ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ, 3F ಆಯಿಲ್ ಕಂಪೆನಿ ಇದರ ಜಂಟಿ ಆಶ್ರಯದಲ್ಲಿ “ಅಣಬೆ ಕೃಷಿ ಮಾಹಿತಿ, ತಾಳೆ ಬೆಳೆ ಹಾಗೂ ರೇಷ್ಮೆ ಮತ್ತು ತೋಟಗಾರಿಕಾ ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ” ಸಂಜೀವಿನಿ ಕಟ್ಟಡ ಅಡ್ಕಾರಿನಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಒಕ್ಕೂಟ ಅಧ್ಯಕ್ಷೆ ಕುಸುಮಾವತಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ಅಡ್ಕಾರು, 3F ಆಯಿಲ್ ಕಂಪೆನಿ ಏರಿಯಾ ಮ್ಯಾನೇಜರ್ ಕೃಷ್ಣಾ ವೈ. ಟಿ., ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತ ಎನ್ (ಎನ್.ಆರ್.ಎಲ್.ಎಂ.), BRP PRI ಜಯಲಕ್ಷ್ಮೀ (ತಾಲೂಕು ಪಂಚಾಯತ್, ಸುಳ್ಯ) ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ವಿಟ್ಲದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕೃಷಿ ಇಲಾಖೆಯಿಂದ ತರಬೇತಿ ಪಡೆದ ಜಾಲ್ಸೂರು, ಆಲೆಟ್ಟಿ, ಮಡಪ್ಪಾಡಿ, ಕನಕಮಜಲು ಹಾಗೂ ಸಂಪಾಜೆ ಗ್ರಾಮದ ಕೃಷಿ ಸಖಿಯರು ರೈತರು ಮತ್ತು ಮಹಿಳಾ ಸದಸ್ಯರಿಗೆ ಅಣಬೆ ಕೃಷಿಯ ಪ್ರಾತ್ಯಕ್ಷಿಕೆ ಮೂಲಕ ಸಂಪೂರ್ಣ ಮಾಹಿತಿ ನೀಡಿ, ತೋಟಗಾರಿಕೆ, ಎಫ್ ಪಿ ಓ, ಕೃಷಿ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಈ ಸಂದರ್ಭ ಆಲೆಟ್ಟಿಯ ಯುವ ರೈತರಾದ ಆಕಾಶ್ ಅವರು ಕೃಷಿ ಸಖಿಯರಿಗೆ ತಾಂತ್ರಿಕ ಮಾಹಿತಿ ನೀಡಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಮಾದಕ ಮುಕ್ತ ಕರ್ನಾಟಕ ಅಭಿಯಾನ ಕುರಿತು ಮಾಹಿತಿ ನೀಡಲಾಗಿದ್ದು, BRP PRI ಜಯಲಕ್ಷ್ಮೀ ಅವರಿಂದ ಪ್ರತಿಜ್ಞೆ ಬೋಧನೆ ನಡೆಯಿತು. ಕಾರ್ಯಕ್ರಮದಲ್ಲಿ MBK, LCRP, ಕೃಷಿ ಸಖಿಯರು, ಪದಾಧಿಕಾರಿಗಳು, ಸದಸ್ಯರು, VRW ಹಾಗೂ ರೈತರು ಉಪಸ್ಥಿತರಿದ್ದರು.
MBK ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಸವಿತಾ ಸ್ವಾಗತಿಸಿದರು, ವಿಜಯ ಕೃಷಿ ಸಖಿ ವಂದಿಸಿದರು.


