ಮುಳಿಯ ಗೋವಿಹಾರ ಆಶ್ರಯದಲ್ಲಿ ಹಾಗೂ ಗೋಫಲ ಟ್ರಸ್ಟ್ ನೇತೃತ್ವದಲ್ಲಿ ‘ಅರಿಯೋಣ ಬನ್ನಿ ಗೋಜನ್ಯ ಉತ್ಪನ್ನಗಳನ್ನು’ – ಗೋವು ಆಧಾರಿತ ಉತ್ಪನ್ನಗಳ ತಯಾರಿಕಾ ಕಾರ್ಯಗಾರ ಪುತ್ತೂರಿನ ಕಬಕ ಸಮೀಪದ ಓಜಾಲದಲ್ಲಿರುವ ಮುಳಿಯ ಗೋವಿಹಾರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಫಲ ಟ್ರಸ್ಟ್ ನ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್ ಮಾತನಾಡಿ ಪ್ರತಿಯೊಬ್ಬರು ಗೋವುಗಳನ್ನು ಸಾಕಲು ಮನಸ್ಸು ಮಾಡಬೇಕು, ಪ್ರತಿಯೊಂದು ಮನೆಯಲ್ಲಿ ಗೋವುಗಳನ್ನು ಸಾಕಬೇಕು. ಈಗಿನ ಕಾಲಘಟ್ಟದಲ್ಲಿ ಗೋವುಗಳನ್ನು ಸಾಕಲು ಜನರು ಹೆದರುತ್ತಾರೆ. ಗೋ ಸಾಕಾಣೆಯೂ ಲಾಭದಾಯಕ. ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಬೆಳೆಸುತ್ತಾ ಗೋಶಾಲೆಗಳನ್ನು ಕೂಡ ಬೆಳೆಸಬೇಕು ಎಂದು ಹೇಳಿದರು.
ಕೃಷಿಕರಾದ ಪ್ರಶಾಂತ್ ರೈ ಕೈಕಾರ್ ರವರು ಪ್ರಾಸ್ತಾವಿಕ ಮಾತನ್ನಾಡಿ ಗೋವುಗಳ ಮಹತ್ವ ಗೋ ಉತ್ತನ್ನ ತಯಾರಿಕಾ ಕಾರ್ಯಾಗಾರದ ಅವಶ್ಯಕತೆಗಳನ್ನು ಹೇಳಿದರು. ಗೋವಿಹಾರ ಅಧ್ಯಕ್ಷರಾದ ಕೃಷ್ಣನಾರಾಯಣ ಮುಳಿಯ ಮಾತನಾಡಿ ಗೋವಿನಿಂದಾಗುವ ಪ್ರಯೋಜನಗಳು ಮತ್ತು ಮುಳಿಯ ಗೋವಿಹಾರದ ಬಗ್ಗೆ ವಿಶೇಷ ಮಾಹಿತಿ, ಹಾಗೂ ಕಾರ್ಯಾಗಾರದ ಉಪಯುಕ್ತತೆ ಬಗ್ಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಮೇಶ್ ಕುಲಕರ್ಣಿ, ಡಾ. ಎಮ್ ಯದುಕುಮಾರ್, ಉದಯ್ ಶಂಕರ್, ಕೆ.ಟಿ ವೆಂಕಟೇಶ್, ಭಾಸ್ಕರ್ ರಾವ್ ಉಬರಡ್ಕ, ಜಯಗುರು ಆಚಾರ್ಯ ಹಿಂದಾರು ಭಾಗವಹಿಸಿದ್ದರು. ಗೋವಿನಿಂದಾಗಿ ಮನುಷ್ಯರಿಗೆ ದಿನನಿತ್ಯ ಬಳಕೆಯಾಗುವ ದಂತಮಂಜನ್, ಸೋಪು, ದೂಪಬತ್ತಿ, ಹಣತೆ, ವಿಭೂತಿ, ಬೆರಣಿ, ಧೂಪ, ಸ್ವರ್ಗಸಾರ, ಗೋನಂದಾಜಲ, ಎರೆಹುಳ ಗೊಬ್ಬರ, ಗಣಪತಿ ವಿಗ್ರಹ, ಅಮೃತ್ ಮಲಂ ಅಲ್ಲದೆ ಇತರ ಸೌಂದರ್ಯವರ್ಧಕ ಸಾಮಾಗ್ರಿಗಳು, ಕೃಷಿ ಭೂಮಿಗೆ ಬೇಕಾಗುವ ಜೀವಾಮೃತ, ಕೀಟ ನಿಯಂತ್ರಕ, ಜೀವಾಮೃತ ಔಷಧಿಗಳನ್ನು ತಯಾರಿಸುವ ವಿಧಾನವನ್ನು ಈ ಶಿಬಿರದಲ್ಲಿ ಕಲಿಸಿಕೊಡಲಾಯಿತು. ಕಾರ್ಯಕ್ರಮವನ್ನು ಶಿವಪ್ರಸಾದ್ ನಿರೂಪಿಸಿದರು. ಮುಳಿಯ ಗೋವಿಹಾರದ ಉಸ್ತುವಾರಿ ಸದಾಶಿವ ಸ್ವಾಗತಿಸಿದರು. ಮುಳಿಯ ಗೋವಿಹಾರ ಸದಸ್ಯೆ ಅಶ್ವಿನಿಕೃಷ್ಣ ಮುಳಿಯ ಪ್ರಾರ್ಥಿಸಿದರು. ಶಂಕರ್ ಧನ್ಯವಾದಗೈದರು. ಕೋಕೋ ಗುರು ಮಾಲಕ ಸಂತೋಷ್, ಗೊಲೆಕ್ಸ್ ಕೃಷ್ಣಮೋಹನ್, ದಿನೇಶ್ ಪ್ರಸನ್ನ ಕರಿಯಾಳ, ಇಶಾ ಸುಲೋಚನಾ ಮುಳಿಯ ಮುಂತಾದವರು ಭಾಗವಹಿಸಿದ್ದರು. ಗೋಫಲ ಟ್ರಸ್ಟ್ ನ ಜನರಲ್ ಮ್ಯಾನೇಜರ್ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




