ಮುಳಿಯ ಚಿನ್ನೋತ್ಸವ | ಸ್ಪೆಷಲ್ ರುದ್ರಾಕ್ಷಿ ಕಲೆಕ್ಷನ್ ಅನಾವರಣ

May 17, 2024
10:54 AM
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ ರುದ್ರಾಕ್ಷಿ ಕಲೆಕ್ಷನ್ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಅನಾವರಣಗೊಂಡಿದೆ.

ಶಿವನಿಗೆ ಸಂಬಂಧಿಸಿದ ರುದ್ರಾಕ್ಷ ಕಂಕಣವು ಜನಸಾಮಾನ್ಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಹಿಂದೂ ಧರ್ಮದಲ್ಲಿ, ರುದ್ರಾಕ್ಷ ಕಂಕಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ, ಇದು ಜೀವನಕ್ಕೆ ಸಂಬಂಧಿಸಿದ ಕಷ್ಟಗಳು ಮತ್ತು ಸಮಸ್ಯೆಗಳನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಅಂತಹ ರುದ್ರಾಕ್ಷಿಗಳನ್ನು ಇತ್ತೀಚಿಗಿನ ದಿನದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ ರುದ್ರಾಕ್ಷಿ ಕಲೆಕ್ಷನ್ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಅನಾವರಣಗೊಂಡಿದೆ.

Advertisement
Advertisement

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ರುದ್ರಾಕ್ಷಿ ಹೊಸ ವಿನ್ಯಾಸದ ಸಂಗ್ರಹವನ್ನು ಅನಾವರಣಗೊಳಿಸಿದರು. ಆರಂಭದಲ್ಲಿ ದೀಪ ಪ್ರಜ್ವಲಿಸಿ, ಬಳಿಕ ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದರು. ಇದೇ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವರ ಪ್ರಸಾದವನ್ನು ಮುಳಿಯ ಜ್ಯುವೆಲ್ಸ್‌ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರಿಗೆ ನೀಡಿ ಸಂಸ್ಥೆಗೆ ಶ್ರೀ ದೇವರ ಅನುಗ್ರಹಕ್ಕೆ ಪ್ರಾರ್ಥಿಸಿದರು.

ಆರೋಗ್ಯ ಪೂರಿತ ಜೀವನ ವೃದ್ಧಿಸಲು ರುದ್ರಾಕ್ಷಿ ಮಹತ್ವ ಪಡೆದಿದೆ: ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವೆಂಕಟೇಶ್ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಆರೋಗ್ಯ ಪೂರಿತ ಜೀವನವನ್ನು ವೃದ್ಧಿಸಲು ಪೂರಕವಾಗಿ ರುದ್ರಾಕ್ಷಿ ಸರ, ಕೈಯ ಆಭರಣ ಬಹಳ ಮಹತ್ವ ಪಡೆದಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಭಕ್ತಿಯ ಮಾರ್ಗದರ್ಶನ ನೀಡುತ್ತಿರುವ ಮುಳಿಯ ಜ್ಯುವೆಲ್ಸ್‌ಗೆ ಪರಿವಾರ ಸಹಿತ ಮಹಾಲಿಂಗೇಶ್ವರ ದೇವರ ಪೂರ್ಣ ಅನುಗ್ರಹ ಇರಲಿ. ಗ್ರಾಹಕರಿಗೂ ರುದ್ರಾಕ್ಷಿ ಮಾಲೆಯನ್ನು ಧರಿಸುವ ಯೋಗ ಭಾಗ್ಯ ಬರಲಿ ಎಂದು ಹಾರೈಸಿದರು.

ಮನಸ್ಸಿನ ಆರೋಗ್ಯ ವೃದ್ಧಿಗೆ ರುದ್ರಾಕ್ಷಿ ಅಗತ್ಯ: ಮುಳಿಯ ಜ್ಯುವೆಲ್ಸ್‌ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ರುದ್ರಾಕ್ಷಿ ವಿಶೇಷ ಆಭರಣ ಯಾಕೆಂದರೆ ‘ಸುಖಸ್ಯ ಮೂಲ ಧರ್ಮ’ ಎಂದು ಆಚಾರ್‍ಯರಾಗಿರುವ ಚಾಣಕ್ಯ ಹಿಂದೆ ಹೇಳಿದ್ದಾರೆ. ನಿತ್ಯ ದೇವರ ದ್ಯಾನ ಮಾಡಲು ತುಳಸಿ ಮಾಲೆ, ರುದ್ರಾಕ್ಷಿ ಮಹತ್ವ ಪಡೆದಿದೆ. ಮನಸ್ಸಿನ ಆರೋಗ್ಯ ವೃದ್ದಿಯಾಗಲು ರುದ್ರಾಕ್ಷಿ ಮಹತ್ವ ಪಡೆದಿದದೆ. ಇದನ್ನು ಪ್ರತಿಯೊಬ್ಬರು ಧರಿಸಬಹುದು ಎಂಬುದಕ್ಕೆ ಸಣ್ಣ ಸಣ್ಣ ರುದ್ರಾಕ್ಷಿಯನ್ನು ಸಣ್ಣ ಸಣ್ಣ ಮಾಲೆಯನ್ನಾಗಿ ಕೈ ಬಳೆ, ಉಂಗುರವನ್ನಾಗಿ, ಸರವನ್ನಾಗಿ ಸಿದ್ಧಪಡಿಸಲಾಗಿದೆ. ಹಿಂದೆ ಗ್ರಾಹಕರು ಮಾಡಿಸಿ ಧರಿಸುತ್ತಿದ್ದರು. ಇದೀಗ ಗ್ರಾಹಕರಿಗೆ ಅನುಕೂಲವಾಗಲು ರುದ್ರಾಕ್ಷಿ ಕಲೆಕ್ಷನ್ ಸಿದ್ದಪಡಿಸಲಾಗಿದೆ. ಆರ್ಡರ್ ಕೊಟ್ಟು ಮಾಡಿಸುವ ಬದಲು ನೇರ ಬಂದು ಖರೀದಿ ಮಾಡಬಹುದು. ರುದ್ರಾಕ್ಷ ಮಣಿಗಳ ಕೈ ಬಳೆಯು ಕುತ್ತಿಗೆಗೆ ದೊಡ್ಡ ಮಾಲೆಯನ್ನು ಧರಿಸಲು ಇಷ್ಟಪಡದವರಿಗೆ ಸೂಕ್ತವಾಗಿದೆ ಎಂದ ಅವರು ರುದ್ರಾಕ್ಷಿ ದೇಹಕ್ಕೂ ಮನಸ್ಸಿಗೂ ವೃದ್ದಿ ಸಿಗುತ್ತದೆ. ಕೈ ಆಭರಣ, ಗಂಟಾಭರಣ, ಪೆಂಡೆಂಟ್, ಪದಕ ಸಹಿತ ಹಲವು ಕಲೆಕ್ಷನ್ ನಮ್ಮಲಿ ಇವೆ ಎಂದು ಹೇಳಿದರು.

ಮುಳಿಯ ಜ್ಯುವೆಲ್ಸ್‌ನ ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಕಾರ್ಯ ನಿರ್ವಹಣಾ ಅಧಿಕಾರಿ ಶಿವಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಬಂಧಕರಾದ ಸಂಜೀವ, ಶಂಕರ್ ಅತಿಥಿಗಳನ್ನು ಗೌರವಿಸಿದರು. ಹರಿಣಾಕ್ಷಿ ಪ್ರಾರ್ಥಿಸಿದರು. ಪ್ಲೋರ್ ಮೆನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್
January 30, 2026
10:42 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ
January 30, 2026
6:18 PM
by: ವಿಶೇಷ ಪ್ರತಿನಿಧಿ
ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror