The Rural Mirror ವಾರದ ವಿಶೇಷ

ರಬ್ಬರ್‌ ಕೃಷಿ | ಕೃಷಿಯಲ್ಲಿ ಮಾರ್ಪಾಡು – ಹೆಚ್ಚು ಇಳುವರಿ ಪಡೆಯುತ್ತಿರುವ ಕೃಷಿಕ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ರಬ್ಬರ್‌ ಕೃಷಿ ಕಳೆದ ಕೆಲವು ವರ್ಷಗಳಿಂದ ಬೆಳೆದಿದೆ. ಹೊಸ ಪ್ರಯೋಗಗಳು ರಬ್ಬರ್‌ ಕೃಷಿಯಲ್ಲಿ ಕರ್ನಾಟಕದಲ್ಲಿ ಬಹಳಷ್ಟು ನಡೆದಿಲ್ಲ. ಕಾಸರಗೋಡು ಜಿಲ್ಲೆಯ ಬೆಳ್ಳೆಚ್ಚಾಲು ಪ್ರದೇಶದ ಮುಳ್ಳಂಕೊಚ್ಚಿಯ ಮುರಳಿ ಸುಬ್ಬರಾವ್‌ ಅವರು ರಬ್ಬರ್‌ ಕೃಷಿಯಲ್ಲಿ ಹೊಸ ಮಾರ್ಪಾಡುಗಳನ್ನು ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದಾರೆ. …..ಮುಂದೆ ಓದಿ….

Advertisement
Advertisement

ದೇಶದ ಕೆಲವು ರಾಜ್ಯಗಳಲ್ಲಿ ರಬ್ಬರ್‌ ಕೃಷಿ ಆರಂಭಗೊಂಡ ಬಳಿಕ ಕೇರಳದಲ್ಲಿ ವ್ಯಾಪಕವಾಗಿ ರಬ್ಬರ್‌ ಕೃಷಿ ಹರಡಿಕೊಂಡಿತ್ತು.  ಕರ್ನಾಟಕದಲ್ಲಿ 1980 ರ ನಂತರ ರಬ್ಬರ್‌ ಕೃಷಿ ಬಹಳಷ್ಟು ಕಡೆ ವಿಸ್ತರಣೆಯಾಗಿತ್ತು. ಅದರಲ್ಲೂ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಭಾಗದಲ್ಲಿ ಮಾತ್ರವೇ ರಬ್ಬರ್‌ ಕೃಷಿ ಹೆಚ್ಚಿನ ಪ್ರಮಾಣದಲ್ಲಿದೆ. ಉಳಿದ ತಾಲೂಕು, ಜಿಲ್ಲೆಗಳಲ್ಲಿ ವಾತಾವರಣದ ಕಾರಣದಿಂದ ಅಷ್ಟೊಂದು ಚೆನ್ನಾಗಿ ಬೆಳೆದಿಲ್ಲ, ವಿಸ್ತರಣೆಯೂ ಆಗಿಲ್ಲ. ಹಾಗೆಂದು ಈ ಕೃಷಿಯಲ್ಲಿ ಕೇರಳದಲ್ಲಿ ನಡೆದಿರುವಷ್ಟು ಪ್ರಯೋಗಗಳು ಕರ್ನಾಟಕದಲ್ಲಿ ನಡೆದಿಲ್ಲ. ಇದೀಗ ಕರ್ನಾಟಕದಲ್ಲಿ 1980 ರ ಆಸುಪಾಸಿನಲ್ಲಿ ರಬ್ಬರ್‌ ಪ್ಲಾಂಟೇಶನ್‌ ಮಾಡಿರುವ ಬಹುತೇಕ ಎಲ್ಲರೂ ಮರು ಪ್ಲಾಟೇಂಶನ್‌ ಮಾಡಿದ್ದಾರೆ.  ಆದರೆ ಈ ಕೃಷಿಯಲ್ಲಿ ಹೊಸ ಮಾರ್ಪಾಡುಗಳನ್ನು ಮಾಡಿಕೊಂಡರೆ ದೀರ್ಘಾವಧಿಯಾಗಿ ರಬ್ಬರ್‌ ಉಳಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಇಳುವರಿಯನ್ನೂ ತೆಗೆಯಲು ಸಾಧ್ಯ ಎಂಬುದನ್ನು ಮುಳ್ಳಂಕೊಚ್ಚಿಯ ಮುರಳಿ ಸುಬ್ಬರಾವ್‌ ಹೇಳುತ್ತಾರೆ.

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಬೆಳ್ಳೆಚ್ಚಾಲು ಪ್ರದೇಶದ ಮುಳ್ಳಂಕೊಚ್ಚಿ ದಿವಂಗತ ಗೋವಿಂದ ಭಟ್ಟರು ಸುಮಾರು 1981 ರಲ್ಲಿ ರಬ್ಬರ್‌ ಪ್ಲಾಂಟೇಶನ್‌ ಮಾಡಿದ್ದರು. ಇಂದಿಗೂ ಈ ಮರಗಳನ್ನು ಟ್ಯಾಪಿಂಗ್‌ ಮಾಡಲಾಗುತ್ತಿದೆ, ಉತ್ತಮ ಇಳುವರಿಯೂ ಲಭ್ಯವಾಗುತ್ತಿದೆ. ಈಗ ಕಳೆದ 3 ವರ್ಷಗಳಿಂದ ದಿವಂಗತ ಗೋವಿಂದ ಭಟ್ಟರ ಪುತ್ರ  ಮುರಳಿ ಸುಬ್ಬರಾವ್‌ ಅವರು ಕೃಷಿಯನ್ನು ಮುನ್ನಡೆಸುತ್ತಿದ್ದಾರೆ. ಕೃಷಿಯಲ್ಲಿ ಮಾಡಿಕೊಂಡಿರುವ ಮಾರ್ಪಾಡುಗಳೇ ಈ ಇಳುವರಿಗೆ ಕಾರಣ ಎನ್ನುತ್ತಾರೆ.…..ಮುಂದೆ ಓದಿ….

Advertisement

ಮುರಳಿ ಅವರು ಹೇಳುವಂತೆ,

1981 ರ ಮಳೆಗಾಲ ರಬ್ಬರ್‌ ಪ್ಲಾಂಟೇಶನ್‌ ನನ್ನ ತಂದೆ ಗೋವಿಂದ ಭಟ್‌ ಮಾಡಿದ್ದರು. ಆಗ ರಬ್ಬರ್‌ ಬೋರ್ಡ್‌ ದೂರದಲ್ಲಿತ್ತು. ಅಲ್ಲಿಂದ ಮಾಹಿತಿ ಪಡೆದುಕೊಂಡು ಬಂದು ಇಲ್ಲಿ ರಬ್ಬರ್‌ ಕೃಷಿಯನ್ನು ಮಾಡಿದ್ದರು. ನೀರು ಕಡಿಮೆ ಇರುವ ಜಾಗ ಇದಾಗಿತ್ತು. ಇದಕ್ಕಾಗಿ ನೀರು ಆಶ್ರಯ ಕಡಿಮೆ ಇರುವ ಕೃಷಿಯೇ ಆಗಬೇಕೆಂದು ರಬ್ಬರ್‌ ಆಯ್ಕೆ ಮಾಡಿಕೊಂಡಿದ್ದರು. ಕರ್ನಾಟಕ-ಕೇರಳ ಗಡಿಭಾಗದ ಇಲ್ಲಿ ರಬ್ಬರ್‌ ಕೃಷಿ ಮಾಡುವುದು ಆಗ ಸಾಹಸದ ಕೆಲಸವೇ ಆಗಿತ್ತು. ಆ ಸವಾಲುಗಳನ್ನು ದಾಟಿ ತಂದೆಯವರು ರಬ್ಬರ್‌ ಕೃಷಿಯನ್ನು ಮುನ್ನಡೆಸಿದ್ದರು. ಆಗ ರಬ್ಬರ್‌ ಗಿಡಗಳ ತಳಿ ಆಯ್ಕೆಯೂ ನಮಗೆ ಸವಾಲಿನ ಕೆಲಸವೂ ಆಗಿತ್ತು. ಅಂತಹ ಸಂದರ್ಭದಲ್ಲಿ ರಬ್ಬರ್‌ ಸಸಿಗಳನ್ನು ಏರ್ಪಾಡು ಮಾಡಿ , ಮುಂದಿನ ನಿರ್ಬಹಣೆಗಳ ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿಕೊಟ್ಟವರು ಕೃಷಿಕ ಸಂಕೇಶ ಕಜೆ ಕೃಷ್ಣಮೂರ್ತಿ ಅವರು. ಅಂದು ಅವರು ಆಯ್ಕೆ ಮಾಡಿ ಕೊಟ್ಟಿರುವ ರಬ್ಬರ್‌ ಗಿಡಗಳ ಕಾರಣದಿಂದಲೂ ನಮ್ಮ ರಬ್ಬರ್‌ ಕೃಷಿ ಯಶಸ್ವಿಯಾಯಿತು.
ಸಾಮಾನ್ಯವಾಗಿ ಒಂದು ತಲೆಮಾರಿಗೆ ರಬ್ಬರ್‌ ಕೃಷಿ ಎಂದು ಹೇಳುತ್ತಾರೆ. ಅಂದರೆ ಸಾಮಾನ್ಯವಾಗಿ 20-25 ವರ್ಷ ಇಳುವರಿ ನೀಡುತ್ತದೆ. ನಂತರ ಮರ ಕಟಾವು ಮಾಡಿ ಮರು ನಾಟಿ ಮಾಡಬೇಕು ಎನ್ನುತ್ತಾರೆ. ಆದರೆ ಇಲ್ಲಿ ಈಗಲೂ ಅದೇ ಮರವನ್ನು ಟ್ಯಾಪಿಂಗ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ನಾವು ಮಾಡಿಕೊಂಡಿರುವ ಕೆಲವು ಮಾರ್ಪಾಡುಗಳು ಕಾರಣ. 7 ದಿನಕ್ಕೊಂದು ಟ್ಯಾಪಿಂಗ್‌, ಔಷಧಿಯನ್ನು ಹಚ್ಚಿ ಟ್ಯಾಪಿಂಗ್‌ ಮಾಡುವುದು ಮತ್ತು ಇತರ ಕೆಲವು ಮಾರ್ಪಾಡುಗಳು ಕಾರಣವಾಗಿದೆ. ಈ ರೀತಿ ಮಾರ್ಪಾಡಿನ ಕಾರಣದಿಂದ ವರ್ಷಕ್ಕೆ 6 ಇಂಚು ಮಾತ್ರವೇ ಮರ ಟ್ಯಾಪಿಂಗ್‌ ಮಾಡಿ ಮುಗಿಯುತ್ತದೆ.ಹೆಚ್ಚಿನ ಇಳುವರಿ ಇದೆ, ರೋಗಗಳು ಕಡಿಮೆ ಇದೆ. ಕೆಲಸ ಕಡಿಮೆ ಇದೆ  ಕೆಲಸದ ಅವಧಿ ಹೆಚ್ಚು ಇರುತ್ತದೆ.

ರಬ್ಬರ್‌ ಕೃಷಿಯಲ್ಲಿ ಇಂತಹದ್ದೊಂದು ಮಾರ್ಪಾಡುಗಳನ್ನು ಮಾಡಿಕೊಂಡಿರುವ ಕಾರಣದಿಂದ ರಬ್ಬರ್‌ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ ಮುಳ್ಳಂಕೊಚ್ಚಿಯ ಮುರಳಿ ಸುಬ್ಬರಾವ್‌. ಯಾವುದೇ ಕೃಷಿಯಲ್ಲೂ ಆದಾಯದ ಮಾದರಿಗಳನ್ನು ಸರಿಯಾಗಿ ಮಾಡಿಕೊಂಡರೆ ಕೃಷಿಯೂ ಯಶಸ್ವಿ, ಸೋಲು ಇಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುರಳಿ ಹಾಗೂ ಅವರ ತಂದೆಯವರ ಪ್ರಯೋಗ ಸ್ತುತ್ಯರ್ಹ. (ಹೆಚ್ಚಿನ ಮಾಹಿತಿಗೆ ವಿಡಿಯೋ ಇದೆ…)

In recent years, rubber cultivation has been on the rise along the border of Kerala and Karnataka. However, there have been few new experiments in rubber cultivation in Karnataka. Murali Subbarao from Mullankochi in the Bellechalu area of Kasaragod district has introduced innovative changes in rubber cultivation, resulting in higher yields.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ

ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ

ಮಂಗಳೂರು ತಾಲೂಕಿನ ಎಲ್ಲಾ ಗ್ರಾಮಗಳು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ…

9 hours ago

ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ

ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡ ರೈತರ ತಾಲೂಕಿನಲ್ಲಿ ವಿಮೆ ಮಾಡಿಸಲಾಗಿರುವ…

9 hours ago

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |

ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಪ್ರಮುಖವಾಗಿ ಕುಮುಟಾ ಮತ್ತು ಅಂಕೋಲಾದಲ್ಲಿ…

9 hours ago

ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ

ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಡಾ. ಎಂ.ಎಚ್ ಮರೀಗೌಡ ಸಭಾಂಗಣದಲ್ಲಿ  ಮೂರು ದಿನಗಳ…

9 hours ago

ಸುಳ್ಯದಲ್ಲಿ ಜೇನು ಚಾಕಲೇಟ್ ಬಿಡುಗಡೆ | ಜೇನಿನಿಂದಲೇ ಚಾಕಲೇಟ್ ಉತ್ತಮ ಬೆಳವಣಿಗೆ – ಶೋಭಾ ಕರಂದ್ಲಾಜೆ

ಜೇನು ಕೃಷಿ ಲಾಭದಾಯಕವಾಗಿದ್ದು, ರೈತರು ಈ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೇಂದ್ರ…

9 hours ago