ಮುಳಿಯದಲ್ಲಿ ಅಪರಂಜಿ ಚಿನ್ನ ಮತ್ತು ಬೆಳ್ಳಿ ನಾಣ್ಯದ ಸ್ಮರಣಿಕೆ ಅನಾವರಣ |

Advertisement

ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಲ್ಲೊಂದಾದ ಮುಳಿಯ ಜ್ಯುವೆಲ್ಸ್‍ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆ ಹಾಗೂ ಮುಳಿಯದ 78ನೇ ವರ್ಷದ ಬಾಂಧವ್ಯದ ಸಂಕೇತವಾಗಿ ಅಪರಂಜಿ ಚಿನ್ನ ಮತ್ತು ಬೆಳ್ಳಿಯ ನಾಣ್ಯದ ಸ್ಮರಣಿಕೆ ಅನಾವರಣ ಕಾರ್ಯಕ್ರಮ ಆ 13 ರಂದು ನಡೆಯಿತು.

Advertisement

ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಚಿನ್ನ ಮತ್ತು ಬೆಳ್ಳಿ ನಾಣ್ಯದ ಸ್ಮರಣಿಕೆ ಅನಾವರಣಗೊಳಿಸಿದರು ಬಳಿಕ ಮಾತನಾಡಿದ ಅವರು “ಭಾರತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವಾಗ, ಮುಳಿಯ ಸಂಸ್ಥೆ 78ರ ಸಂಭ್ರಮದಲ್ಲಿರುವುದು ಸಂತಸದ ವಿಚಾರ. ಕೇಶವ ಪ್ರಸಾದ್ ಮುಳಿಯ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ವ್ಯವಹಾರ ಕ್ಷೇತ್ರದಲ್ಲೂ ಅವರ ಕೆಲಸಗಳನ್ನು ಗಮಸಿದಾಗ ಹೆಮ್ಮೆಯೆನಿಸುತ್ತದೆ. ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯಲಿ” ಎಂದರು.

Advertisement
Advertisement
Advertisement
ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್ “ಈ ಸಂಸ್ಥೆ ನಾನು ಸಣ್ಣದಿಂದಲೇ ನೋಡುತ್ತಿದ್ದೇನೆ, ಅಣ್ಣ-ತಮ್ಮಂದಿರು ಸೇರಿಕೊಂಡು ಸಂಸ್ಥೆಯನ್ನು ಬೆಳವಣಿಗೆಯ ಹಾದಿಯಲ್ಲಿ ಬೆಳೆಸುತ್ತಿದ್ದಾರೆ. ವ್ಯವಹಾರದ ಜೊತೆಗೆ ಸಮಾಜಸೇವೆಯನ್ನೂ ಮಾಡುತ್ತಾ ಬಂದಿರುವ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ’ ಎಂದರು.

ಮುಳಿಯ ಜ್ಯುವೆಲ್ಸ್‍ನ ಚೇರ್ಮೆನ್ ಹಾಗೂ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತಾನಾಡಿ ‘ಗ್ರಾಹಕರ ಸೇವೆಯಿಂದ ತೃಪ್ತಿ ಪಡುವಂತೆ ಹಿರಿಯರು ಕಿವಿ ಮಾತು ಹೇಳಿದ್ದಾರೆ. ಇದನ್ನು ಬೆಳೆಸಿಕೊಂಡು ವ್ಯವಹಾರ ಮಾಡಿತ್ತಿದ್ದೇವೆ, ಚಿನ್ನ ಖರೀದಿಗೆ ಯಾವತ್ತೂ ಸಕಾಲ ಮತ್ತು ಸಾರ್ವಕಾಲಿಕ. ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಹಾಗೂ ನಮ್ಮ ಸಂಸ್ಥೆಗೆ 78ನೇ ವರ್ಷದ ಸಂಭ್ರಮ ಆದ್ದರಿಂದ ಇವೆರಡರ ನೆನಪಿಗಾಗಿ ಅಪರಂಜಿ ಚಿನ್ನ ಮತ್ತು ಬೆಳ್ಳಿಯ ನಾಣ್ಯದ ಸ್ಮರಣಿಕೆ ಅನಾವರಣ ಮಾಡುತ್ತದ್ದೇವೆ. ಗ್ರಾಹಕರಿಂದ ಮುಂದೆಯೂ ಸಹಕಾರವನ್ನು ಅಪೇಕ್ಷಿಸುತ್ತೇವೆ’ ಎಂದರು.

Advertisement
Advertisement
ಈ ಸಂದರ್ಭದಲ್ಲಿ ಚಿನ್ನದ ಸ್ಮರಣಿಕೆಯ ಮೊದಲೆರಡು ಗ್ರಾಹಕರಾದ ಪ್ರಗತಿಪರ ಕೃಷಿಕ ಶ್ರೀಪತಿ ಭಟ್ ಹಾಗೂ ಪ್ರಜ್ವಲ್‍ರಿಗೆ ಚಿನ್ನದ ನಾಣ್ಯ ಸ್ಮರಣಿಕೆ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಶ್ರೀಪತಿ ಭಟ್ ಯು ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿ ನವ್ಯ ಪ್ರಾರ್ಥಿಸಿ, ಪುತ್ತೂರು ಮುಳಿಯ ಚಿನ್ನಾಭರಣ ಮಳಿಗೆಯ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು, ಮಾರ್ಕೆಟಿಂಗ್ ವಿಭಾಗದ ಪ್ರಬಂಧಕರು ಸಂಜೀವ ವಂದಿಸಿ, ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮುಳಿಯದಲ್ಲಿ ಅಪರಂಜಿ ಚಿನ್ನ ಮತ್ತು ಬೆಳ್ಳಿ ನಾಣ್ಯದ ಸ್ಮರಣಿಕೆ ಅನಾವರಣ |"

Leave a comment

Your email address will not be published.


*