯಲ್ಲಿ 122 ಸ್ಪರ್ಧಾಳುಗಳು ನೋಂದಣಿ ಮಾಡಿ ಭಾಗವಹಿಸಿರುತ್ತಾರೆ. ತೀರ್ಪುಗಾರರಾಗಿ ವಿದುಷಿ ಪ್ರೀತಿಕಲಾ ಮತ್ತು ತನ್ವಿ ಡಿ.ಐ ಸಹಕರಿಸಿದರು. ರೇಡಿಯೋ ಪಾಂಚಜನ್ಯದ ಸಂಯೋಜಕಿ ತೇಜಸ್ವಿ ರಾಜೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಮಾರುಕಟ್ಟೆ ಏನಾಗುತ್ತಿದೆ…? | 500 ರೂಪಾಯಿ ಯಾವಾಗ ಆಗುತ್ತೆ…?

ಕಳೆದ ಕೆಲವು ದಿನಗಳಿಂದ ಅಡಿಕೆ ಬೆಳೆಗಾರರಿಗೆ ನಿರೀಕ್ಷೆಯ ಮೇಲೆ ನಿರೀಕ್ಷೆ.ಚಾಲಿ ಅಡಿಕೆ ಧಾರಣೆ…

6 hours ago

ಕುಂಡಲಿಯ ರಹಸ್ಯ | ಈ ರಾಶಿಯವರಿಗೆ 12ನೇ ಮನೆಯಿಂದ ಗುಪ್ತ ಶತ್ರುಗಳ ಎಚ್ಚರಿಕೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್…

6 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕುಶಾಲಿ ಗೌಡ, ಬೆಂಗಳೂರು

ಕುಶಾಲಿ ಗೌಡ, ಗ್ರೆಡ್ -3, ಜ್ಞಾನ ಅಕಾಡೆಮಿ, ತರಬನ ಹಳ್ಳಿ ಬೆಂಗಳೂರು |…

13 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅನ್ವಿತಾ ಸಿ

ಅನ್ವಿತಾ ಸಿ, 9 ನೇ ತರಗತಿ, ಸರ್ಕಾರಿ ಪ್ರೌಢಶಾಲೆ , ಪಂಜ  |…

14 hours ago

ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ

ಜಮ್ಮು ಮತ್ತು ಕಾಶ್ಮೀರ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆಯ ಹಲವೆಡೆ ಮುಂದಿನ…

14 hours ago

ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ

ದಕ್ಷಿಣ ಕನ್ನಡ , ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ…

14 hours ago