ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪುತ್ತೂರಿನ ಮುಳಿಯ ಜ್ಯುವೆಲ್ಸ್ ಸಂಸ್ಥೆ 3 ರಿಂದ 12 ವರ್ಷದ ಮಕ್ಕಳಿಗಾಗಿ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯು ಆಗಸ್ಟ್ 14ರಂದು ಬೆಳಗ್ಗೆ 10.30ರಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಝೂಮ್ ಆಪ್ ಮೂಲಕ ನಡೆಯುವ ಸ್ಫರ್ಧೆಯನ್ನು ಫೇಸ್‍ಬುಕ್ ಲೈವ್ ಮೂಲಕ ಪ್ರಸಾರ ಮಾಡಲಾಗುವುದು. ಸ್ಫರ್ಧಿಗಳು ತಮ್ಮ ಮನೆಯಿಂದಲೇ ವೇಷ ಭೂಷಣಗಳನ್ನು ಧರಿಸಿ, ಮುಳಿಯ ಜ್ಯುವೆಲ್ಸ್ ನ ಝೂಮ್ ಆಪ್ ಲಿಂಕ್ ಒತ್ತಿ ಭಾಗವಹಿಸಬಹುದು. ನೋಂದಾಯಿತ ಸ್ಫರ್ಧಿಗಳಿಗೆ ಝೂಮ್ ಆಪ್ ಐಡಿ ಮತ್ತು ಪಾಸ್ವರ್ಡ್‍ಗಳನ್ನು ನೀಡಲಾಗುವುದು. ಭಾಗವಹಿಸುವವರು ಆಗಸ್ಟ್ 12ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ವಿಜೇತ ಸ್ಫರ್ಧಿಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಸ್ಫರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ. ನೋಂದಾವಣೆಗಾಗಿ : 9353030916, 8494915916 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel