ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ | ವಿಶೇಷ ಅನುಬಂಧ ಕಾರ್ಯಕ್ರಮ

June 23, 2024
7:56 PM

ಒಳ್ಳೆ ವಿಚಾರಗಳನ್ನು ನಮ್ಮ ಸಂಸ್ಕೃತಿಗೆ ಅಳವಡಿಸಿಕೊಳ್ಳುವುದು ಹಿರಿಯರಿಂದ ನಡೆದು ಬಂದ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಮುಳಿಯದ ವತಿಯಿಂದ ಅಪ್ಪಂದಿರ ದಿನಕ್ಕೆ ವಿಶೇಷ ಸ್ಥಾನವನ್ನು ನೀಡಿ ಆಚರಣೆಗೆ ತರಲಾಗಿದೆ. ಐದು ಶೋರೂಂ ನಲ್ಲಿ ಸೇರಿದ ಜನರನ್ನು ನೋಡಿದರೆ ಮಹತ್ವವಿದೆ ಎಂಬುದು ತಿಳಿಯುತ್ತದೆ ಎಂದು ಮುಳಿಯ ಜ್ಯುವೆಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.

Advertisement
Advertisement

ಶನಿವಾರ ಪುತ್ತೂರು ಶಾಖೆಯಲ್ಲಿ ಮುಳಿಯ ಜ್ಯುವೆಲ್ಸ್ ವತಿಯಿಂದ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ತಂದೆಯವರು ಸಂಸ್ಥೆ ನಡೆಸುವ ಸಮಯದಲ್ಲಿ 916 ಚಿನ್ನಾಭರಣ ಎಂಬ ವ್ಯವಸ್ಥೆ ಇಲ್ಲದಿದ್ದರೂ, ಅವರ ಕಾಲದಲ್ಲಿ ನೀಡಿದ ಚಿನ್ನಾಭರಣಗಳು ಅದೇ ಗುಣಮಟ್ಟದಲ್ಲಿತ್ತು. ಆ ಪ್ಯೂರಿಟಿಯನ್ನು ಅಂದು ಗ್ರಾಹಕರಿಗೆ ನೀಡಿದ ಕಾರಣದಿಂದ ಇಂದಿಗೂ ಮುಳಿಯದ ಹೆಸರು ಉತ್ತಮವಾಗಿ ಉಳಿದುಕೊಂಡಿದೆ. ಸಂಸ್ಥೆಯ ಬೆಳವಣಿಗೆಯಲ್ಲೂ ಇದು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.

ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮವನ್ನು ಮುಳಿಯ ಸಂಸ್ಥೆಯ ಹಿರಿಯರಾದ ಶ್ಯಾಮ್ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಿಲ್ವರ್ ಉತ್ಸವದ ಅಂಗವಾಗಿ ವಿವಿಧ ವಿನ್ಯಾಸದ ಆಭರಣಗಳನ್ನು ಬಿಡುಗಡೆ ಮಾಡಲಾಯಿತು.

Advertisement

ಗ್ರಾಹಕರಾದ ರವಿ ಕುಮಾರ್ ಮಾತನಾಡಿ ಹಿರಿಯರ ಕಾಲದಿಂದಲೂ ಮುಳಿಯದ ಗ್ರಾಹಕರಾಗಿದ್ದು, ಚಿನ್ನ ಎಂದರೆ ಮುಳಿಯ ಎಂದು ಹೆಸರುವಾಸಿಯಾಗಿದೆ. ಮುಳಿಯ ಸಂಸ್ಥೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿರದೆ, ಗ್ರಾಹಕರ ಸಂತೃಪ್ತಿಗೂ ಹೆಚ್ಚಿನ ಮಹತ್ವ ನೀಡುತ್ತಿರುವುದು ಕಾರ್ಯಕ್ರಮಗಳ ಮೂಲಕ ತಿಳಿಯುತ್ತದೆ ಎಂದರು.

ವಿಶೇಷ ರೀತಿಯ ಅನುಭಂದ ಕಾರ್ಯಕ್ರಮ, ವಿನೂತನ ಆಟಗಳು, ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳ ಕಾರ್ಯಕ್ರಮ ನಡೆಯಿತು. ಸಂಗೀತ ಮನೋರಂಜನೆಯನ್ನು ಗ್ರಾಹಕರಿಗೆ ನೀಡಲಾಯಿತು. ಗ್ರಾಹಕ ಇಸ್ಮಾಯಿಲ್ ನೆಲ್ಯಾಡಿ ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement

ಸಂಸ್ಥೆಯ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಮಾರುಕಟ್ಟೆ ಮುಖ್ಯಸ್ಥ ಸಂಜೀವ, ಪ್ಲೋರ್ ಮ್ಯಾನೇಜರ್ ಆನಂದ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Advertisement

ಪ್ಲೋರ್ ಮ್ಯಾನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸೌರಭ ರಾವ್ ಸಹಕರಿಸಿದರು.

ಏಕಕಾಲದಲ್ಲಿ ಕಾರ್ಯಕ್ರಮ: ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು ಶೋರೋಂ ನಲ್ಲಿ ಏಕಕಾಲದಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ ವಿನೂತನ ಕಾರ್ಯಕ್ರಮ ನಡೆಯಿತು. 200 ಕ್ಕೂ ಅಧಿಕ ತಂದೆ ಮಗ, ಅಪ್ಪ ಮಗಳು ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ| 2.06.2024 | ರಾಜ್ಯದ ಅಲ್ಲಲ್ಲಿ ಸಾಮಾನ್ಯ ಮಳೆ | ಜು.4 ರಿಂದ ಉತ್ತಮ ಮಳೆ ಮುನ್ಸೂಚನೆ
June 29, 2024
2:19 PM
by: ಸಾಯಿಶೇಖರ್ ಕರಿಕಳ
ಒನಕೆ ಎಂಬ ಉಕ್ಕಿನ ಆಯುಧ…!!! ಬಲು ಅಪರೂಪದ ಒಂದು ಮಾಹಿತಿ
June 29, 2024
2:15 PM
by: The Rural Mirror ಸುದ್ದಿಜಾಲ
ನಾನು ಪ್ಲಾಸ್ಟಿಕ್‌ ಅಲ್ಲ : ಜೈವಿಕವಾಗಿ ವಿಘಟನೆಯಾಗುವ ಕ್ಯಾರಿಬ್ಯಾಗ್​ ಬಳಸಿ : ಸಸ್ಯಜನ್ಯ ಕೈಚೀಲಗಳ ತಯಾರಿಕೆ, ದಾಸ್ತಾನು, ಮಾರಾಟಕ್ಕೆ ತುರ್ತು ಕ್ರಮ – ಸಚಿವ ಈಶ್ವರ್ ಖಂಡ್ರೆ
June 29, 2024
1:21 PM
by: The Rural Mirror ಸುದ್ದಿಜಾಲ
ಇನ್ಮುಂದೆ ಮೈಸೂರು ಅರಮನೆ ಸಮೀಪ ಪಾರಿವಾಳಗಳಿಗೆ ಆಹಾರ ಹಾಕದಿರಿ ಜೋಕೆ : ಬೀಳಲಿದೆ ದಂಡ : ತಜ್ಞರು, ಪಕ್ಷಿಪ್ರೇಮಿಗಳಅಭಿಪ್ರಾಯ ಏನು?
June 29, 2024
1:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror