ಕೃಷಿಕನ ಸತತ ಪ್ರಯತ್ನದ ಫಲ | ಬೆಳಕಿಗೆ ಬಂದ ಹೊಸ ಖಾದ್ಯ ಅಣಬೆ ಪ್ರಭೇದ | ಅಂತರಾಷ್ಟ್ರೀಯ ಫುಡ್‌ ಜರ್ನಲ್‌ನಲ್ಲಿ ದಾಖಲು |

May 24, 2024
11:21 PM
ಭಾರತದ ವಿಶೇಷವಾದ ಅಣಬೆ ಪ್ರಬೇಧವೊಂದನ್ನು ಕೃಷಿಕ ಹರೀಶ ರೈ ದೇರ್ಲ ಅವರ ಸತತ ಪ್ರಯತ್ನದ ಫಲವಾಗಿ ಅಂತರಾಷ್ಟ್ರೀಯ ಫುಡ್‌ ಜರ್ನಲ್‌ ನಲ್ಲಿ(EJFA) ದಾಖಲಾಗುವಂತೆ ಮಾಡಿದ್ದಾರೆ.

ಪುತ್ತೂರಿನ ಮುಡಿಪಿನಡ್ಕದ ಕೃಷಿಕ ಹರೀಶ್ ರೈ ದೇರ್ಲ ಅವರು ತಮ್ಮ ಸತತ ಪ್ರಯತ್ನ ಹಾಗೂ ಸಿಪಿಸಿಆರ್‌ಐ ವಿಜ್ಞಾನಿಗಳ ಅಧ್ಯಯನದ ಕಾರಣದಿಂದ  ಭಾರತದ ವಿಶೇಷವಾದ ಅಣಬೆ ಪ್ರಭೇದವೊಂದನ್ನು ಅಂತರಾಷ್ಟ್ರೀಯ ಫುಡ್‌ ಜರ್ನಲ್‌ ನಲ್ಲಿ(EJFA) ದಾಖಲಾಗುವಂತೆ ಮಾಡಿದ್ದಾರೆ. …….ಮುಂದೆ ಓದಿ…..

Advertisement

ಪುತ್ತೂರಿನ ತಾಲೂಕಿನ ಮುಡಿಪಿನಡ್ಕದ ಕೃಷಿಕ  ಹರೀಶ್‌ ರೈ ಅವರು ಅಡಿಕೆ ಸಿಪ್ಪೆಯ ಮೂಲಕ  ನಿರ್ದಿಷ್ಟ ಪ್ರಭೇದದ ಅಣಬೆ ತಳಿಯನ್ನು ಕಳೆದ ಸುಮಾರು ಒಂದು ವರ್ಷದಿಂದ ಬೆಳೆಸುತ್ತಿದ್ದಾರೆ. ಇದೀಗ 24 ನೇ ಬ್ಯಾಚ್‌ ಮುಗಿಸಿದ್ದಾರೆ.  ಅನೇಕ ವರ್ಷಗಳಿಂದ ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಅಣಬೆಯನ್ನು ಹರೀಶ್‌ ರೈ ಅವರ ಮಿತ್ರರೊಬ್ಬರು ಬಳಕೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದುಕೊಂಡು ತಾವೂ ಬೆಳೆಯಲು ಆರಂಭ ಮಾಡಿದರು. ಅಡಿಕೆ ಸಿಪ್ಪೆಯನ್ನು ಕೊಳೆಯಲು ಹಾಕುವ ವೇಳೆ ಅದರಲ್ಲಿ ಬರುವ ಅಣಬೆಯು ಬಹಳ ಅತ್ಯುತ್ತಮ ಆಹಾರವಾಗಿದೆ. ಹೀಗಾಗಿ ಈ ಬಗ್ಗೆ ಬೆಳೆಯವುದರ ಕಡೆಗೆ ಆಸಕ್ತರಾದರು. …….ಮುಂದೆ ಓದಿ…..

ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಈ ಪ್ರಭೇದದ ಅಣಬೆಯ ಬಗ್ಗೆ ವಿಟ್ಲ ಮತ್ತು ಕಾಸರಗೋಡಿನ  ಸಿಪಿಸಿಆರ್‌ ಐ  ಸಂಶೋಧಕರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಕೆಲವು ಸಮಯಗಳ ಕಾಲ ಸೂಕ್ಷ್ಮವಾಗಿ ಗಮನಿಸಿ ಅಡಿಕೆ ಸಿಪ್ಪೆಯಲ್ಲಿ ಬೆಳೆಯುತ್ತಿರುವ ಕಾಪ್ರಿನೋಪ್ಸಿಸ್ ಸಿನೆರಿಯಾ ಎಂಬ  ಖಾದ್ಯ ಅಣಬೆ ಪ್ರಭೇದವನ್ನು ಗುರುತಿಸಿದ್ದಾರೆ.

ಈ ಅಧ್ಯಯನ ಹಾಗೂ ಕೃಷಿಕರ ಪ್ರಯತ್ನವು, ಸಂಶೋಧನೆಗಳನ್ನು ಅಂತರಾಷ್ಟ್ರೀಯ ಮಟ್ಟದ ಎಮಿರೇಟ್ಸ್ ಜರ್ನಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್‌ನಲ್ಲಿ ದಾಖಲಿಸಲಾಗಿದೆ. ಕಾಪ್ರಿನೋಪ್ಸಿಸ್ ತಳಿಯ ಅಣಬೆಯು ಸಾವಯವ ವಸ್ತು ಕೊಳೆಯುವಲ್ಲಿ ಅದರ ಪರಿಸರ ಪ್ರಾಮುಖ್ಯತೆಗಾಗಿ ಬೆಳೆಯುತ್ತದೆ. ಇದು ಖಾದ್ಯವಾಗಿ ಬಳಕೆ ಮಾಡಬಹುದಾಗಿದೆ.…….ಮುಂದೆ ಓದಿ…..

ಸತತವಾಗಿ 24 ಬ್ಯಾಚು ಅಣಬೆ ಕೃಷಿ ಮಾಡುವ ಮೂಲಕ ಒಂದು ವರ್ಷದ ಪೂರ್ತಿ ಅವಧಿಯಲ್ಲಿ ಅಡಿಕೆ ಸಿಪ್ಪೆಯಿಂದ ಅಣಬೆ ಬೆಳೆಸಿರುವ ಹರೀಶ್‌ ರೈ ಅವರು, ಮನೆಗೆ ತರಕಾರಿಯಾಗಿ ಈ ಅಣಬೆಯನ್ನು ಬೆಳೆಯಲು ಸಾಧ್ಯವಿದೆ. ಯಾವುದೇ ಹೆಚ್ಚಿನ ಆರೈಕೆ ಅಗತ್ಯವಿಲ್ಲ ಎಂದು ಹೇಳುತ್ತಾರೆ.  ಕುತೂಹಲಕಾರಿಯಾದ ಅಂಶವೆಂದರೆ, ಇಲ್ಲಿ ಅಣಬೆ ಬೆಳೆಯಲು ಯಾವುದೇ ಬೀಜ ನಾಟಿ ಮಾಡಬೇಕಾಗಿಲ್ಲ. ಆ ಕೆಲಸವನ್ನು ಪ್ರಕೃತಿಯೇ ಮಾಡುತ್ತದೆ. ಹೀಗಾಗಿ ಈ ಕೃಷಿಯು ಹೆಚ್ಚಿನ ಗಮನ ಸೆಳೆದಿದೆ. ಈ ಕಾರಣದಿಂದಲೇ ವಿವಿಧ ಕ್ಷೇತ್ರಗಳ ವಿಜ್ಞಾನಿಗಳ ಗಮನವೂ ಸೆಳೆದಿವೆ ಈ ಅಣಬೆ.

ತಿನ್ನಬಹುದಾದ ಅಣಬೆ ಇದಾದ್ದರಿಂದ , ವಾಣಿಜ್ಯ ಉದ್ದೇಶಕ್ಕಾಗಿ ಹೇಗೆ ಬಳಕೆ ಮಾಡಬಹುದು ಎನ್ನುವುದರ ಬಗ್ಗೆ ಇನ್ನಷ್ಟೇ ಚಿಂತನೆ, ಪ್ರಯತ್ನ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಈ ಅಣಬೆಯೂ  ರೆಸ್ಟೋರೆಂಟ್‌ ಪ್ರವೇಶಿಸಲು ಕೆಲಸ ನಡೆಯಬೇಕಿದೆ.

ಹೀಗಾಗಿ ವಿಜ್ಞಾನಿಗಳು ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುತ್ತಿದ್ದು, ಅಣಬೆ ಸರಿಯಾಗಿ ಬೆಳೆಯಲು ಹಾಗೂ ಪೋಷಕಾಂಶಗಳನ್ನು ಹೇಗೆ ನೀಡಬಹುದು ಇತ್ಯಾದಿಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ ಎಂದು ಜರ್ನಲ್‌ನಲ್ಲಿ  ಉಲ್ಲೇಖಿಸಲಾಗಿದೆ. …….ಮುಂದೆ ಓದಿ…..

 

283 ಕಾಡು ಖಾದ್ಯ ಅಣಬೆಗಳಿಗೆ ನೆಲೆಯಾಗಿರುವ ಭಾರತವು ವಿಶ್ವದ 2000 ಕಾಡು ಖಾದ್ಯ ಅಣಬೆಗಳ ಪ್ರಭೇದವನ್ನು ಹೊಂದಿವೆ.  ಹೀಗಾಗಿ ಅಡಿಕೆ ಸಿಪ್ಪೆಯ ಅಣಬೆಯು ಖಾದ್ಯವಾಗಿ ಬಳಕೆ ಮಾಡಬಹುದು ಎನ್ನುವುದು ಈಗ ಹೆಚ್ಚಿನ ಮಹತ್ವ ಪಡೆದಿದೆ.  ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಅಣಬೆಯ ಜನಪ್ರಿಯತೆಯ ಪರಿಣಾಮವಾಗಿ ಸಸ್ಯಾಹಾರದ ಮಾದರಿಯನ್ನು ನಿರೀಕ್ಷೆ ಮಾಡುತ್ತಿದ್ದಾರೆ.

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

223 ಕಾಡ್ಗಿಚ್ಚು ಘಟನೆ – 130 ಹೆಕ್ಟೇರ್ ಅರಣ್ಯ ನಾಶ
March 30, 2025
11:24 PM
by: The Rural Mirror ಸುದ್ದಿಜಾಲ
ಜಲಸಂರಕ್ಷಣೆಯ ಮಾದರಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ | 8 ವರ್ಷಗಳಲ್ಲಿ ದೇಶದಲ್ಲಿ 11 ಶತಕೋಟಿ ಘನ ಮೀಟರ್ ನೀರು ಸಂರಕ್ಷಣೆ |
March 30, 2025
10:20 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ | ಯುಗಾದಿಗೆ ರೈತರಿಗೆ ಕೊಡುಗೆ |
March 30, 2025
9:53 PM
by: The Rural Mirror ಸುದ್ದಿಜಾಲ
‘ಪರಿಸರ-2025’ ರಾಷ್ಟ್ರೀಯ ಸಮ್ಮೇಳನ | ಉಸಿರಾಡುವ  ಗಾಳಿ , ಕುಡಿಯುವ ನೀರು ,  ಪಕ್ಷಿಗಳ ಕೂಗಿನ ಬಗ್ಗೆ ಯೋಚಿಸುವ ಅಗತ್ಯವಿದೆ
March 30, 2025
9:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group