ವಿಳಂಬವಾದ ಮುಂಗಾರು ಈಗ ಮುಂಬೈ ತಲುಪಿದೆ. ಮುಂಬಯಿಯ ಥಾಣೆ ನಗರದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮುಂಬಯಿ ಮತ್ತು ಥಾಣೆಯ ಕೆಲವು ಭಾಗಗಳಲ್ಲಿ ಶನಿವಾರ ಮುಂಜಾನೆ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯು ಜೂನ್ 26 ಮತ್ತು 27 ಕ್ಕೆ ಎಲ್ಲೋ ಎಲರ್ಟ್ ನೀಡಿದೆ.
ಜೂನ್ 24, ಶನಿವಾರದಂದು ಮುಂಬಯಿ ನಗರದ ಹಲವಾರು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಬಹುದು. ಬಿಪರ್‌ಜೋಯ್ ಚಂಡಮಾರುತದಿಂದಾಗಿ ಮುಂಗಾರು ವಿಳಂಬವಾಗಿತ್ತು. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯ ನಡುವೆಯೂ ಇಲ್ಲಿಯವರೆಗೆ ಸಂಚಾರ ಸುಗಮವಾಗಿ ನಡೆಯುತ್ತಿದೆ. ಬಸ್ ಅಥವಾ ಸ್ಥಳೀಯ ರೈಲು ಸೇವೆಗಳಲ್ಲಿ ಯಾವುದೇ ಅಡೆತಡೆಗಳು ವರದಿಯಾಗಿಲ್ಲ.
(Source :News agencies )
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel