ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳ ಎದುರು ಈಜಲಾಗದೇ ಮುಳುಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ಗದಗ ತಾಲೂಕಿನ ಬಾಳೆಹೊಸೂರು ನಿವಾಸಿ ಬಸವರಾಜ (35) ರಕ್ಷಣೆಗೊಳಗಾದ ಪ್ರವಾಸಿಗ.
ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿರುವ ಬಸವರಾಜ ಅವರು ಧರ್ಮಸ್ಥಳದಿಂದ ಮುರ್ಡೇಶ್ವರಕ್ಕೆ ಪ್ರವಾಸಿಗರನ್ನು ಕರೆತಂದಿದ್ದರು. ಕಡಲ ತೀರದಲ್ಲಿ ಬಸ್ ನಿಲ್ಲಿಸಿ ಸಮುದ್ರದಲ್ಲಿ ಈಜಾಡಲು ತೆರಳಿದ್ದು, ಈ ವೇಳೆ ಅಪ್ಪಳಿಸಿದ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಹಂತ ತಲುಪಿದ್ದರು. ಸಮುದ್ರದಲ್ಲಿ ಮುಳುಗುತ್ತಿದ್ದುದನ್ನು ಗಮನಿಸಿದ ಬೀಚ್ ಲೈಫ್‌ಗಾರ್ಡ್ ಶೇಖರ ದೇವಾಡಿಗ, ವಿಘ್ನೇಶ್ ಹರಿಕಂತ್ರ ಹಾಗೂ ಪ್ರವೀಣ್ ಓಶಿಯನ್ ಅಡ್ವೆಂಚರ್ ಬೋಟಿನ ಸಿಬ್ಬಂದಿ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel