ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಲ್ಲೊಂದಾದ ಮುಳಿಯ ಜ್ಯುವೆಲ್ಸ್‍ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆ ಹಾಗೂ ಮುಳಿಯದ 78ನೇ ವರ್ಷದ ಬಾಂಧವ್ಯದ ಸಂಕೇತವಾಗಿ ಅಪರಂಜಿ ಚಿನ್ನ ಮತ್ತು ಬೆಳ್ಳಿಯ ನಾಣ್ಯದ ಸ್ಮರಣಿಕೆ ಅನಾವರಣ ಕಾರ್ಯಕ್ರಮ ಆ 13 ರಂದು ನಡೆಯಿತು.
ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಚಿನ್ನ ಮತ್ತು ಬೆಳ್ಳಿ ನಾಣ್ಯದ ಸ್ಮರಣಿಕೆ ಅನಾವರಣಗೊಳಿಸಿದರು ಬಳಿಕ ಮಾತನಾಡಿದ ಅವರು “ಭಾರತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವಾಗ, ಮುಳಿಯ ಸಂಸ್ಥೆ 78ರ ಸಂಭ್ರಮದಲ್ಲಿರುವುದು ಸಂತಸದ ವಿಚಾರ. ಕೇಶವ ಪ್ರಸಾದ್ ಮುಳಿಯ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ವ್ಯವಹಾರ ಕ್ಷೇತ್ರದಲ್ಲೂ ಅವರ ಕೆಲಸಗಳನ್ನು ಗಮಸಿದಾಗ ಹೆಮ್ಮೆಯೆನಿಸುತ್ತದೆ. ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯಲಿ” ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel