ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ ಸಹಯೋಗದಲ್ಲಿ ಮುಳಿಯ ಜ್ಯುವೆಲ್ಸ್ ನಿರ್ವಹಣೆ ಹಾಗೂ ಪ್ರಾಯೋಜಕತ್ವದಲ್ಲಿ ನವರಾತ್ರಿ ಪ್ರಯುಕ್ತ ದೇವಿಸ್ತುತಿ ಗಾಯನ ಸ್ಪರ್ಧೆ ಅಕ್ಟೋಬರ್ 2ರಂದು ಭಾನುವಾರ ನಡೆಯಲಿದೆ.
ಸ್ಪರ್ಧೆಗಳು 6 ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು ಎಂಬ ಎರಡು ವಿಭಾಗಗಳಲ್ಲಿ ನಡೆಯಲಿವೆ. ಸ್ಪರ್ಧೆಯನ್ನು Zoom ವೇದಿಕೆ ಮೂಲಕ ನಡೆಸಲಾಗುವುದು. ರಿಜಿಸ್ಟ್ರೇಶನ್ ಮಾಡಿಕೊಂಡ ಸ್ಪರ್ಧಾಳುಗಳಿಗೆ ಲಾಗಿನ್ ಆಗಲು ಐಡಿ ಮತ್ತು ಪಾಸ್ವರ್ಡ್ಗಳನ್ನು ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯ ಸಮಯಾವಕಾಶ 2+ 1 ನಿಮಿಷಗಳಾಗಿದ್ದು, ಸ್ಪರ್ಧಿಗಳು ಕರೋಕೆ ಬಳಸುವಂತಿಲ್ಲ. ಗೀತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು. ಎಲ್ಲಾ ಸ್ಪರ್ಧಾರ್ಥಿಗಳು @puttursrimahalingeshwara ಫೇಸ್ಬುಕ್ ಪುಟವನ್ನು ಲೈಕ್ ಮಾಡಬೇಕು. ನುರಿತ ಸಂಗೀತ ತೀರ್ಪುಗಾರರು ಹಾಗೂ ಸಂಸ್ಥೆಯ ತೀರ್ಮಾನವೇ ಅಂತಿಮವಾಗಿರುತ್ತದೆ. ಸಂಪೂರ್ಣ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ನ ಫೇಸ್ಬುಕ್ ಲೈವ್ ಮೂಲಕ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನೋಂದಾವಣೆ ಉಚಿತವಾಗಿದ್ದು, ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ: 9353030916 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.