#MumbaiRains | ಮುಂಬಯಿಯಲ್ಲಿ ಅಬ್ಬರಿಸಿದ ಮಳೆ | ಹಲವು ಪ್ರದೇಶಗಳು ಜಲಾವೃತ | ಕಟ್ಟಡ ಕುಸಿತ |

June 25, 2023
5:39 PM

ಮುಂಬಯಿಯಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಮೊದಲ ಮಳೆಗೆ ಮುಂಬಯಿಯ ಹಲವು ಪ್ರದೇಶಗಳು ಮುಳುಗಿದೆ. ಕೆಲವೇ ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಬಯಿ ಜೊತೆಗೆ ಪುಣೆ, ನಾಗ್ಪುರದಲ್ಲೂ ಭಾರಿ ಮಳೆಯಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ ಕೆಲವು ಕಡೆಗಳಲ್ಲಿ 220 ಮಿಮೀ ಮಳೆಯಾದ ಬಗ್ಗೆ ವರದಿಯಾಗಿದೆ.ಮಳೆಯ ಅಬ್ಬರ ಮುಂದುವರಿದಿದೆ.

Advertisement

ಮುಂಬಯಿ, ಥಾಣೆ, ಪಾಲ್ಘರ್ ಮತ್ತು ರಾಯಗಢದಲ್ಲಿ ಎಲ್ಲೋ ಎಲರ್ಟ್‌ ಘೋಷಣೆ ಮಾಡಲಾಗಿತ್ತು. ಈ ನಡುವೆಯೇ  ಭಾರಿ ಮಳೆ ಸುರಿದಿದೆ. ಇನ್ನೀಗ ಆರೆಂಜ್‌ ಎಲರ್ಟ್‌ ತಿಳಿಸಲಾಗಿದೆ. ಮೊದಲ ದಿನದ ಮಳೆಗೆ ಮುಂಬಯಿಯ ಹಲವಾರು ಭಾಗಗಳು ಜಲಾವೃತಗೊಂಡವು . ಮಳೆಯ ಅವಘಡ ಹಾಗೂ ಸಮಸ್ಯೆಗಳ ಬಗ್ಗೆ ಟ್ವಿಟ್ಟರ್‌ ಮೂಲಕ ಹಲವಾರು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಳೆಯ ಕಾರಣದಿಂದ  ಮುಂಬಯಿಯ ವಿಲೆ ಪಾರ್ಲೆಯ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದಿದೆ. ಐದು ಮಂದಿಗೆ ಗಾಯಗಳು ವರದಿಯಾಗಿವೆ. ಶನಿವಾರ ಸುರಿದ ಭಾರೀ ಮಳೆಯ ನಡುವೆ, ಶನಿವಾರ ಸಂಜೆ ಗೋವಂಡಿಯ ಶಿವಾಜಿ ನಗರದಲ್ಲಿ ತುಂಬಿ ಹರಿಯುವ ಚರಂಡಿಯ ಮ್ಯಾನ್‌ಹೋಲ್‌ಗೆ ಬಿದ್ದು ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ನಗರದ ಹೆಚ್ಚಿನ ಭಾಗಗಳಲ್ಲಿ ಸುರಿದ ಭಾರೀ ಮಳೆಯ ಕಾರಣದಿಂದ  ನಗರದ ಕಾಲುವೆಗಳು ತುಂಬಿ ಹರಿಯುತ್ತಿವೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ
April 30, 2025
10:29 AM
by: The Rural Mirror ಸುದ್ದಿಜಾಲ
ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ
April 30, 2025
10:18 AM
by: The Rural Mirror ಸುದ್ದಿಜಾಲ
ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!
April 30, 2025
10:02 AM
by: ದ ರೂರಲ್ ಮಿರರ್.ಕಾಂ
ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |
April 29, 2025
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group